ಶಿವಮೊಗ್ಗ: ಸರ್ಕಾರಿ ಶಾಲೆಗಳ ಜೀರ್ಣೋದ್ಧಾರಕ್ಕೆ ಹೆಮ್ಮಯ ದುಬೈ ಕನ್ನಡ ಸಂಘ ನೆರವು
ನಮ್ಮ ಎನ್ಐಆರ್ ವಿಭಾಗಕ್ಕೆ ಭೇಟಿ ನೀಡಿಶಿವಮೊಗ್ಗ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 'ಹೆಮ್ಮೆಯ ದುಬೈ ಕನ್ನಡ ಸಂಘ'ವು ಕನ್ನಡ ಮನಸುಗಳು ಕರ್ನಾಟಕ ಸಂಘದ ಸಹಯೋಗದಲ್ಲಿ ಶಿವಮೊಗ್ಗ ಜಿಲ್ಲೆಯ ಯಲವಳ್ಳಿ ಮತ್ತು ಮುಗೂರು ಸರ್ಕಾರಿ ಶಾಲೆಗಳ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದೆ.‘ಸರ್ಕಾರಿ ಶಾಲೆ ಉಳಿಸಿ’ ಅಭಿಯಾನದಡಿ ನಡೆದ ಈ ಕಾರ್ಯದಲ್ಲಿ ಹೆಮ್ಮ

ನಮ್ಮ ಎನ್ಐಆರ್ ವಿಭಾಗಕ್ಕೆ ಭೇಟಿ ನೀಡಿಶಿವಮೊಗ್ಗ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 'ಹೆಮ್ಮೆಯ ದುಬೈ ಕನ್ನಡ ಸಂಘ'ವು ಕನ್ನಡ ಮನಸುಗಳು ಕರ್ನಾಟಕ ಸಂಘದ ಸಹಯೋಗದಲ್ಲಿ ಶಿವಮೊಗ್ಗ ಜಿಲ್ಲೆಯ ಯಲವಳ್ಳಿ ಮತ್ತು ಮುಗೂರು ಸರ್ಕಾರಿ ಶಾಲೆಗಳ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದೆ.‘ಸರ್ಕಾರಿ ಶಾಲೆ ಉಳಿಸಿ’ ಅಭಿಯಾನದಡಿ ನಡೆದ ಈ ಕಾರ್ಯದಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘವು ಆರ್ಥಿಕ ನೆರವು ನೀಡಿದ್ದು, ಕನ್ನಡ ಮನಸುಗಳು ತಂಡದ ಸದಸ್ಯರು ಶಾಲೆಗಳ ದುರಸ್ತಿ ಮತ್ತು ಬಣ್ಣ ಬಳಿಯುವ ಕಾರ್ಯದಲ್ಲಿ ಶ್ರಮಿಸಿದ್ದಾರೆ.ಕನ್ನಡ ಮನಸುಗಳು ಕರ್ನಾಟಕ ಸಂಘದ ಸ್ಥಾಪಕ ಪವನ್ ಧರೆಗುಂಡಿ ಅವರ ನೇತೃತ್ವದಲ್ಲಿ ಸುಮಾರು 60 ಮಂದಿ ಸ್ವಯಂಸೇವಕರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಹೆಮ್ಮೆಯ ದುಬೈ ಕನ್ನಡ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ದುಬೈ ಕನ್ನಡಿಗ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಗಳಿಗೆ ಬಣ್ಣ ಬಳಿಯುವ ಸ್ಥಳಕ್ಕೆ ಭೇಟಿ ನೀಡಿ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಅಭಿಯಾನದಲ್ಲಿ ವಿವಿಧ ಪ್ರಮುಖ ಕಂಪನಿಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ ಯುವಕ-ಯುವತಿಯರು ಸ್ವಯಂಸೇವಕರಾಗಿ ಪಾಲ್ಗೊಂಡಿದ್ದರು. ಅವರ ಕನ್ನಡ ಸೇವೆ ಮತ್ತು ಸಮಾಜಮುಖಿ ಕಾರ್ಯವನ್ನು ಹೆಮ್ಮೆಯ ದುಬೈ ಕನ್ನಡ ಸಂಘ ಅಭಿನಂದಿಸಿದೆ.ಈ ಹಿಂದೆ ಕೋವಿಡ್ ಸಾಂಕ್ರಾಮಿಕ ಮತ್ತು ಪ್ರವಾಹದ ಸಂದರ್ಭಗಳಲ್ಲಿಯೂ ಹೆಮ್ಮೆಯ ದುಬೈ ಕನ್ನಡ ಸಂಘವು ಕನ್ನಡ ಮನಸುಗಳು ತಂಡದೊಂದಿಗೆ ಕೈಜೋಡಿಸಿ ಕರ್ನಾಟಕದಲ್ಲಿ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿತ್ತು.