ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ | ಸಂಸ್ಕೃತಿಯ ಸಂಗಮವೋ, ರಾಜಕೀಯ ತಂತ್ರವೋ?
ನಾಡಹಬ್ಬ ಮೈಸೂರು ದಸರಾದಲ್ಲಿ ಈ ಬಾರಿ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ಸದ್ದು ಕೇಳಿಸಲಿದೆ. ಸಾತಗಳ್ಳಿಯಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ‘ವಿಜಯ–ದಶಮಿ ಜೋಡುಕರೆ ಕಂಬಳ’ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. 2023ರಲ್ಲಿ ಬೆಂಗಳೂರಿನಲ್ಲಿ ಕಂಬಳಕ್ಕೆ ದೊರೆತ ಜನಪ್ರಿಯತೆಯ ಬಳಿಕ ಮೈಸೂರಿನಲ್ಲೂ ಈ ಕ್ರೀಡೆಯನ್ನು ಆಯೋಜಿಸುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ.

ನಾಡಹಬ್ಬ ಮೈಸೂರು ದಸರಾದಲ್ಲಿ ಈ ಬಾರಿ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ಸದ್ದು ಕೇಳಿಸಲಿದೆ. ಸಾತಗಳ್ಳಿಯಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ‘ವಿಜಯ–ದಶಮಿ ಜೋಡುಕರೆ ಕಂಬಳ’ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. 2023ರಲ್ಲಿ ಬೆಂಗಳೂರಿನಲ್ಲಿ ಕಂಬಳಕ್ಕೆ ದೊರೆತ ಜನಪ್ರಿಯತೆಯ ಬಳಿಕ ಮೈಸೂರಿನಲ್ಲೂ ಈ ಕ್ರೀಡೆಯನ್ನು ಆಯೋಜಿಸುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ. ಆದರೆ, ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಕೆಲವು ಸಂಘಟನೆಗಳು ಮತ್ತು ರಾಜವಂಶಸ್ಥರಿಂದ ವಿರೋಧ ವ್ಯಕ್ತವಾಗಿದೆ. ಕಂಬಳ ಮೈಸೂರಿನ ಸಂಸ್ಕೃತಿಯಲ್ಲ, ಬರಗಾಲದ ಸಂದರ್ಭದಲ್ಲಿ ನೀರಿನ ಬಳಕೆ ಸೂಕ್ತವಲ್ಲ ಎಂಬ ಆಕ್ಷೇಪಗಳೂ ಕೇಳಿಬಂದಿವೆ. ಇನ್ನೊಂದೆಡೆ, ಕಂಬಳ ಸಮಿತಿಯು ಇದನ್ನು ಸಾಂಸ್ಕೃತಿಕ ವಿನಿಮಯದ ವೇದಿಕೆ ಎಂದು ಬಣ್ಣಿಸಿದೆ. ಕರಾವಳಿಯ ಕ್ರೀಡೆ ಮೈಸೂರಿನಲ್ಲಿ ಹೊಸ ನೆಲೆ ಕಂಡುಕೊಳ್ಳಲಿದೆಯೇ? ಈ ಆಯೋಜನೆಯ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆಯೇ? ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ನಲ್ಲಿ ತಿಳಿಸಿ.
Read the complete story at Prajavani