ಪಾವಗಡ: ಬಿ.ದೊಡ್ಡಹಟ್ಟಿಯಲ್ಲಿ ಕುಡಿಯುವ ನೀರಿಲ್ಲದೆ ಗ್ರಾಮಸ್ಥರ ಪರದಾಟ
ಪಾವಗಡ: ತಾಲ್ಲೂಕಿನ ಬಿ.ದೊಡ್ಡಹಟ್ಟಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು 15 ದಿನಗಳಿಂದಲೂ ಪರದಾಡುತ್ತಿದ್ದಾರೆ.ನೀರಿನ ವಿಚಾರಕ್ಕೆ ಗ್ರಾಮದ ನೀರುಗಂಟಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂಬುದು ಗ್ರಾಮಸ್ಥರ ಆರೋಪ.ಗ್ರಾಮಕ್ಕೆ ತುಂಗಭದ್ರಾ ನೀರನ್ನು ಸ

ಪಾವಗಡ: ತಾಲ್ಲೂಕಿನ ಬಿ.ದೊಡ್ಡಹಟ್ಟಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು 15 ದಿನಗಳಿಂದಲೂ ಪರದಾಡುತ್ತಿದ್ದಾರೆ.ನೀರಿನ ವಿಚಾರಕ್ಕೆ ಗ್ರಾಮದ ನೀರುಗಂಟಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂಬುದು ಗ್ರಾಮಸ್ಥರ ಆರೋಪ.ಗ್ರಾಮಕ್ಕೆ ತುಂಗಭದ್ರಾ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ. ಕೊಳವೆಬಾವಿ ಇದ್ದರೂ ಪೈಪ್ಲೈನ್ ಸಂಪರ್ಕ ಇಲ್ಲದೆ ಪ್ರಯೋಜನವಿಲ್ಲದಾಗಿದೆ.ತುಂಗಭದ್ರಾ ನೀರನ್ನು ಟ್ಯಾಂಕ್ ತುಂಬುವ ಪ್ರಮಾಣದಲ್ಲಿ ಹರಿಸುತ್ತಿಲ್ಲ. ಕೊಳವೆಬಾವಿಗೆ ಪೈಪ್ಲೈನ್ ಸಂಪರ್ಕವನ್ನೂ ನೀಡುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಹೊಲ ಗದ್ದೆಗಳಿಂದ ರೈತರನ್ನು ಕಾಡಿ ಬೇಡಿ ನೀರು ತರಬೇಕಿದೆ. ಜಮೀನುಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಳೆ ಉಳಿಸಲೂ ನೀರಿಲ್ಲ, ನಿಮಗೆಲ್ಲಿ ನೀರು ಕೊಡೋಣ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಿದರೂ ಪ್ರಯೋಜನವಾಗಿಲ್ಲ. ಶೀಘ್ರ ಕೊಳವೆ ಬಾವಿಯಿಂದ ಓವರ್ಹೆಡ್ ಟ್ಯಾಂಕ್ಗೆ ಪ್ರತ್ಯೇಕ ಪೈಪ್ಲೈನ್ ಸಂಪರ್ಕ ಕಲ್ಪಿಸಬೇಕು. ತುಂಗಭದ್ರಾ ಯೋಜನೆಯ ಮೂಲಕ ಗ್ರಾಮಕ್ಕೆ ಸಾಕಾಗುವಷ್ಟು ನೀರು ಹರಿಸಬೇಕು ಎಂದು ನರಸಿಂಹರಾಜು, ದೇವರಾಜು, ಪ್ರಸನ್ನಕುಮಾರ್, ಕನಕಪ್ಪ, ಮಲ್ಲಯ್ಯ, ನವೀನ್ ಕುಮಾರ್ ಒತ್ತಾಯಿಸಿದ್ದಾರೆ.261012-17-268838534