ಗುಂಡ್ಲುಪೇಟೆ| ಜಿಂಕೆ ಬೇಟೆಯಾಡಿ ಮಾಂಸ ಸಾಗಣೆ: ಆರೋಪಿ ಬಂಧನ
ಗುಂಡ್ಲುಪೇಟೆ: ಜಿಂಕೆ ಬೇಟೆಯಾಡಿ ಮಾಂಸ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಅಣ್ಣೂರು ಕೇರಿ ಗ್ರಾಮದ ಶಿವಶೆಟ್ಟಿ ಎಂಬಾತನನ್ನು ಮಾಂಸ ಸಮೇತ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬಫರ್ ಜೋನ್ ವ್ಯಾಪ್ತಿಯ ನೇನೇಕಟ್ಟೆ ಅರಣ್ಯದಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ರಂಗಶೆಟ್ಟಿ ಪರಾರಿಯಾಗಿದ್ದಾನೆ.ಇಬ್ಬರು ಭಾನುವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಜಿಂಕೆಯ ಚರ್ಮ,

ಗುಂಡ್ಲುಪೇಟೆ: ಜಿಂಕೆ ಬೇಟೆಯಾಡಿ ಮಾಂಸ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಅಣ್ಣೂರು ಕೇರಿ ಗ್ರಾಮದ ಶಿವಶೆಟ್ಟಿ ಎಂಬಾತನನ್ನು ಮಾಂಸ ಸಮೇತ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬಫರ್ ಜೋನ್ ವ್ಯಾಪ್ತಿಯ ನೇನೇಕಟ್ಟೆ ಅರಣ್ಯದಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ರಂಗಶೆಟ್ಟಿ ಪರಾರಿಯಾಗಿದ್ದಾನೆ.ಇಬ್ಬರು ಭಾನುವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಜಿಂಕೆಯ ಚರ್ಮ, ಮಾಂಸ ಹಾಗೂ ನಾಡಬಂದೂಕಿನೊಂದಿಗೆ ಬರುತ್ತಿದ್ದ ವೇಳೆ ಬಫರ್ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಜಿಂಕೆಯ ಚರ್ಮ, ಮಾಂಸ, ಬೇಟೆಗೆ ಬಳಸಿದ್ದ ನಾಡಬಂದೂಕು, ಬ್ಯಾಟರಿಗಳು, ಚಾಕು ಹಾಗೂ ದ್ವಿಚಕ್ರ ವಾಹನವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಎಸಿಎಫ್ ವಿನೋದ್ ಮಾರ್ಗದರ್ಶನದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬಫರ್ ಜೋನ್ ವಲಯದ ಡಿಆರ್ಎಫ್ಒ ಶಿವಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.261013-37-2031431218
Read the complete story at Prajavani