ಟಿಫಿನ್ ಬಾಕ್ಸ್ ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸಲಹೆಗಳು...
ಶಾಲಾ ಮಕ್ಕಳಿಂದ ಹಿಡಿದು ಕಚೇರಿಗೆ ಹೋಗುವ ಎಲ್ಲರೂ ಟಿಫಿನ್ ಬಾಕ್ಸ್ ಬಳಸುತ್ತಾರೆ. ಇಂದು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್, ಸ್ಟೀಲ್ ಹಾಗೂ ಗಾಜಿನ ಟಿಫಿನ್ ಬಾಕ್ಸ್ಗಳು ಲಭ್ಯವಿವೆ. ಇವುಗಳನ್ನು ಬಳಸಿದ ನಂತರ ಸ್ವಚ್ಛವಾಗಿ ತೊಳೆದಿಡುವುದು ಬಹಳ ಮುಖ್ಯ. ಸರಿಯಾಗಿ ಸ್ವಚ್ಛಗೊಳಿಸದೇ ಇದ್ದರೆ, ದುರ್ವಾಸನೆ ಬರುವುದಲ್ಲದೆ, ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ. ಟಿಫಿನ್ ಬಾಕ್ಸ್ ಸ್

ಶಾಲಾ ಮಕ್ಕಳಿಂದ ಹಿಡಿದು ಕಚೇರಿಗೆ ಹೋಗುವ ಎಲ್ಲರೂ ಟಿಫಿನ್ ಬಾಕ್ಸ್ ಬಳಸುತ್ತಾರೆ. ಇಂದು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್, ಸ್ಟೀಲ್ ಹಾಗೂ ಗಾಜಿನ ಟಿಫಿನ್ ಬಾಕ್ಸ್ಗಳು ಲಭ್ಯವಿವೆ. ಇವುಗಳನ್ನು ಬಳಸಿದ ನಂತರ ಸ್ವಚ್ಛವಾಗಿ ತೊಳೆದಿಡುವುದು ಬಹಳ ಮುಖ್ಯ. ಸರಿಯಾಗಿ ಸ್ವಚ್ಛಗೊಳಿಸದೇ ಇದ್ದರೆ, ದುರ್ವಾಸನೆ ಬರುವುದಲ್ಲದೆ, ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ. ಟಿಫಿನ್ ಬಾಕ್ಸ್ ಸ್ವಚ್ಛಗೊಳಿಸಲು ಈ ಸಲಹೆಗಳನ್ನು ಪಾಲಿಸಿ.ಬೇಗ ಸ್ವಚ್ಛ ಮಾಡಿಟಿಫಿನ್ ಬಾಕ್ಸ್ ಅನ್ನು ಬಳಸಿದ ನಂತರ ಸಾಧ್ಯವಾದಷ್ಟು ಬೇಗ ಸ್ವಚ್ಛಗೊಳಿಸುವುದು ಉತ್ತಮ. ದಿನಗಟ್ಟಲೆ ಸ್ವಚ್ಛಗೊಳಿಸದೆ ಬಿಡುವುದರಿಂದ ಅದರಲ್ಲಿ ಉಳಿದಿರುವ ಆಹಾರದ ಕಲೆಗಳು ಒಣಗಿ ದುರ್ವಾಸನೆಗೆ ಕಾರಣವಾಗಬಹುದು. ಆದ್ದರಿಂದ ಬೆಚ್ಚಗಿನ ನೀರಿನ ಜತೆ ಪಾತ್ರೆ ತೊಳೆಯುವ ಸೋಪನ್ನು ಬಳಸಿ ತೊಳೆಯಿರಿ.ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿದುರ್ವಾಸನೆ ಇದ್ದರೆ, ಹೀಗೆ ಮಾಡಿಟಿಫಿನ್ ಬಾಕ್ಸ್ನಲ್ಲಿ ದುರ್ವಾಸನೆ ಇದ್ದರೆ ಅದನ್ನು ನಿವಾರಿಸಲು ಅಡುಗೆ ಸೋಡಾವನ್ನು ಹಾಕಿ 10 ನಿಮಿಷ ಬಿಡಿ. ಬಳಿಕ ಸ್ಕ್ರಬ್ ಮಾಡುತ್ತ, ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ಇದು