ಮೈಸೂರು: ಸಿ.ಎಂ. ಕಪ್ ದಸರಾ ಕ್ರೀಡಾಕೂಟದಲ್ಲಿ ನಾಲ್ಕು ಕೂಟ ದಾಖಲೆ
ಮೈಸೂರು: ‘ಸಿ.ಎಂ. ಕಪ್’ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಮೊದಲ ದಿನವಾದ ಸೋಮವಾರ ನಾಲ್ಕು ಕೂಟ ದಾಖಲೆಗಳು ನಿರ್ಮಾಣವಾದವು. ಬೆಂಗಳೂರು ನಗರ ವಿಭಾಗದ ಸ್ಪರ್ಧಿಗಳು ಮಿಂಚು ಹರಿಸಿದರು.ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀ. ಓಟದಲ್ಲಿ ಬೆಂಗಳೂರು ನಗರ ವಿಭಾಗದ ವಿ.ಎಂ. ಪ್ರಸನ್ನಕುಮಾರ್ (10.56 ಸೆಕೆಂಡ್), 1500 ಮೀ. ಓಟದಲ್ಲಿ ಬೆಂಗಳೂ

ಮೈಸೂರು: ‘ಸಿ.ಎಂ. ಕಪ್’ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಮೊದಲ ದಿನವಾದ ಸೋಮವಾರ ನಾಲ್ಕು ಕೂಟ ದಾಖಲೆಗಳು ನಿರ್ಮಾಣವಾದವು. ಬೆಂಗಳೂರು ನಗರ ವಿಭಾಗದ ಸ್ಪರ್ಧಿಗಳು ಮಿಂಚು ಹರಿಸಿದರು.ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀ. ಓಟದಲ್ಲಿ ಬೆಂಗಳೂರು ನಗರ ವಿಭಾಗದ ವಿ.ಎಂ. ಪ್ರಸನ್ನಕುಮಾರ್ (10.56 ಸೆಕೆಂಡ್), 1500 ಮೀ. ಓಟದಲ್ಲಿ ಬೆಂಗಳೂರು ನಗರದ ವೈಭವ್ ಎಂ. ಪಾಟೀಲ (3 ನಿಮಿಷ, 56.57 ಸೆಕೆಂಡ್) ಹಾಗೂ ಡಿಸ್ಕಸ್ ಥ್ರೋನಲ್ಲಿ ಮೈಸೂರಿನ ಮೊಹಮ್ಮದ್ ಸಕ್ಲೇನ್ ಅಹ್ಮದ್ (54.78 ಮೀಟರ್ ದೂರ) ಕೂಟ ದಾಖಲೆ ಬರೆದರು.ಮಹಿಳೆಯರ 1500 ಮೀ. ಓಟದಲ್ಲಿ ಬೆಳಗಾವಿಯ ಶಿಲ್ಪಾ ಹೊಸಮನಿ (4:42.69 ಸೆಕೆಂಡ್) ನೂತನ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.ಫಲಿತಾಂಶಗಳು (ಅಥ್ಲೆಟಿಕ್ಸ್): ಪುರುಷರು: 100 ಮೀ. ಓಟ: ಪ್ರಸನ್ನಕುಮಾರ್ ಮಣ್ಣೂರ (ಬೆಂಗಳೂರು ನಗರ, ಕಾಲ:10.56 ಸೆ.)–1, ಆರ್. ಪ್ರಜ್ವಲ್ (ಮೈಸೂರು)–2, ಅಬೂಬಕರ್ (ಬೆಂಗಳೂರು ನಗರ)–3; 1500 ಮೀ. ಓಟ (ಪುರುಷರು): ವೈಭವ್ ಪಾಟೀಲ (ಬೆಂಗಳೂರು ನಗರ, ಕಾಲ: 3 ನಿ.56.57 ಸೆ.)–1, ಹೆದ್ರಿ (ಬೆಳಗಾವಿ)–2, ಚನ್ನಬಸವ (ಮೈಸೂರು)–3.