15 ವರ್ಷಗಳ ಬಳಿಕ ‘ದಿ ಡರ್ಟಿ ಪಿಕ್ಚರ್ 2’ ಸಿನಿಮಾ ಘೋಷಿಸಿದ ಏಕ್ತಾ ಕಪೂರ್!
2011ರಲ್ಲಿ ತೆರೆ ಕಂಡು ಸೂಪರ್ ಹಿಟ್ ಎನಿಸಿಕೊಂಡಿದ್ದ ‘ದಿ ಡರ್ಟಿ ಪಿಕ್ಚರ್’ ಸಿನಿಮಾದ ಸೀಕ್ವೆಲ್ ‘ದಿ ಡರ್ಟಿ ಪಿಕ್ಚರ್ 2’ ನಿರ್ಮಿಸುತ್ತಿರುವುದಾಗಿ ಬಾಲಿವುಡ್ನ ನಿರ್ಮಾಪಕಿ ಏಕ್ತಾ ಕಪೂರ್ ಹೇಳಿದ್ದಾರೆ.‘ಗಂಧಿ ಬಾತ್’ನಂಥ ವೆಬ್ ಸರಣಿ ಹಾಗೂ ಡರ್ಟಿ ಪಿಕ್ಚರ್ ಮಾದರಿಯ ಚಿತ್ರಗಳ ನಿರ್ಮಾಣದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಿರ್ಮಾಪಕಿ ಏಕ್ತಾ ಕಪೂರ್, 15 ವರ್

2011ರಲ್ಲಿ ತೆರೆ ಕಂಡು ಸೂಪರ್ ಹಿಟ್ ಎನಿಸಿಕೊಂಡಿದ್ದ ‘ದಿ ಡರ್ಟಿ ಪಿಕ್ಚರ್’ ಸಿನಿಮಾದ ಸೀಕ್ವೆಲ್ ‘ದಿ ಡರ್ಟಿ ಪಿಕ್ಚರ್ 2’ ನಿರ್ಮಿಸುತ್ತಿರುವುದಾಗಿ ಬಾಲಿವುಡ್ನ ನಿರ್ಮಾಪಕಿ ಏಕ್ತಾ ಕಪೂರ್ ಹೇಳಿದ್ದಾರೆ.‘ಗಂಧಿ ಬಾತ್’ನಂಥ ವೆಬ್ ಸರಣಿ ಹಾಗೂ ಡರ್ಟಿ ಪಿಕ್ಚರ್ ಮಾದರಿಯ ಚಿತ್ರಗಳ ನಿರ್ಮಾಣದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಿರ್ಮಾಪಕಿ ಏಕ್ತಾ ಕಪೂರ್, 15 ವರ್ಷಗಳ ಬಳಿಕ ‘ದಿ ಡರ್ಟಿ ಪಿಕ್ಚರ್’ ಸಿನಿಮಾದ ಸೀಕ್ವಲ್ ತಯಾರಾಗುತ್ತಿರುವ ಬಗ್ಗೆ ಹೇಳಿದ್ದಾರೆ.ಈ ಬಗ್ಗೆ ರಣವೀರ್ ಅಲಹಾಬಾದಿಯಾ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಏಕ್ತಾ ಕಪೂರ್, ‘ನಾನು ಈಗ ನಿರ್ಮಿಸುತ್ತಿರುವ ದೊಡ್ಡ ಚಿತ್ರವೆಂದರೆ ‘ದಿ ಡರ್ಟಿ ಪಿಕ್ಚರ್ 2’. 15 ವರ್ಷಗಳ ನಂತರ ಈ ಸಿನಿಮಾ ಮಾಡುತ್ತಿದ್ದೇನೆ. ಈ ಬಾರಿ, ನಾನು ಹೇಳಲೇಬೇಕಾದ ಒಂದು ಕಥೆ ಇದೆ ಎಂದು ಅನಿಸಿತ್ತು. ‘ದಿ ಡರ್ಟಿ ಪಿಕ್ಚರ್’ ಚಿತ್ರವು ಸಿಲ್ಕ್ ಸ್ಮಿತಾ ಅವರ ಕುರಿತಾದದ್ದಾಗಿತ್ತು. ಲೈಂಗಿಕತೆಯ ವಿಷಯದಲ್ಲಿ ದೃಢವಾಗಿ ನಿಂತಿದ್ದಕ್ಕಾಗಿ ಟೀಕೆಗೊಳಗಾದ ಮಹಿಳೆಯ ಕಥೆ ಅದಾಗಿತ್ತು. ಲೈಂಗಿಕತೆ ಎಂಬುದು ವೈಯಕ್ತಿಕ ಆಯ್ಕೆಯ ವಿಷಯ. ನಾನು ಅವರನ್ನು ಎಂದಿಗೂ ಸಂತ್ರಸ್ತೆಯಂತೆ ನೋಡಿಲ್ಲ, ಬದಲಿಗೆ, ತಮ್ಮ ಲೈಂಗಿಕತೆಯನ್ನು ಸಂಭ್ರಮಿಸಿದ ವ್ಯಕ್ತಿಯಾಗಿಯೇ ನಾನು ಅವರನ್ನು ಕಂಡೆ. ಆ ಚಿತ್ರವು ಅತ್ಯುತ್ತಮ ಯಶಸ್ಸನ್ನು ಕಂಡಿತು. ನನ್ನ ಪಾಲಿಗೆ ‘ದಿ ಡರ್ಟಿ ಪಿಕ್ಚರ್’ ಚಿತ್ರವೇ ಅತ್ಯಂತ ದೊಡ್ಡ ಪ್ರಶಸ್ತಿಯಾಗಿದೆ’ ಎಂದಿದ್ದಾರೆ.ಈ ಬಾರಿ ಸ್ವೀಕ್ವೆಲ್ನಲ್ಲಿ ಕಥೆ ಯಾರ ಬಗ್ಗೆ ಅಥವಾ ಹೇಗಿರಲಿದೆ ಎನ್ನುವ ಬಗ್ಗೆ ಏಕ್ತಾ ಕಪೂರ್ ಗುಟ್ಟು ಬಿಟ್ಟುಕೊಡಲಿಲ್ಲ. ದಕ್ಷಿಣ ಭಾರತದ ನಟಿ ಸಿಲ್ಕ್ ಸ್ಮಿತಾ ಅವರ ಜೀವನದ ಕುರಿತು ನಿರ್ಮಾಣವಾದ ‘ದಿ ಡರ್ಟಿ ಪಿಕ್ಚರ್’ 2011ರ ಡಿ.2ರಂದು ತೆರೆಕಂಡಿತ್ತು. ವಿದ್ಯಾ ಬಾಲನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರ ಜತೆಗೆ ನಾಸಿರುದ್ದೀನ್ ಶಾ, ಇಮ್ರಾನ್ ಹಶ್ಮಿ, ತುಷಾರ್ ಕಪೂರ್ ಕಾಣಿಸಿಕೊಂಡಿದ್ದರು.ಈ ಚಿತ್ರದಲ್ಲಿನ ನಟನೆಗೆ 2012ರಲ್ಲಿ ವಿದ್ಯಾ ಬಾಲನ್ ಅವರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.17 ವರ್ಷಗಳ ಅವಧಿಯಲ್ಲಿ ವಿವಿಧ ಭಾಷೆಗಳ 450 ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ, ಆ ಕಾಲದಲ್ಲಿ ಐಟಂ ಹಾಡುಗಳ ಮೂಲಕ ಮನೆ ಮಾತಾಗಿದ್ದ ಸಿಲ್ಕ್ ಸ್ಮಿತಾ ಅವರು ಏಕಾಂಗಿತನ, ಸಾಲದ ಹೊರೆಯಿಂದ ಖಿನ್ನತೆಗೆ ಜಾರಿ ಚೆನ್ನೈನ ತಮ್ಮ ಮನೆಯಲ್ಲಿ ಸಾವಿಗೆ ಶರಣಾಗಿದ್ದರು.the dirty picture 2 happening.. confirmed by Ekta Kapoor. pic.twitter.com/zCNqt2cybS— ABID KKC ~ GunmaasterG9 ~ (@KkcAbid) October 12, 2026