ಯುಪಿಐ ವಹಿವಾಟು: ಎಂಡಿಆರ್ ಶುಲ್ಕ ವಿಧಿಸುವ ನಿರ್ಧಾರ ಮುಂದೂಡಿಕೆ
ನವದೆಹಲಿ: ಆಯ್ದ ಯುಪಿಐ ವಹಿವಾಟುಗಳ ಮೇಲೆ ಶೇ 0.4ರಷ್ಟು ಎಂಡಿಆರ್ ಶುಲ್ಕ (ಮರ್ಚೆಂಟ್ ಡಿಸ್ಕೌಂಟ್ ರೇಟ್) ವಿಧಿಸುವ ನಿರ್ಧಾರವನ್ನು ಮುಂದೂಡಲಾಗಿದೆ.ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ ಹಬ್ಬ ಮುಗಿದ ಬಳಿಕ ಎಂಡಿಆರ್ ಶುಲ್ಕ ವಿಧಿಸುವ ಕುರಿತು ನಿರ್ಧರಿಸಲಾಗುವುದು. ಜೊತೆಗೆ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಭಾರತ ರಾಷ್ಟ್ರೀಯ ಪಾವತಿಗಳ ನಿಗಮ

ನವದೆಹಲಿ: ಆಯ್ದ ಯುಪಿಐ ವಹಿವಾಟುಗಳ ಮೇಲೆ ಶೇ 0.4ರಷ್ಟು ಎಂಡಿಆರ್ ಶುಲ್ಕ (ಮರ್ಚೆಂಟ್ ಡಿಸ್ಕೌಂಟ್ ರೇಟ್) ವಿಧಿಸುವ ನಿರ್ಧಾರವನ್ನು ಮುಂದೂಡಲಾಗಿದೆ.ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ ಹಬ್ಬ ಮುಗಿದ ಬಳಿಕ ಎಂಡಿಆರ್ ಶುಲ್ಕ ವಿಧಿಸುವ ಕುರಿತು ನಿರ್ಧರಿಸಲಾಗುವುದು. ಜೊತೆಗೆ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಭಾರತ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ಪಿಸಿಐ) ತಿಳಿಸಿದೆ.₹2,000ಕ್ಕಿಂತ ಹೆಚ್ಚಿನ ಮೊತ್ತದ, ವ್ಯಕ್ತಿಯಿಂದ ವ್ಯಾಪಾರಿಗೆ ಆಗುವ ಯುಪಿಐ ಪಾವತಿಗಳಿಗೆ ಶೇ 0.4ರಷ್ಟು ಎಂಡಿಆರ್ ಶುಲ್ಕ ಅಕ್ಟೋಬರ್ 15ರಿಂದ ಜಾರಿಗೆ ಬರುವಂತೆ ವಿಧಿಸಲಾಗುವುದು ಎಂದು ಎನ್ಪಿಸಿಐ ಕಳೆದ ತಿಂಗಳು ಸುತ್ತೋಲೆ ಹೊರಡಿಸಿತ್ತು.ಎಂಡಿಆರ್ ಶುಲ್ಕವನ್ನು ವ್ಯಾಪಾರಿಗಳು ಪಾವತಿಸಬೇಕೇ ಹೊರತು ಗ್ರಾಹಕರಲ್ಲ. ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗರಿಷ್ಠ ₹300ರಷ್ಟು ಪರಿಮಿತಿ ವಿಧಿಸಲಾಗಿದೆ.
Read the complete story at Prajavani