ಬೆಂಗಳೂರು | ಹಳಿಗೆ ಹಾರಿದ ವ್ಯಕ್ತಿ: ಮೆಟ್ರೊ ಸಂಚಾರ ವ್ಯತ್ಯಯ
ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಸೋಮವಾರ ದೀಪಾಂಜಲಿ ನಗರ ಮತ್ತು ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳ ನಡುವಿನ ಹಳಿಗೆ ವ್ಯಕ್ತಿಯೊಬ್ಬರು ಹಾರಿದ್ದರಿಂದ ಮೆಟ್ರೊ ಸಂಚಾರ ವ್ಯತ್ಯಯಗೊಂಡಿತು.ರಾತ್ರಿ ಸುಮಾರು 8.15ರ ಹೊತ್ತಿಗೆ ನಿಲ್ದಾಣದಿಂದ ದೂರ ಸಾಗಿ ಹಳಿಗೆ ಹಾರಿದ್ದರು. ಅದು ಮೆಟ್ರೊ ಸಿಬ್ಬಂದಿಯ ಗಮನಕ್ಕೆ ಬಂದಿದ್ದರಿಂದ ಮೆಟ್ರೊ ರೈಲು ಡಿಕ್ಕಿಯಾಗುವುದು ಸ್

ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಸೋಮವಾರ ದೀಪಾಂಜಲಿ ನಗರ ಮತ್ತು ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳ ನಡುವಿನ ಹಳಿಗೆ ವ್ಯಕ್ತಿಯೊಬ್ಬರು ಹಾರಿದ್ದರಿಂದ ಮೆಟ್ರೊ ಸಂಚಾರ ವ್ಯತ್ಯಯಗೊಂಡಿತು.ರಾತ್ರಿ ಸುಮಾರು 8.15ರ ಹೊತ್ತಿಗೆ ನಿಲ್ದಾಣದಿಂದ ದೂರ ಸಾಗಿ ಹಳಿಗೆ ಹಾರಿದ್ದರು. ಅದು ಮೆಟ್ರೊ ಸಿಬ್ಬಂದಿಯ ಗಮನಕ್ಕೆ ಬಂದಿದ್ದರಿಂದ ಮೆಟ್ರೊ ರೈಲು ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಇದರಿಂದ ವಿಜಯನಗರದಿಂದ ಚಲ್ಲಘಟ್ಟ ನಡುವಿನ ಮೆಟ್ರೊ ರೈಲುಗಳ ಸಂಚಾರವನ್ನು ಅಲ್ಪ ಕಾಲ ತಡೆ ಹಿಡಿಯಲಾಯಿತು. ರಾತ್ರಿ 8.30ರ ನಂತರ ಮತ್ತೆ ಮೆಟ್ರೊ ಸಂಚಾರ ಆರಂಭಗೊಂಡಿತು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.ಹಳಿ ಪ್ರವೇಶಿಸಿದವ ವ್ಯಕ್ತಿಯ ವಿವರ, ಯಾಕೆ ಹಳಿ ಮೇಲೆ ಹೋದರು ಎಂಬುದೆಲ್ಲ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಘಟನೆಯಿಂದ ಪ್ರಯಾಣಿಕರಿಗೆ ಅನನುಕೂಲತೆ ಉಂಟಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
Read the complete story at Prajavani