ಅಮೆರಿಕದ ರಾಬರ್ಟ್ ಹಾಲ್, ಮೈಕೆಲ್ ವುಡ್ಫೋರ್ಡ್ಗೆ ಅರ್ಥಶಾಸ್ತ್ರದ ನೊಬೆಲ್
ಸ್ಟಾಕ್ಹೋಮ್: 2026ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಸೋಮವಾರ ಘೋಷಣೆಯಾಗಿದೆ. ಅಮೆರಿಕದ ರಾಬರ್ಟ್ ಹಾಲ್, ಮೈಕೆಲ್ ವುಡ್ಫೋರ್ಡ್ ‘ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.ಸ್ಟಾಕ್ಹೋಮ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದಿ ರಾಯಲ್ ಸ್ಟೀಡಿಸ್ ಅಕಾಡೆಮಿ ಸೈನ್ಸಸ್’ ಸಂಸ್ಥೆಯವರು ವಿಜೇತರ ಹೆಸರನ್ನು ಪ್ರಕಟಿಸಿದರು.‘ಸೂಕ್ಷ್ಮ ಆರ್ಥಿಕತೆಯ

ಸ್ಟಾಕ್ಹೋಮ್: 2026ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಸೋಮವಾರ ಘೋಷಣೆಯಾಗಿದೆ. ಅಮೆರಿಕದ ರಾಬರ್ಟ್ ಹಾಲ್, ಮೈಕೆಲ್ ವುಡ್ಫೋರ್ಡ್ ‘ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.ಸ್ಟಾಕ್ಹೋಮ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದಿ ರಾಯಲ್ ಸ್ಟೀಡಿಸ್ ಅಕಾಡೆಮಿ ಸೈನ್ಸಸ್’ ಸಂಸ್ಥೆಯವರು ವಿಜೇತರ ಹೆಸರನ್ನು ಪ್ರಕಟಿಸಿದರು.‘ಸೂಕ್ಷ್ಮ ಆರ್ಥಿಕತೆಯ ಅಡಿಪಾಯಕ್ಕಾಗಿ ಸ್ಥೂಲ ಆರ್ಥಿಕತೆಯ ಸ್ಥಿರೀಕರಣ’ ಕುರಿತಾದ ಸಂಶೋಧನೆಗಾಗಿ ರಾಬರ್ಟ್ ಹಾಲ್ ಮತ್ತು ಮೈಕೆಲ್ ವುಡ್ಫೋರ್ಡ್ ಅವರನ್ನು ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಸಮಿತಿಯು ತಿಳಿಸಿದೆ.ಪ್ರಶಸ್ತಿ ವಿಜೇತರು 12 ಮಿಲಿಯನ್ ಸ್ವೀಡಿಸ್ ಕ್ರೊನೊರ್ (₹11.57 ಕೋಟಿ) ನಗದು, ಚಿನ್ನದ ಪದಕವನ್ನು ಜಂಟಿಯಾಗಿ ಹಂಚಿಕೊಳ್ಳಲಿದ್ದಾರೆ.BREAKING NEWSThe Royal Swedish Academy of Sciences has decided to award the 2026 Sveriges Riksbank Prize in Economic Sciences in Memory of Alfred Nobel to Robert E. Hall and Michael Woodford “for microeconomic foundations of macroeconomic stabilisation.”#NobelPrize pic.twitter.com/2i7ktB1Q2b— The Nobel Prize (@NobelPrize) October 12, 2026 ಹಿಂದಿನ ಬಹುಪಾಲು ಪುರಸ್ಕೃತರು ಅಮೆರಿಕ ಮೂಲದವರಾಗಿದ್ದಾರೆ. ಇದುವರೆಗೆ ಕೇವಲ ಮೂವರು ಮಹಿಳೆಯರು ಮಾತ್ರ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.2025ರಲ್ಲಿ ಅಮೆರಿಕದ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ಜೋಯೆಲ್ ಮೊಕೀರ್, ಕಾಲೇಜ್ ಡಿ ಫ್ರಾನ್ಸ್ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಫಿಲಿಪ್ ಅಘಿಯಾನ್ ಮತ್ತು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಪೀಟರ್ ಹೊವಿಟ್ ಅವರು ‘ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದರು.‘ನಾವೀನ್ಯದೊಂದಿಗೆ ಆರ್ಥಿಕ ಬೆಳವಣಿಗೆ’ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜೋಯೆಲ್ ಮೊಕೀರ್, ಫಿಲಿಪ್ ಅಘಿಯಾನ್, ಪೀಟರ್ ಹೊವಿಟ್ ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು.ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ವಿಭಾಗಗಳ ನೊಬೆಲ್ ಪ್ರಶಸ್ತಿಗಳನ್ನು ಕಳೆದ ವಾರ ಘೋಷಿಸಲಾಗಿತ್ತು.