ನಮ್ಮೂರ ನುಗ್ಗೆ ಗೊತ್ತು, ತಾಂಜೇನಿಯಾ ದೇಶದ ನುಗ್ಗೆ ಹೇಗಿರುತ್ತೆ
2017 ರಲ್ಲಿ ನಾನು ತಾಂಜೇನಿಯಾ ದೇಶಕ್ಕೆ ಹೋಗುವ ಅವಕಾಶ ಬಂತು. ನಾನು ತಾಂಜೇನಿಯಾ ಹೋಗುವ ವಿಷಯ ತಿಳಿದ ಪಾಂಡಿಚೇರಿಯ ಬೀಜ ಮಾತೆ ದೀಪಿಕಾ ಕುಂದಾಜಿ ಪೋನ್ ಮಾಡಿ ' ಕೆ.ಪಿ, ತಾಂಜೇನಿಯ ನುಗ್ಗೆಗೆ ಹೆಸರುವಾಸಿ. ಬರುವಾಗ ಬೀಜ ತನ್ನಿ' ಎಂದರು.ನಾನು ಹೋಗಿದ್ದಾದರೂ ಜಾಂಜೀಬಾರ್ ದ್ವೀಪಗಳಿಗೆ. ಅಲ್ಲಿ ನುಗ್ಗೆ ಸಿಗಲಿಲ್ಲ. ಮರುವರ್ಷವೇ ಸೋರೆ ಕಲೆಯ ಅಧ್ಯಯನ ಮಾಡಲು ತಾಂಜೇನಿಯಾಕ್ಕೆ

2017 ರಲ್ಲಿ ನಾನು ತಾಂಜೇನಿಯಾ ದೇಶಕ್ಕೆ ಹೋಗುವ ಅವಕಾಶ ಬಂತು. ನಾನು ತಾಂಜೇನಿಯಾ ಹೋಗುವ ವಿಷಯ ತಿಳಿದ ಪಾಂಡಿಚೇರಿಯ ಬೀಜ ಮಾತೆ ದೀಪಿಕಾ ಕುಂದಾಜಿ ಪೋನ್ ಮಾಡಿ ' ಕೆ.ಪಿ, ತಾಂಜೇನಿಯ ನುಗ್ಗೆಗೆ ಹೆಸರುವಾಸಿ. ಬರುವಾಗ ಬೀಜ ತನ್ನಿ' ಎಂದರು.ನಾನು ಹೋಗಿದ್ದಾದರೂ ಜಾಂಜೀಬಾರ್ ದ್ವೀಪಗಳಿಗೆ. ಅಲ್ಲಿ ನುಗ್ಗೆ ಸಿಗಲಿಲ್ಲ. ಮರುವರ್ಷವೇ ಸೋರೆ ಕಲೆಯ ಅಧ್ಯಯನ ಮಾಡಲು ತಾಂಜೇನಿಯಾಕ್ಕೆ ಹೊರಟು ನಿಂತ Sree Seema ಗೆ ' ನುಗ್ಗೆ ಬೀಜ ತರಲು ಮರೆಯಬೇಡ' ಎಂದು ನೆನಪಿಸಿದೆ. ಸೀಮ ಬರುವಾಗ ತಾಂಜೇನಿಯಾ ನುಗ್ಗೆಯ ಹತ್ತಾರು ಬೀಜ ತಂದರು. ನರ್ಸರಿಗೆ ಹಾಕಿದಾಗ ಹುಟ್ಟಿದ್ದೇ ಐದು; ನೆಟ್ಟಾಗ ಉಳಿದದ್ದು ಮೂರೇ ಮೂರು!.ತಾಂಜೇನಿಯ ನುಗ್ಗೆ ಕಾಯಿ ಬಿಡುವುದನ್ನೇ ಎದುರು ನೋಡುತ್ತಿದ್ದೆ. ಒಂದು,ಎರಡು,ಮೂರು... ಏಳು ವರ್ಷವಾದರೂ ತಾಂಜೇನಿಯಾ ನುಗ್ಗೆ ಕಾಯಿ ಬಿಡುವ ಲಕ್ಷಣ ಕಾಣಲಿಲ್ಲ. ಕಳೆದ ವರ್ಷ ಮೊದಲ ಬಾರಿ ಹೂ ಬಿಟ್ಟರೂ,ಕಾಯಿ ಕೊಡಲಿಲ್ಲ.ಕೊನೆಗೂ ಈ ವರ್ಷ ಕಾಡಿಸಿ ಕಾಡಿಸಿ ಕಾಯಿ ಬಿಟ್ಟಿದೆ. ತಾಂಜೇನಿಯಾ ನುಗ್ಗೆಯ ಎಲೆಗಳು ಬಹಳ ದೊಡ್ಡವು. ನಮ್ಮ ನುಗ್ಗೆಯ ತರ ನೇರ ಹೋಗದೆ, ಕೊಂಬೆ ಟಿಸಿಲಾಗಿ ಹರಡಿಕೊಳ್ಳುತ್ತದೆ. ಕಾಯಿ ದಪ್ಪ, ತಿರುಚಿದಂತೆ ಕಾಣ್ತದೆ.ನಮ್ಮ ಸಾಂಪ್ರದಾಯಿಕ ನುಗ್ಗೆಯ ತಳಿಗಿನ್ನ ತಾಂಜೇನಿಯಾ ನುಗ್ಗೆ ವಿಶೇಷ ಎನಿಸುತ್ತಿಲ್ಲ. ವೈವಿಧ್ಯದ ದೃಷ್ಟಿಯಿಂದಷ್ಟೇ ಇದು ವಿಶೇಷ.( ಲೇಖಕರು: ಕೃಷಿ ಬರಹಗಾರರು, ಸಹಜ ಸಮೃದ್ದ ಸಂಸ್ಥಾಪಕ)