ಪ್ರತಿಭಟನಾ ತಾಣವನ್ನಲ್ಲ, ಜನರ ಧ್ವನಿಯನ್ನೇ ಹತ್ತಿಕ್ಕುವ ಯತ್ನ: ಕೇಂದ್ರದ ವಿರುದ್ಧ ದೀಪ್ಕೆ ಕಿಡಿ
ನವದೆಹಲಿ: ಪ್ರತಿಭಟನಾ ತಾಣವನ್ನಲ್ಲ, ಜನರ ಧ್ವನಿಯನ್ನೇ ಹತ್ತಿಕ್ಕುವ ಯತ್ನ ಎಂದು ಕಾಕ್ರೋಚ್ ಜನತಾ ಪಾರ್ಟಿ(CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ(Abhijeet Dipke) ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರ ರಾಜಧಾನಿಯ ಐತಿಹಾಸಿಕ ಜಂತರ್ ಮಂತರ್(Jantar Mantar) ಅನ್ನು ಪ್ರತಿಭಟನಾ ಸ್ಥಳಗಳ(Protest Site) ಪಟ್ಟಿಯಿಂದ ರದ್ದುಗೊಳಿಸಿರುವ ಕೇಂದ್

ನವದೆಹಲಿ: ಪ್ರತಿಭಟನಾ ತಾಣವನ್ನಲ್ಲ, ಜನರ ಧ್ವನಿಯನ್ನೇ ಹತ್ತಿಕ್ಕುವ ಯತ್ನ ಎಂದು ಕಾಕ್ರೋಚ್ ಜನತಾ ಪಾರ್ಟಿ(CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ(Abhijeet Dipke) ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರ ರಾಜಧಾನಿಯ ಐತಿಹಾಸಿಕ ಜಂತರ್ ಮಂತರ್(Jantar Mantar) ಅನ್ನು ಪ್ರತಿಭಟನಾ ಸ್ಥಳಗಳ(Protest Site) ಪಟ್ಟಿಯಿಂದ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಿಟ್ಟು ವ್ಯಕ್ತಪಡಿಸಿದ್ದಾರೆ. Modi is against the very idea of Protest. https://t.co/eokp693n1r — Cockroach Janta Party – CJP (@Cockroachisback) October 12, 2026 ಸರ್ಕಾರಕ್ಕೆ ಜಂತರ್ ಮಂತರ್ ಸ್ಥಳದ ಬಗ್ಗೆ ತಕರಾರಿಲ್ಲ, ಬದಲಾಗಿ ತಮ್ಮ ವಿರುದ್ಧ ಜನ ಪ್ರತಿಭಟಿಸುತ್ತಾರೆ ಎಂಬುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಒಬ್ಬ ಸರ್ವಾಧಿಕಾರಿಗೆ ಜನ ತನ್ನ ವಿರುದ್ಧ ಧ್ವನಿ ಎತ್ತುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಜಂತರ್ ಮಂತರ್ನಲ್ಲಿ ಪ್ರತಿಭಟನೆಯೇ ಬಂದ್! Today, Modi denotified Jantar Mantar as a designated protest site. Tomorrow, he will denotify democracy itself. The dictator’s problem was never the protest site. It was the very idea of people protesting. — Abhijeet Dipke (@abhijeet_dipke) October 12, 2026 ಇಂದು ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಲ್ಲವೆಂದು ರದ್ದುಗೊಳಿಸಿರುವ ಸರ್ಕಾರ, ಮುಂದೊಂದು ದಿನ ಈ ದೇಶದ ಪ್ರಜಾಪ್ರಭುತ್ವವನ್ನೇ ರದ್ದುಗೊಳಿಸಿದರೂ ಆಶ್ಚರ್ಯವಿಲ್ಲ ಎಂದು ಹೇಳಿದರು. ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಪ್ರತಿಯೊಬ್ಬ ನಾಗರಿಕನೂ ಒಗ್ಗೂಡಿ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.