AI, ಪರಮಾಣು ಯುದ್ಧ.. ಮಾನವಕುಲದ ವಿನಾಶಕ್ಕೆ ಕಾರಣವಾಗಬಲ್ಲವು ಈ 17 ಕಂಟಕಗಳು
ಬರ್ಲಿನ್/ನವದೆಹಲಿ: ಕೃತಕ ಬುದ್ಧಿಮತ್ತೆಯ (ಎಐ) ದುರುಪಯೋಗ, ಪರಮಾಣು ಯುದ್ಧ, ಪರಿಸರ ನಾಶ ಹಾಗೂ ರೋಗಗಳು ಸೇರಿದಂತೆ 17 ಕಂಟಕಗಳು ಮನುಕುಲದ ವಿನಾಶಕ್ಕೆ ಕಾರಣವಾಗಲಿವೆ ಎಂದು 'ದಿ ಲ್ಯಾನ್ಸೆಟ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ಎಚ್ಚರಿಸಿದೆ.ವಿಶ್ವದ 204 ದೇಶಗಳು ಹಾಗೂ ಪ್ರಾಂತ್ಯಗಳಲ್ಲಿನ ದತ್ತಾಂಶಗಳನ್ನು ಆಧರಿಸಿ ವಾಷಿಂಗ್ಟನ್ ವಿಶ್ವವಿದ್ಯಾಲಯ

ಬರ್ಲಿನ್/ನವದೆಹಲಿ: ಕೃತಕ ಬುದ್ಧಿಮತ್ತೆಯ (ಎಐ) ದುರುಪಯೋಗ, ಪರಮಾಣು ಯುದ್ಧ, ಪರಿಸರ ನಾಶ ಹಾಗೂ ರೋಗಗಳು ಸೇರಿದಂತೆ 17 ಕಂಟಕಗಳು ಮನುಕುಲದ ವಿನಾಶಕ್ಕೆ ಕಾರಣವಾಗಲಿವೆ ಎಂದು 'ದಿ ಲ್ಯಾನ್ಸೆಟ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ಎಚ್ಚರಿಸಿದೆ.ವಿಶ್ವದ 204 ದೇಶಗಳು ಹಾಗೂ ಪ್ರಾಂತ್ಯಗಳಲ್ಲಿನ ದತ್ತಾಂಶಗಳನ್ನು ಆಧರಿಸಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ಐಎಚ್ಎಂಇ ಈ ಸಂಶೋಧನೆ ನಡೆಸಿದೆ.ಕೃತಕ ಬುದ್ಧಿಮತ್ತೆ ಹಾಗೂ ಪರಮಾಣು ಯುದ್ಧದ ಭೀತಿ:ವರದಿಯ ಪ್ರಕಾರ, ಕೃತಕ ಬುದ್ಧಿಮತ್ತೆಯ ದುರುಪಯೋಗ ಮತ್ತು ಪರಮಾಣು ಸಮರಗಳು ಜಗತ್ತಿನ ವಿನಾಶಕ್ಕೇ ಕಾರಣವಾಗಬಲ್ಲ ಪ್ರಮುಖ ಎರಡು ಕಂಟಕಗಳಾಗಿವೆ.ವಾಯು ಮಾಲಿನ್ಯ, ಅತಿಯಾದ ಮದ್ಯಪಾನ ಸೇರಿದಂತೆ ಹಲವು ಅಂಶಗಳು ಇದರಲ್ಲಿ ಸೇರಿವೆ. 21ನೇ ಶತಮಾನದಲ್ಲಿ ಮಾನವಕುಲಕ್ಕೆ ಎದುರಾಗಲಿರುವ 17 ಪ್ರಮುಖ ಆರೋಗ್ಯ ಬೆದರಿಕೆಗಳನ್ನು ಭಾರತವೂ ಎದುರಿಸುತ್ತಿದೆ ಎಂದೂ ಲ್ಯಾನ್ಸೆಟ್ ವರದಿ ಹೇಳಿದೆ.'ಬೊಜ್ಜು' ಜಗತ್ತಿನ ಅತಿದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಲಿದೆ. ಹವಾಮಾನ ವೈಪರೀತ್ಯ, ಯುದ್ಧಗಳು ಮತ್ತು ವಾಯು ಮಾಲಿನ್ಯ ಮಾನವನ ಜೀವಿತಾವಧಿಯನ್ನು ಕುಂಠಿತಗೊಳಿಸುತ್ತವೆ. ಸರಿಯಾದ ಸಮಯಕ್ಕೆ ಸರ್ಕಾರಗಳು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಪೀಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶ್ವದ 204 ದೇಶಗಳು ಹಾಗೂ ಪ್ರಾಂತ್ಯಗಳ ದತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಲಾದ ಈ ವರದಿಯು, 21ನೇ ಶತಮಾನದ ಅಂತ್ಯದ ವೇಳೆಗೆ ಮಾನವನ ಜೀವಿತಾವಧಿಯನ್ನು ಕುಂಠಿತಗೊಳಿಸಬಲ್ಲ 17 ಪ್ರಮುಖ ಕಂಟಕಗಳನ್ನು ಪಟ್ಟಿ ಮಾಡಿದೆ. ಅವುಗಳು ಹೀಗಿವೆ..ಕೃತಕ ಬುದ್ಧಿಮತ್ತೆಯ (ಎಐ) ದುರುಪಯೋಗ: ಎಐ ತಂತ್ರಜ್ಞಾನವನ್ನು ಜೈವಿಕ ಅಸ್ತ್ರಗಳ (Biological Weapons) ತಯಾರಿಕೆಗೆ ಬಳಸುವುದು ಅಥವಾ ಮೂಲಭೂತ ಸೌಕರ್ಯಗಳ ಮೇಲೆ ದಾಳಿ ಮಾಡಲು ದುರುಪಯೋಗಪಡಿಸಿಕೊಳ್ಳುವುದು ಜಗತ್ತಿನ ವಿನಾಶಕ್ಕೆ ದಾರಿಯಾಗಬಹುದು.ಪರಮಾಣು ಯುದ್ಧ (Nuclear Conflict): ಇದು ನೇರ ಸಾವು-ನೋವು ಮಾತ್ರವಲ್ಲದೆ, ಇಡೀ ಜಗತ್ತಿನ ಕೃಷಿ ಮತ್ತು ಆಹಾರ ಉತ್ಪಾದನೆಯನ್ನು ನಾಶಪಡಿಸಿ ಭೀಕರ ಕ್ಷಾಮಕ್ಕೆ ಕಾರಣವಾಗಲಿದೆ. ಮುನ್ನೆಚ್ಚರಿಕೆ ವಹಿಸಿದರೆ ಪರಮಾಣು ಸಮರದಿಂದಾಗುವ13.3 ಕೋಟಿ ಜೀವ ಹಾನಿಯನ್ನು ತಡೆಯಬಹುದು ಎಂದು ವರದಿ ಹೇಳಿದೆ.ಹವಾಮಾನ ವೈಪರೀತ್ಯ: ತೀವ್ರ ಶಾಖ ಮತ್ತು ಆಹಾರದ ಅಭದ್ರತೆ ಎದುರಾಗಬಹುದು. ವಾಯು ಮಾಲಿನ್ಯ: ಉಸಿರಾಟದ ತೊಂದರೆ ಮತ್ತು ಅವಧಿಗೂ ಮುನ್ನ ಸಾವು ಸಂಭವಿಸುವುದು. ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR): ಆಂಟಿಬಯೋಟಿಕ್ಸ್ಗಳ ಅನಗತ್ಯ/ಅತಿಯಾದ ಬಳಕೆ ಮತ್ತು ಸೋಂಕು ನಿಯಂತ್ರಣದ ಕೊರತೆಯಿಂದಾಗಿ ಸಾಮಾನ್ಯ ರೋಗಗಳಿಗೂ ಮದ್ದು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆ: ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಕುಂಠಿತ. ಯುದ್ಧಗಳು: ದೇಶಗಳ ನಡುವಿನ ಯುದ್ಧ, ವೈದ್ಯಕೀಯ ವ್ಯವಸ್ಥೆಯ ನಾಶ. ಆರೋಗ್ಯ ಅನುದಾನದ ಕೊರತೆ: ಬಡ ದೇಶಗಳಿಗೆ ಸಿಗುವ ಅಂತರರಾಷ್ಟ್ರೀಯ ವೈದ್ಯಕೀಯ ನೆರವು ಕಡಿಮೆಯಾಗುವುದು.