ಮುಂಡಗೋಡ: ನವರಾತ್ರಿ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಚಾಲನೆ
ಮುಂಡಗೋಡ: ನವರಾತ್ರಿ ಅಂಗವಾಗಿ ಪಟ್ಟಣದಲ್ಲಿ ದುರ್ಗಾದೌಡ್ ಕಾರ್ಯಕ್ರಮಕ್ಕೆ ವೇದಮೂರ್ತಿ ರುದ್ರಮುನಿ ಸ್ವಾಮೀಜಿ ಚಾಲನೆ ನೀಡಿದರು.ಇಲ್ಲಿನ ಬನ್ನಿಕಟ್ಟೆ ಆದಿಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜಯಘೋಷಗಳ ಮಧ್ಯೆ ಮೊದಲ ದಿನದ ದುರ್ಗಾ ದೌಡ್ ಕಾರ್ಯಕ್ರಮ ಆರಂಭಗೊಂಡಿತು.ಪಟ್ಟಣದ ಅಂಬೇಡ್ಕರ್ ಓಣಿ, ಶಿವಾಜಿ ವೃತ, ಲಮಾಣಿ ತಾಂಡಾ ಮಾರ್ಗದಲ್ಲಿ ದುರ್ಗಾ ದೌಡ ಸಂಚರಿ

ಮುಂಡಗೋಡ: ನವರಾತ್ರಿ ಅಂಗವಾಗಿ ಪಟ್ಟಣದಲ್ಲಿ ದುರ್ಗಾದೌಡ್ ಕಾರ್ಯಕ್ರಮಕ್ಕೆ ವೇದಮೂರ್ತಿ ರುದ್ರಮುನಿ ಸ್ವಾಮೀಜಿ ಚಾಲನೆ ನೀಡಿದರು.ಇಲ್ಲಿನ ಬನ್ನಿಕಟ್ಟೆ ಆದಿಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜಯಘೋಷಗಳ ಮಧ್ಯೆ ಮೊದಲ ದಿನದ ದುರ್ಗಾ ದೌಡ್ ಕಾರ್ಯಕ್ರಮ ಆರಂಭಗೊಂಡಿತು.ಪಟ್ಟಣದ ಅಂಬೇಡ್ಕರ್ ಓಣಿ, ಶಿವಾಜಿ ವೃತ, ಲಮಾಣಿ ತಾಂಡಾ ಮಾರ್ಗದಲ್ಲಿ ದುರ್ಗಾ ದೌಡ ಸಂಚರಿಸಿ, ಸಾಯಿ ಮಂದಿರದಲ್ಲಿ ಮುಕ್ತಾಯಗೊಂಡಿತು. ದುರ್ಗಾ ದೌಡ ಸಂಚರಿಸುವ ಮಾರ್ಗದಲ್ಲಿ ಮನೆಗಳ ಎದುರು ರಂಗೋಲಿ ಬಿಡಿಸಿ, ಮಹಿಳೆಯರು ದುರ್ಗಾ ದೌಡನ್ನು ಸ್ವಾಗತಿಸಿದರು. ನಸುಕಿನ ಇಬ್ಬನಿಯಲ್ಲಿ ಭಕ್ತಿಯ ಬೆಳಕು ಪ್ರಜ್ವಲಿಸಿದಂತೆ, ನೂರಾರು ಮಹಿಳೆಯರು, ಪುರುಷರು ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಕ್ಕಳು ವಿವಿಧ ರೂಪಕಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಇದೇ ಮೊದಲ ಬಾರಿಗೆ ನಡೆದಿರುವ ದುರ್ಗಾ ದೌಡ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಭಕ್ತಿ, ಸಂಸ್ಕೃತಿಯ ಪ್ರತೀಕವಾಗಿರುವ ದುರ್ಗಾ ದೌಡ ಕಾರ್ಯಕ್ರಮದಲ್ಲಿ ಕಂಡುಬಂದ ಜನರ ಉತ್ಸಾಹ ಇನ್ನುಳಿದ ದಿನಗಳ ಯಶಸ್ಸಿಗೆ ಪ್ರೇರಣೆ ನೀಡಿದೆ ಎಂದು ದುರ್ಗಾ ದೌಡ ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.261012-20-184445808