ಧರ್ಮಸ್ಥಳ ಯೋಜನೆಯಿಂದ ಸಮಾಜಕ್ಕೆ ಉತ್ತಮ ಸೇವೆ: ಅಶೋಕ್ಕುಮಾರ್ ರೈ
ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಯೋಜನೆ ಹಾಗೂ ವಿವಿಧ ಸೌಲಭ್ಯಗಳ ಮೂಲಕ ಸಮಾಜಕ್ಕೆ ಉತ್ತಮ ಸೇವೆ ನೀಡುವ ಜತೆಗೆ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ದಾರಿ ತೋರಿದೆ. ಮದ್ಯವರ್ಜನ ಶಿಬಿರದ ಮೂಲಕ ಹಲವು ಮಂದಿಗೆ ಮರುಜೀವನ ನೀಡಿದೆ ಎಂದು ಶಾಸಕ ಅಶೋಕ್ಕುಮಾರ್ ರೈ ಹೇಳಿದರು.ತಾಲ್ಲೂಕಿನ ನರಿಮೊಗರು ಮೃತ್ಯುಂಜಯೇಶ್ವರ ದೇವಳದ ಸಭಾಂಗಣದಲ್ಲಿ ಭಾನುವಾ

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಯೋಜನೆ ಹಾಗೂ ವಿವಿಧ ಸೌಲಭ್ಯಗಳ ಮೂಲಕ ಸಮಾಜಕ್ಕೆ ಉತ್ತಮ ಸೇವೆ ನೀಡುವ ಜತೆಗೆ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ದಾರಿ ತೋರಿದೆ. ಮದ್ಯವರ್ಜನ ಶಿಬಿರದ ಮೂಲಕ ಹಲವು ಮಂದಿಗೆ ಮರುಜೀವನ ನೀಡಿದೆ ಎಂದು ಶಾಸಕ ಅಶೋಕ್ಕುಮಾರ್ ರೈ ಹೇಳಿದರು.ತಾಲ್ಲೂಕಿನ ನರಿಮೊಗರು ಮೃತ್ಯುಂಜಯೇಶ್ವರ ದೇವಳದ ಸಭಾಂಗಣದಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೆಮ್ಮಿಂಜೆ ವಲಯದ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಕೆಮ್ಮಿಂಜೆ ವಲಯದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾಲ್ಕುಗೋಡೆಗಳ ಮಧ್ಯೆ ಇದ್ದ ಮಹಿಳೆಯರು ಇಂದು ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಯೋಜನೆಯ ಪಾತ್ರ ಮಹತ್ವದ್ದಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಮಾತನಾಡಿ, ವ್ಯಕ್ತಿ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯಾಗಬೇಕು. ತಾನು ಮುನ್ನಡೆಯಬೇಕು ಎಂದು ಯೋಚಿಸಿ ದೇಶದ ಪ್ರತಿಯೊಬ್ಬ ಪ್ರಜೆಯು ಮುನ್ನಡೆದಾಗ ದೇಶದ ಅಭಿವೃದ್ಧಿ ಸಾಧ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿನೂತನ ಕಾರ್ಯಕ್ರಮಗಳ ಮೂಲಕ ಸಮಾಜದ ವಿಕಾಸದ ಜತೆಗೆ ಧರ್ಮ, ಸಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತಿದೆ ಎಂದರು.ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೆಮ್ಮಿಂಜೆ ವಲಯಾಧ್ಯಕ್ಷ ಸುಂದರ ಬಲ್ಯಾಯ ಅಧ್ಯಕ್ಷತೆ ವಹಿಸಿದ್ದರು.ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಜಿ.ಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಶಶಿಧರ್ ಎಂ, ಕೆಮ್ಮಿಂಜೆ ವಲಯ ಒಕ್ಕೂಟದ ನೂತನ ಅಧ್ಯಕ್ಷ ಉಮೇಶ್, ಪರಮಾರ್ಗ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಬೆಳಿಯಪ್ಪ ಗೌಡ ಕೆಲ್ಕಾರ್, ಶಾಂತಿಗೋಡು ಒಕ್ಕೂಟದ ನಿಕಟಪೂರ್ವ ಅಧಕ್ಷೆ ಅನುರಾಧ ಪ್ರಭು ಶಾಂತಿಗೋಡು ಮಾತನಾಡಿದರು.ನಾಟ್ಯವೈದ್ಯರಾದ ನಾರ್ಣಪ್ಪ ಸಾಲಿಯಾನ್, ಯಮುನಾ ಪುರುಷರಕಟ್ಟೆ, ಪೊಲೀಸ್ ಇಲಾಖೆಗೆ ನೇಮಕಗೊಂಡ ಸುಶ್ಮಿತಾ ಕೆಮ್ಮಿಂಜೆ, ಯೋಜನೆಯ ಮೂಲಕ ಸಾಲ ಪಡೆದು ಅಭಿವೃದ್ಧಿ ಹೊಂದಿದ ಲತಾ ವಿಠಲ ಹಾಗೂ ಶೀನಪ್ಪನಾಯ್ಕ ಅವರನ್ನು ಸನ್ಮಾನಿಸಲಾಯಿತು. ಯೋಜನೆಯ ವಿವಿಧ ಸವಲತ್ತುಗಳ ಪ್ರಮಾಣ ಪತ್ರ ವಿತರಿಸಲಾಯಿತು.ಭಕ್ತಕೋಡಿ ಸೇವಾ ಪ್ರತಿನಿಧಿ ಚಿತ್ರ ಪ್ರಾರ್ಥಿಸಿದರು. ಕೆಮ್ಮಿಂಜೆ ವಲಯದ ಮೇಲ್ವಿಚಾರಕ ಗಿರೀಶ್ ಸ್ವಾಗತಿಸಿದರು. ಶಶಿಧರ ಎಂ ಭಕ್ತಕೋಡಿ, ಉಮೇಶ್ ಪೂಜಾರಿ ವೀರಮಂಗಲ, ಪುಷ್ಪಾ ಅಂಬಟ., ಚೇತನ್ ಕುಮಾರ್ ಕೆಮ್ಮಿಂಜೆ, ವಸಂತ ಪೂಜಾರಿ, ಗಣೇಶ್ ಇದ್ದರು. ನರಿಮೊಗರು ವಲಯದ ಸೇವಾಪ್ರತಿನಿಧಿ ಯಶೋಧ ವರದಿ ವಾಚಿಸಿದರು. ಪರಮಾರ್ಗ ಒಕ್ಕೂಟದ ಚಿದಾನಂದ ವಂದಿಸಿದರು.ಪ್ರಕಾಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.ಷಡ್ಯಂತ್ರ ಬಂದಾಗ ಒಟ್ಟಾಗಿ ವಿರೋಧಿಸಿ: ಶಶಿಕುಮಾರ್ ರೈಸ್ವಾವಲಂಬಿ ಬದುಕಿಗೆ ಸಹಕಾರಿಯಾದ ಗ್ರಾಮಾಭಿವೃದ್ಧಿ ಯೋಜನೆಯ ಸೌಲಭ್ಯಗಳ ಬಗ್ಗೆ ಮೆಲುಕು ಹಾಕುವ ಕೆಲಸವಾಗಬೇಕು. ಯೋಜನೆ ಪುತ್ತೂರಿಗೆ ಬರುವ ಹಿಂದಿನ ಪರಿಸ್ಥಿತಿಯ ಬಗ್ಗೆ ಯೋಚಿಸಬೇಕು. ನಮ್ಮ ಮನೋಭಾವ ಬದಲಾಗಬಾರದು. ನಮ್ಮ ಬೆಳವಣಿಗೆಗೆ ಕಾರಣವಾಗಿರುವ ದಾರಿ ಮರೆಯಬಾರದು. ಯೋಜನೆಯ ವಿರುದ್ಧ ಷಡ್ಯಂತ್ರಗಳು ಬಂದಾಗ ಅಸಡ್ಡೆ ಮಾಡದೇ ಎಲ್ಲರೂ ಒಟ್ಟಾಗಿ ವಿರೋಧಿಸುವ ಮೂಲಕ ಧರ್ಮಾಧಿಕಾರಿಗಳಿಗೆ ಬೆಂಬಲ ಸೂಚಿಸಬೇಕು ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.261012-29-396229074