ಅತಿಯಾದ ಮದ್ಯಪಾನ: ಯಕೃತ್ತು ಮತ್ತು ಹೃದಯಸಂಬಂಧಿ ಕಾಯಿಲೆಗಳ ಹೆಚ್ಚಳಅಧಿಕ ರಕ್ತದೊತ್ತಡ: ಸ್ಟ್ರೋಕ್ ಮತ್ತು ಹೃದಯಾಘಾತದ ಭೀತಿ. ಆದಾಯದ ಅಸಮಾನತೆ: ಬಡ ಹಾಗೂ ಶ್ರೀಮಂತರ ನಡುವಿನ ಆರೋಗ್ಯ ಸೇವೆಯ ಅಂತರ. ಶಿಕ್ಷಣದ ಕೊರತೆ: ಆರೋಗ್ಯದ ಜಾಗೃತಿ ಇಲ್ಲದಿರುವುದು. ಸಾಂಕ್ರಾಮಿಕ ರೋಗಗಳು: ಕೋವಿಡ್-19ನಂತಹ ಹೊಸ ರೋಗಗಳ ಹರಡುವಿಕೆ. ಅತಿಯಾದ ಬೊಜ್ಜು (Obesity): ಮಧುಮೇಹ ಮತ್ತು ಕ್ಯಾನ್ಸರ್ಗೆ ಪ್ರಮುಖ ಕಾರಣ. ಮಾನಸಿಕ ಆರೋಗ್ಯ ಕ್ಷೀಣಿಸುವುದು: ಖಿನ್ನತೆ ಮತ್ತು ಮಾನಸಿಕ ಒತ್ತಡಗಳು. ಧೂಮಪಾನ/ತಂಬಾಕು ಸೇವನೆ: ಶ್ವಾಸಕೋಶದ ಕ್ಯಾನ್ಸರ್ ಮತ್ತು ಉಸಿರಾಟದ ತೊಂದರೆ. ಅನಾರೋಗ್ಯಕರ ವೃದ್ಧಾಪ್ಯ (Unhealthy aging) : ಸುಧೀರ್ಘ ಆಯುಷ್ಯವಿದ್ದರೂ ರೋಗಗ್ರಸ್ತ ಜೀವನ.ಬಡ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಹೆಚ್ಚಿನ ಏಟು:ಈ ಅಪಾಯಗಳು ಇಡೀ ಜಗತ್ತಿಗೆ ಅನ್ವಯಿಸಿದರೂ, ಉತ್ತಮ ಆಸ್ಪತ್ರೆಗಳು ಹಾಗೂ ಹಣಕಾಸಿನ ಸೌಲಭ್ಯವಿರುವ ಶ್ರೀಮಂತ ದೇಶಗಳು ಇವುಗಳನ್ನು ಎದುರಿಸಬಲ್ಲವು. ಆದರೆ ಬಡತನ, ಅಪೌಷ್ಟಿಕತೆ ಹಾಗೂ ಕನಿಷ್ಠ ವೈದ್ಯಕೀಯ ಸೌಲಭ್ಯವಿಲ್ಲದ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ನಾಗರಿಕರು (ಭಾರತವೂ ಸೇರಿದಂತೆ) ಇದರಿಂದ ಭಾರಿ ತೊಂದರೆಗೆ ಒಳಗಾಗಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.ಪರಿಹಾರೋಪಾಯಗಳೇನು? ಆರೋಗ್ಯ ವ್ಯವಸ್ಥೆಯ ಸಜ್ಜುಗೊಳಿಸುವಿಕೆ: ರೋಗಗಳನ್ನು ಬೇಗನೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ದೇಶಗಳು ತಮ್ಮ ವೈದ್ಯಕೀಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕು. ಹೊಸ ಸಂಶೋಧನೆಗಳಿಗೆ ಹೂಡಿಕೆ: ಹೊಸ ರೀತಿಯ ಲಸಿಕೆಗಳು ಹಾಗೂ ಔಷಧಗಳ ಸಂಶೋಧನೆಗೆ ಹೆಚ್ಚಿನ ಹಣ ಹೂಡಿಕೆ ಮಾಡಬೇಕು. ನಿರಂತರ ನಿಗಾ: ಹವಾಮಾನ, ತಂತ್ರಜ್ಞಾನ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಎದುರಾಗುವ ಹೊಸ ಆತಂಕಗಳ ಮೇಲೆ ಕಣ್ಣಿಡುವ ಜಾಗತಿಕ ವ್ಯವಸ್ಥೆಯನ್ನು ರೂಪಿಸಬೇಕು.