ದೀಪಾವಳಿ ನಂತರ ಯುಪಿಐ ಶುಲ್ಕ ಜಾರಿ – ವರ್ತಕರ ಮನವಿಗೆ ಸ್ಪಂದನೆ
ನವದೆಹಲಿ: ದೀಪಾವಳಿ(Deepavali) ನಂತರ ಯುಪಿಐ ಶುಲ್ಕ ಜಾರಿ ಮಾಡಲಾಗುವುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತಿಳಿಸಿದೆ. ಯುಪಿಐ (UPI) ವಹಿವಾಟುಗಳ ಮೇಲಿನ ಶುಲ್ಕ ವಿಧಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ವ್ಯಾಪಾರಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಎನ್ಪಿಸಿಐ ನವೆಂಬರ್ ಎರಡನೇ ವಾರದಲ್ಲಿ ಜಾರಿಯಾಗಲಿದೆ ಎಂದು ಹೇಳಿದೆ.

ನವದೆಹಲಿ: ದೀಪಾವಳಿ(Deepavali) ನಂತರ ಯುಪಿಐ ಶುಲ್ಕ ಜಾರಿ ಮಾಡಲಾಗುವುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತಿಳಿಸಿದೆ. ಯುಪಿಐ (UPI) ವಹಿವಾಟುಗಳ ಮೇಲಿನ ಶುಲ್ಕ ವಿಧಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ವ್ಯಾಪಾರಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಎನ್ಪಿಸಿಐ ನವೆಂಬರ್ ಎರಡನೇ ವಾರದಲ್ಲಿ ಜಾರಿಯಾಗಲಿದೆ ಎಂದು ಹೇಳಿದೆ. ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು, ಆಯ್ದ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್(MDR) ಅನ್ನು ದೀಪಾವಳಿ ಮುಗಿದ ತಕ್ಷಣ ಜಾರಿಗೆ ತರಲು ಯುಪಿಐ ಮತ್ತು ಸರ್ವೀಸಸ್ ಸ್ಟೀರಿಂಗ್ ಕಮಿಟಿ ನಿರ್ಧರಿಸಿದೆ ಎಂದು ಎನ್ಪಿಸಿಐ ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಜಾರಿಯಾಗುವ ನಿಖರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. UPI MDR on Select Merchant Transactions Shall be Implemented Post Diwali Press Release Link: https://t.co/5KMjOP0tHd https://t.co/pD8IKfN6sR — NPCI (@NPCI_NPCI) October 13, 2026 ಮುಂದೂಡಿದ್ದು ಯಾಕೆ? ಹಿಂದಿನ ವೇಳಾಪಟ್ಟಿಯ ಪ್ರಕಾರ ಈ ಶುಲ್ಕವು ಅಕ್ಟೋಬರ್ 15 ರಿಂದ ಜಾರಿಗೆ ಬರಬೇಕಿತ್ತು. ಆದರೆ, ಆ ಸಮಯವು ಗ್ರಾಹಕರ ಖರೀದಿ ಗರಿಷ್ಠ ಮಟ್ಟದಲ್ಲಿರುವ ದಸರಾ-ದೀಪಾವಳಿ ಹಬ್ಬದ ಋತುವಿನೊಂದಿಗೆ ಹೊಂದಿಕೆಯಾಗುತ್ತಿತ್ತು. ಹಬ್ಬದ ಹೊತ್ತಿನಲ್ಲಿ ದಿಢೀರ್ ಬದಲಾವಣೆ ತಂದರೆ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ಮತ್ತು ಪಾವತಿ ಕಂಪನಿಗಳು ತಮ್ಮ ತಾಂತ್ರಿಕ ವ್ಯವಸ್ಥೆಗಳನ್ನು ಅಪ್ಡೇಟ್ ಮಾಡಿಕೊಳ್ಳಲು ಹೆಚ್ಚಿನ ಕಾಲಾವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಇನ್ಮುಂದೆ ಯುಪಿಐ ಉಚಿತವಲ್ಲ – ಗ್ರಾಹಕರ ಮೇಲೆ ಏನು ಪರಿಣಾಮ? ಶುಲ್ಕ ವಿಧಿಸಿದ್ದು ಯಾಕೆ? ಯಾರಿಗೆ ಲಾಭ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ಯಾವುದಕ್ಕೆ ಎಷ್ಟು ಪಾವತಿ ದರ? • 2,000 ರೂ. ವರೆಗಿನ ವಹಿವಾಟು: ಯಾವುದೇ ಶುಲ್ಕವಿಲ್ಲ • 2,000 ರೂ. ಕ್ಕಿಂತ ಹೆಚ್ಚಿನ ವ್ಯಾಪಾರಿ ಪಾವತಿಗಳು (P2M): 0.4% MDR ಅನ್ವಯ • ಗರಿಷ್ಠ ಮಿತಿ 75,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ದೊಡ್ಡ ವಹಿವಾಟುಗಳಿಗೆ ಗರಿಷ್ಠ ಶುಲ್ಕವನ್ನು 300 ರೂ.ಗೆ ಮಿತಿಗೊಳಿಸಲಾಗಿದೆ. • ಅತ್ಯಗತ್ಯ ಸೇವೆಗಳಿಗೆ ಸ್ಥಿರ ದರ: ರೈಲ್ವೆ, ಟೆಲಿಕಾಂ, ವಿಮೆ, ಇಂಧನ, ಮತ್ತು ಕೃಷಿ ಪರಿಕರಗಳ ಖರೀದಿಗೆ 2,000 ಕ್ಕಿಂತ ಹೆಚ್ಚಿನ ವಹಿವಾಟು ನಡೆದರೆ 0.4% ಬದಲಾಗಿ 5 ರೂ.ಸ್ಥಿರ ಶುಲ್ಕ ಇರುತ್ತದೆ. • ಬಂಡವಾಳ ಮಾರುಕಟ್ಟೆ ಪಾವತಿಗಳು: ಮ್ಯೂಚುವಲ್ ಫಂಡ್, ಸ್ಟಾಕ್ ಬ್ರೋಕರ್ ಮತ್ತು ಸೆಕ್ಯುರಿಟೀಸ್ ಪಾವತಿಗಳಿಗೆ 0.02% MDR ಗರಿಷ್ಠ 300 ರೂ. ಯಾರಿಗೆ ಉಚಿತ? ಗ್ರಾಹಕರಿಗೆ ಉಚಿತ: ಈ ಎಂಡಿಆರ್ ಶುಲ್ಕವನ್ನು ಕೇವಲ ವ್ಯಾಪಾರಿಗಳು ಮಾತ್ರ ಭರಿಸಬೇಕು. ಸಾಮಾನ್ಯ ಗ್ರಾಹಕರು ಹಣ ಪಾವತಿಸುವಾಗ ಯಾವುದೇ ಹೆಚ್ಚುವರಿ ಶುಲ್ಕ ಕಡಿತವಾಗುವುದಿಲ್ಲ. ವ್ಯಕ್ತಿಗತ ವರ್ಗಾವಣೆ ಉಚಿತ: ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಯುಪಿಐ ಮೂಲಕ ಎಷ್ಟು ಹಣ ಕಳುಹಿಸಿದರೂ ಅದು ಸಂಪೂರ್ಣ ಉಚಿತವಾಗಿರುತ್ತದೆ. ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ: ತಿಂಗಳಿಗೆ 1 ಲಕ್ಷ ರೂ.ವರೆಗೆ ಯುಪಿಐ ಕ್ಯೂಆರ್ (QR) ಕೋಡ್ ಮೂಲಕ ಆದಾಯ ಪಡೆಯುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಸರ್ಕಾರದ ಸಮರ್ಥನೆ ಏನು? ಯುಪಿಐ ವ್ಯವಸ್ಥೆಯ ಸುರಕ್ಷತೆ, ಸೈಬರ್ ಸೆಕ್ಯೂರಿಟಿ, ವಂಚನೆ ತಡೆ, ತಾಂತ್ರಿಕ ಮೂಲಸೌಕರ್ಯ ಮತ್ತು ಗ್ರಾಹಕ ಸೇವಾ ನೆಟ್ವರ್ಕ್ ನಿರ್ವಹಣೆಗೆ ಹಣಕಾಸಿನ ನೆರವು ಕಲ್ಪಿಸಲು ಈ ಶುಲ್ಕ ಅಗತ್ಯ ಎಂದು ಕೇಂದ್ರ ಸಮರ್ಥಿಸಿಕೊಂಡಿದೆ. ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಯುಪಿಐ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ವಾರ್ಷಿಕವಾಗಿ ಸುಮಾರು 20,000 ಕೋಟಿ ರೂ. ವೆಚ್ಚವಾಗುತ್ತಿದ್ದು, ಸರ್ಕಾರದ ಸಬ್ಸಿಡಿ ಅಥವಾ ಪ್ರೋತ್ಸಾಹಧನವೊಂದೇ ದೀರ್ಘಾವಧಿಯ ಸುಸ್ಥಿರ ಮಾದರಿಯಾಗಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.