ಹೈಜಂಪ್: ಸಿನಾನ್ (ಮೈಸೂರು, ಎತ್ತರ:1.98 ಮೀ.)–1, ಪ್ರಿನ್ಸ್ ಜೆ. (ಮೈಸೂರು)–2, ಅಭಯ್ ಕುಮಾರ್ ಗೌಡ (ಬೆಂಗಳೂರು ನಗರ)–3; ಡಿಸ್ಕಸ್ ಥ್ರೋ : ಮೊಹಮ್ಮದ್ ಸಕ್ಲೇನ್ ಅಹ್ಮದ್ (ಮೈಸೂರು, ದೂರ: 54.78 ಮೀ.)–1, ಬಿ. ವಿಶಾಲ್ ಅಣ್ವೇಕರ್ (ಬೆಂಗಳೂರು ನಗರ)–2, ಮೋಹನ್ ಕುಮಾರ್ ಬಿ.ಎಸ್. (ಬೆಂಗಳೂರು ನಗರ)–3.ಮಹಿಳೆಯರು: 100 ಮೀ. ಓಟ: ಅಮುದಾ ಯಾಲಿನಿ (ಬೆಂಗಳೂರು ನಗರ, ಕಾಲ: 12.42 ಸೆ.)–1, ವೈಭವಿ ಬುದ್ರುಕ್ (ಬೆಳಗಾವಿ)–2, ನಿಧೀಕ್ಷಾ ನಾಯಕ್ (ಮೈಸೂರು)–3; 1500 ಮೀ. ಓಟ; ಶಿಲ್ಪಾ ಹೊಸಮನಿ (ಬೆಳಗಾವಿ, ಕಾಲ: 4 ನಿ.42.69 ಸೆ.)–1, ಐಶ್ವರ್ಯ ಆರ್.ಎಂ. (ಬೆಂಗಳೂರು ನಗರ)–2, ನಾಗಿಣಿ (ಮೈಸೂರು)–3. ಹೈಜಂಪ್: ಜಿ.ಎಂ. ಕೀರ್ತಿ (ಮೈಸೂರು, ಎತ್ತರ: 1.56 ಮೀ.)–1, ರಶ್ಮಿತಾ ಗಣಪತಿ ದೇವಾಡಿಗ (ಮೈಸೂರು)–2, ವೈಷ್ಣವಿ ವಿ. (ಬೆಳಗಾವಿ)–3. ಡಿಸ್ಕಸ್ ಥ್ರೋ: ತೇಜಸ್ವಿನಿ ಸಿ. (ಬೆಂಗಳೂರು ನಗರ, ದೂರ: 41.80 ಮೀ.)–1, ಮಾಧುರ್ಯ ಶೆಟ್ಟಿ (ಮೈಸೂರು)–2, ಐಶ್ವರ್ಯ ಬೆಂಡಿಗೇರಿ (ಮೈಸೂರು)–3.ವೇಟ್ಲಿಫ್ಟಿಂಗ್: ಮಹಿಳೆಯರು: 49 ಕೆ.ಜಿ. ವಿಭಾಗ: ಶ್ರಾವ್ಯಾ ಎಂ. (ಮೈಸೂರು, ಒಟ್ಟು ಭಾರ: 146 ಕೆ.ಜಿ.)–1, ಪಲ್ಲವಿ (ಕಲಬುರಗಿ)–2, ನಂದಿನಿ ಮಲ್ಲ ಪಿ. (ಮೈಸೂರು)–3; 53 ಕೆ.ಜಿ. ವಿಭಾಗ: ಲಕ್ಷ್ಮಿ ಬಿ. (ಬೆಂಗಳೂರು ನಗರ. ಒಟ್ಟು ಭಾರ: 155 ಕೆ.ಜಿ.)–1, ದೃಶ್ಯ ಕೆ.ವಿ. (ಮೈಸೂರು)–2, ಮಂಜುಳಾ ಬಳ್ಳಾರಿ (ಕಲಬುರಗಿ)–3.ಆರ್ಚರಿ: (ಇಂಡಿಯನ್ ರೌಂಡ್): ಪುರುಷರು: 50 ಮೀ.: ದೇವರಾಜ (ಕಲಬುರಗಿ) (ಅಂಕ: 574)–1, ದೇವರಾಜ ಕಾರಭಾರಿ (ಬೆಳಗಾವಿ)–2, ವಿನಯಕುಮಾರ್ ಎಸ್. (ಬೆಂಗಳೂರು ನಗರ)–3. ಮಹಿಳೆಯರು: 30 ಮೀ: ಅನ್ನಪೂರ್ಣ (ಕಲಬುರಗಿ) ಅಂಕ: 533)–1, ಏಂಜೆಲ್ ಸೂಸನ್ ಫಿಲಿಪ್ (ಬೆಂಗಳೂರು ನಗರ)–2, ದೇವಮ್ಮ (ಕಲಬುರಗಿ)–3.261013-51-250547771