ಮಹಾಲಿಂಗಪುರ: ಗಾಂಧಿ ವೃತ್ತ ಕಾಮಗಾರಿ ಅವ್ಯವಹಾರ; ತನಿಖೆ ಚುರುಕು
ಮಹಾಲಿಂಗಪುರ: ಪುರಸಭೆ ವ್ಯಾಪ್ತಿಯಲ್ಲಿ ಗಾಂಧಿ ವೃತ್ತ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ದೂರಿನ ಕುರಿತು ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ತನಿಖೆ ಚುರುಕುಗೊಳಿಸಿದೆ.ರವಿ ಜವಳಗಿ ಎಂಬುವರು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿದ್ದ ದೂರಿನನ್ವಯ, ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನ

ಮಹಾಲಿಂಗಪುರ: ಪುರಸಭೆ ವ್ಯಾಪ್ತಿಯಲ್ಲಿ ಗಾಂಧಿ ವೃತ್ತ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ದೂರಿನ ಕುರಿತು ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ತನಿಖೆ ಚುರುಕುಗೊಳಿಸಿದೆ.ರವಿ ಜವಳಗಿ ಎಂಬುವರು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿದ್ದ ದೂರಿನನ್ವಯ, ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಮಹಾಲಿಂಗಪುರ ಪುರಸಭೆಯ ಮುಖ್ಯಾಧಿಕಾರಿಗೆ ಲೋಕಾಯುಕ್ತ ತನಿಖಾಧಿಕಾರಿಗಳು ಅಧಿಕೃತ ಪತ್ರವೊಂದನ್ನು ಜಾರಿಗೊಳಿಸಿದ್ದಾರೆ.ಲೋಕಾಯುಕ್ತ ತನಿಖಾಧಿಕಾರಿ ಹಾಗೂ ಮುಖ್ಯ ಎಂಜಿನಿಯರ್ ಕಚೇರಿಯ ತಾಂತ್ರಿಕ ವಿಭಾಗದ ತನಿಖಾಧಿಕಾರಿ ಬಿ.ಪ್ರಸನ್ನಕುಮಾರ್ ನ.4ರಂದು ಬೆಳಿಗ್ಗೆ 11 ಗಂಟೆಗೆ ಮಹಾಲಿಂಗಪುರ ಪುರಸಭೆ ಕಚೇರಿಯಲ್ಲಿ ಪ್ರಕರಣದ ಸ್ಥಳ ಪರಿಶೀಲನೆ ಹಾಗೂ ದಾಖಲೆಗಳ ತನಿಖೆ ನಡೆಸಲಿದ್ದಾರೆ.261013-19-1765279667
Read the complete story at Prajavani