ಪ್ಲಾಸ್ಟಿಕ್, ಸ್ಟೀಲ್ ಹಾಗೂ ಗಾಜಿನ ಟಿಫಿನ್ ಬಾಕ್ಸ್ಗಳಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಮುಚ್ಚಳ ಸ್ವಚ್ಛಗೊಳಿಸುವುದನ್ನು ಮರೆಯಬೇಡಿಅನೇಕರು ಟಿಫಿನ್ ಬಾಕ್ಸ್ ತೊಳೆಯುವಾಗ ಮುಚ್ಚಳವನ್ನು ಸ್ವಚ್ಛಗೊಳಿಸುವುದನ್ನು ಮರೆತು ಬಿಡುತ್ತಾರೆ. ಆದರೆ ಮುಚ್ಚಳದ ಅಂಚು ಅಥವಾ ಸೀಲ್ಗಳಲ್ಲಿ ಆಹಾರದ ತುಣುಕುಗಳು ಅಂಟಿಕೊಂಡಿರುತ್ತವೆ. ಇವುಗಳನ್ನು ಸಣ್ಣ ಬ್ರಷ್ ಮೂಲಕ ಸ್ವಚ್ಛಗೊಳಿಸಬೇಕು. ಇದಕ್ಕೆ ಹಳೆಯ ಟೂತ್ಬ್ರಷ್ ಬಳಸಬಹುದು.ಗೃಹಾಲಂಕಾರ; ಸೌಂದರ್ಯದ ಪ್ರತಿಬಿಂಬಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ಸ್ವಚ್ಛಗೊಳಿಸುವುದು ಹೇಗೆ?ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ಗಳಲ್ಲಿ ಕಲೆ ಹಾಗೂ ಜಿಡ್ಡಿನ ಅಂಶ ಹೆಚ್ಚಾಗಿ ಉಳಿದುಕೊಳ್ಳುತ್ತದೆ. ಇದನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಜತೆ ನೀರನ್ನು ಸೇರಿಸಿ 20 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ನಂತರ ಬಿಸಿಲಿನಲ್ಲಿ ಒಣಗಿಸಿ ಅಥವಾ ಬಟ್ಟೆಯಿಂದ ತೇವಾಂಶವಿಲ್ಲದಂತೆ ಒರೆಸಿ ಎತ್ತಿಡಿ.ಸ್ಟೇನ್ಲೆಸ್ ಸ್ಟೀಲ್ ಟಿಫಿನ್ ಬಾಕ್ಸ್ ಸ್ವಚ್ಛಗೊಳಿಸುವುದು ಹೇಗೆ?ಪಾತ್ರೆ ತಳ ಹಿಡಿದು ಕಪ್ಪಾಗಿದ್ಯಾ? ಹೀಗೆ ಸ್ವಚ್ಛಗೊಳಿಸಿಸ್ಟೇನ್ಲೆಸ್ ಸ್ಟೀಲ್ ಟಿಫಿನ್ ಬಾಕ್ಸ್ಗಳನ್ನು ಗಡುಸಾದ ಸ್ಕ್ರಬ್ಬರ್ಗಳಿಂದ ಉಜ್ಜುವುದರಿಂದ ಗೀರುಗಳು ಮೂಡಬಹುದು. ಹಾಗಾಗಿ ಮೃದುವಾದ ಸ್ಕ್ರಬ್ಬರ್ ಬಳಸಿ ಮೇಲಿನ ವಿಧಾನದಂತೆಯೇ ಸ್ವಚ್ಛಗೊಳಿಸಿ. ಬಿಳಿ ಚುಕ್ಕೆಗಳು ಉಂಟಾಗುವುದನ್ನು ತಡೆಯಲು ತೊಳೆದ ನಂತರ ಸ್ವಚ್ಛವಾದ ಬಟ್ಟೆಯಿಂದ ಒರೆಸಿಡಿ.ತೊಳೆದ ಬಳಿಕ ಬಿಸಿಲಿನಲ್ಲಿ ಒಣಗಲು ಇಡಬಹುದು. ಗಾಜಿನ ಟಿಫಿನ್ ಬಾಕ್ಸ್ಗಳಿಗೆ ಬಿಸಿ ನೀರು ಹಾಕುವಾಗ ಎಚ್ಚರವಿರಲಿ, ಇಲ್ಲದಿದ್ದರೆ ಅವು ಒಡೆದು ಹೋಗುವ ಸಂಭವವಿರುತ್ತದೆ. ಎತ್ತಿಡುವಾಗ ಮುಚ್ಚಳವನ್ನು ಮುಚ್ಚಿ ಇಡುವುದು ಉತ್ತಮ.