ದಸರಾ ಸಂಭ್ರಮ – ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಅಗ್ನಿಪರೀಕ್ಷೆಯ ಲಕ್ಷ್ಮಿ, ಕುಮಾರಿ
ಕಳೆದ ಕೆಲ ವಾರದಿಂದ ಬರೀ ಜಗಳ ನಡೆಯುತ್ತಿದ್ದ ಬಿಗ್ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ನಗು ತುಂಬಿದೆ. ದಸರಾ ಹಬ್ಬದ ಸಂಭ್ರಮಕ್ಕೆ ಗೆಸ್ಟ್ಗಳಾಗಿ ಬಿಗ್ಬಾಸ್ ಇದೀಗ ಇಬ್ಬರು ವೈಲ್ಡ್ಕಾರ್ಡ್ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿದ್ದಾರೆ. ದಸರಾ ಹಬ್ಬದ ಸಂಭ್ರಮಕ್ಕೆ ಬಿಗ್ಬಾಸ್ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಲಿ ಎಂಬ ಉದ್ದೇಶದೊಂದ

ಕಳೆದ ಕೆಲ ವಾರದಿಂದ ಬರೀ ಜಗಳ ನಡೆಯುತ್ತಿದ್ದ ಬಿಗ್ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ನಗು ತುಂಬಿದೆ. ದಸರಾ ಹಬ್ಬದ ಸಂಭ್ರಮಕ್ಕೆ ಗೆಸ್ಟ್ಗಳಾಗಿ ಬಿಗ್ಬಾಸ್ ಇದೀಗ ಇಬ್ಬರು ವೈಲ್ಡ್ಕಾರ್ಡ್ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿದ್ದಾರೆ. ದಸರಾ ಹಬ್ಬದ ಸಂಭ್ರಮಕ್ಕೆ ಬಿಗ್ಬಾಸ್ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಲಿ ಎಂಬ ಉದ್ದೇಶದೊಂದಿಗೆ ಹಾಗೂ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆಕಟ್ಟಲು ಮನೆಗೆ ಕುಮಾರಿ ಮತ್ತು ಲಕ್ಷ್ಮೀ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಅನಾರೋಗ್ಯದ ಕಾರಣದಿಂದ ಬಿಗ್ಬಾಸ್ ಮನೆಯಿಂದ ಸಂಗೀತಾ ಭಟ್ ಔಟ್ ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00 ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq #BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/xShQwjDG70 — Colors Kannada (@ColorsKannada) October 12, 2026 ಬಿಗ್ಬಾಸ್ ಆರಂಭಕ್ಕೂ ಮುನ್ನ ನಡೆದ ಅಗ್ನಿಪರೀಕ್ಷೆಯಲ್ಲಿ ಈ ಇಬ್ಬರು ಸ್ಪರ್ಧಿಗಳು ಭಾಗಿಯಾಗಿದ್ದರು. ಮಂಜು ಹಾಗೂ ಸಂಗೀತಾ ಭಟ್ ಬದಲಾಗಿ ಬಿಗ್ಬಾಸ್ ಇಬ್ಬರನ್ನು ಮನೆಯೊಳಗೆ ಕಳುಹಿಸಿದ್ದಾರೆ. ವೈಲ್ಡ್ಕಾರ್ಡ್ ಸ್ಪರ್ಧಿಗಳು ಎಂಟ್ರಕೊಟ್ಟಿರುವ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಪ್ರೋಮೋದಲ್ಲಿ ಕುಮಾರಿ ಮತ್ತು ಲಕ್ಷ್ಮೀ ವಿಮಾನದ ಬಾಗಿಲಿನಿಂದ ಅದ್ಧೂರಿಯಾಗಿ ಡೊಳ್ಳು ಕುಣಿತ, ನೃತ್ಯದೊಂದಿಗೆ ಬಿಗ್ಬಾಸ್ ಮನೆಗೆ ಎಂಟ್ರಕೊಟ್ಟಿದ್ದಾರೆ. ಮನೆಗೆ ಬಂದ ಕೂಡಲೇ ಸಂತಸದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಎಷ್ಟೇ ವಾರ್ನಿಂಗ್ ಕೊಟ್ಟರೂ ಬದಲಾಗದ ಮಂಜ – ಬಿಗ್ಬಾಸ್ ಮನೆಯಿಂದ ಹೊರಕ್ಕೆ, ಕಿಚ್ಚನ ಮುಂದೆ ಕಣ್ಣೀರು