ದಾಂಡೇಲಿಯಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ: ಕ್ರಮಕ್ಕೆ ಒತ್ತಾಯ
ದಾಂಡೇಲಿ: ದಲಿತ ಸಮುದಾಯದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಾಂಡೇಲಿಯ ಡಿಎಸ್ಪಿ ಬಿ.ಗಿರೀಶ ಅವರಿಗೆ ಈಚೆಗೆ ವಿವಿಧ ದಲಿತ ಸಂಘಟನೆಯ ಪ್ರಮುಖರು ಮನವಿ ಸಲ್ಲಿಸಿದರು.‘ಗಣೇಶಗುಡಿ ರೆಸಾರ್ಟ್ನಲ್ಲಿ ಸೆ.25 ಹಾಗೂ 26ರಂದು ದಲಿತ ಮಹಿಳೆಯ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಎಸಗಿದ ಸಂಬಂಧ

ದಾಂಡೇಲಿ: ದಲಿತ ಸಮುದಾಯದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಾಂಡೇಲಿಯ ಡಿಎಸ್ಪಿ ಬಿ.ಗಿರೀಶ ಅವರಿಗೆ ಈಚೆಗೆ ವಿವಿಧ ದಲಿತ ಸಂಘಟನೆಯ ಪ್ರಮುಖರು ಮನವಿ ಸಲ್ಲಿಸಿದರು.‘ಗಣೇಶಗುಡಿ ರೆಸಾರ್ಟ್ನಲ್ಲಿ ಸೆ.25 ಹಾಗೂ 26ರಂದು ದಲಿತ ಮಹಿಳೆಯ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಎಸಗಿದ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಸಂತ್ರಸ್ತರಿಗೆ ಸೇರಿದಂತೆ ಉಳಿದ ಸಿಬ್ಬಂದಿಗೆ ರೆಸಾರ್ಟ್ ಮಾಲೀಕರಿಂದ ಜೀವ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.ಬಿ.ಡಿ.ಮಾದರ, ಮಣಿಕಂಠ ಮುಕ್ರಿ, ಚಂದ್ರಕಾಂತ ನಡಿಗೇರ, ಪ್ರಣವ ಹೆಗಡೆ, ತಿಮ್ಮಣ್ಣ ಮುಕ್ರಿ, ಮಾರುತಿ ಗವಾಡಿ, ರವಿ ಮಾಳಕರ, ಇತರರು ಇದ್ದರು.261012-20-1077266839
Read the complete story at Prajavani