ದೇವದುರ್ಗ: ಸಮರ್ಪಕವಾಗಿ ನೀರು ಹರಿಸಲು ಒತ್ತಾಯಿಸಿ ರಸ್ತೆ ತಡೆದು ರೈತರ ಪ್ರತಿಭಟನೆ
ದೇವದುರ್ಗ: ಅರಕೇರಾ ತಾಲ್ಲೂಕಿನ ಸುಂಕೇಶ್ವರಾಳದ ಬಸವಣ್ಣ ಕ್ಯಾಂಪ್ ಸಮೀಪದ 17ನೇ ಉಪ ಕಾಲುವೆ ಬಳಿ ನೀರಿಗಾಗಿ ರೈತರು ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ದೇವದುರ್ಗ ಮತ್ತು ಅರಕೇರಾ ತಾಲ್ಲೂಕು ವ್ಯಾಪ್ತಿಯ ನಾರಾಯಣಪುರ ಬಲದಂಡೆ ಕಾಲುವೆಯ 16, 17 ಮತ್ತು 18ನೇ ವಿತರಣಾ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನೆಲೆಯಲ್ಲಿ 15 ದಿನಗಳಿಂದ ಹೋರಾಟ ನ

ದೇವದುರ್ಗ: ಅರಕೇರಾ ತಾಲ್ಲೂಕಿನ ಸುಂಕೇಶ್ವರಾಳದ ಬಸವಣ್ಣ ಕ್ಯಾಂಪ್ ಸಮೀಪದ 17ನೇ ಉಪ ಕಾಲುವೆ ಬಳಿ ನೀರಿಗಾಗಿ ರೈತರು ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ದೇವದುರ್ಗ ಮತ್ತು ಅರಕೇರಾ ತಾಲ್ಲೂಕು ವ್ಯಾಪ್ತಿಯ ನಾರಾಯಣಪುರ ಬಲದಂಡೆ ಕಾಲುವೆಯ 16, 17 ಮತ್ತು 18ನೇ ವಿತರಣಾ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನೆಲೆಯಲ್ಲಿ 15 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಅಧಿಕಾರಿಗಳು ಸ್ಪಂದಿಸಿಲ್ಲ. ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರೈತರು ತಿಳಿಸಿದರು.ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪದ ಕಾರಣ ತೊಂದರೆಯಾಗುತ್ತಿದೆ ಎಂದು ದೂರಿದರು.ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಹಲಗೆರ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿ ಬಳಿಕ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನೀರಿನ ಹರಿವನ್ನು 2,400 ಕ್ಯುಸೆಕ್ನಿಂದ 2,750 ಕ್ಯುಸೆಕ್ಗೆ ಹೆಚ್ಚಿಸುವ ಭರವಸೆ ನೀಡಿದ ನಂತರ ರೈತರು ಹೋರಾಟ ಹಿಂಪಡೆದರು.ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ ಇಂಗಳದಾಳ, ರಮೇಶ ಅಬಕಾರಿ ಶರಣಪ್ಪ ಹುಸೇನಪುರ, ಉಮ್ಮಣ್ಣ ನಾಯಕ, ಮಲ್ಲಪ್ಪಗೌಡ, ಮಲ್ಲಪ್ಪ ಪೂಜಾರಿ, ಪೀರ್ ಸಾಬ್, ಶರಬಣ್ಣ ಸಾಹುಕಾರ, ದೊಡ್ಡಪ್ಪ ಗೌಡ, ಬಂದ ಪ್ಪಗೌಡ, ಸುರೇಶಗೌಡ, ಬಸವರಾಜ ನಾಯಕ ಮತ್ತು ಇಂಗಳದಾಳ,, ಹದ್ದಿ ನಾಳ, ಸುಂಕೇಶ್ವರಹಾಳ, ಜಿನ್ನಾಪುರ, ಕೂಡ್ಲಿಗಿ, ಗಬ್ಬೂರು, ಮಲದಕಲ್ ಗ್ರಾಮಗಳ ರೈತರು ಭಾಗವಹಿಸಿದ್ದರು.261012-32-2040007115