ಜಂತರ್ ಮಂತರ್ಗೆ ನುಗ್ಗಿ ಪ್ರತಿಭಟನೆ: ಸೌರವ್ ದಾಸ್, ಅಶುತೋಷ್ ರಾಂಕಾ ವಶಕ್ಕೆ
ನವದೆಹಲಿ: ನಿರ್ಬಂಧ ವಿಧಿಸಿದ್ದರೂ ಜಂತರ್ ಮಂತರ್ಗೆ ನುಗ್ಗಿ ಪ್ರತಿಭಟನೆ ನಡೆಸಿದ ಸಿಜೆಪಿ ವಕ್ತರರಾದ ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ರಾಷ್ಟ್ರಧ್ವಜವನ್ನು ಹಿಡಿದು ಸೌರವ್ ದಾಸ್, ಅಶುತೋಷ್ ರಾಂಕಾ ಇತರರು ಜಂತರ್ ಮಂತರ್ಗೆ ನುಗ್ಗಿದ್ದರು. ಗೋಡೆ ಹಾರಿ ನುಗ್ಗಿದ್ದ ಇವರು ರಸ್ತೆಯಲ್ಲಿ ತ್ರಿವರ್ಣ ಧಜ್ವ ಹಾರಿಸಿ

ನವದೆಹಲಿ: ನಿರ್ಬಂಧ ವಿಧಿಸಿದ್ದರೂ ಜಂತರ್ ಮಂತರ್ಗೆ ನುಗ್ಗಿ ಪ್ರತಿಭಟನೆ ನಡೆಸಿದ ಸಿಜೆಪಿ ವಕ್ತರರಾದ ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ರಾಷ್ಟ್ರಧ್ವಜವನ್ನು ಹಿಡಿದು ಸೌರವ್ ದಾಸ್, ಅಶುತೋಷ್ ರಾಂಕಾ ಇತರರು ಜಂತರ್ ಮಂತರ್ಗೆ ನುಗ್ಗಿದ್ದರು. ಗೋಡೆ ಹಾರಿ ನುಗ್ಗಿದ್ದ ಇವರು ರಸ್ತೆಯಲ್ಲಿ ತ್ರಿವರ್ಣ ಧಜ್ವ ಹಾರಿಸಿ ಘೋಷಣೆ ಕೂಗಿದ್ದಾರೆ. ಸಿಜೆಪಿ ಕಾರ್ಯಕರ್ತರು ನುಗ್ಗಿದ ಕೂಡಲೇ ಅಲ್ಲಿದ್ದ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. Save Democracy https://t.co/l2y2BhyzzC — Cockroach Janta Party – CJP (@Cockroachisback) October 13, 2026 ಶನಿವಾರ ಬೆಳಗ್ಗೆ ವಿಮಾನದ ಒಳಗಡಯೇ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದು ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿದ್ದರು. ಬಿಡುಗಡೆಯ ವೇಳೆ 50 ಸಾವಿರ ರೂ. ಬಾಂಡ್ ಮತ್ತು 1 ವರ್ಷ ಶಾಂತಿಗೆ ಭಂಗ ತರುವ ಕೆಲಸ ಮಾಡುವುದಿಲ್ಲ ಎಂದು ಷರತ್ತಿಗೆ ಸಹಿ ಹಾಕಿ ಬಿಡುಗಡೆಯಾಗಿದ್ದರು. ಇದನ್ನೂ ಓದಿ: ಇನ್ಮುಂದೆ ಜಂತರ್ ಮಂತರ್ನಲ್ಲಿ ಪ್ರತಿಭಟನೆಯೇ ಬಂದ್! Cockroaches with the Tiranga sneaked into Jantar Mantar early this morning before they were picked up by Delhi Police. @AshutoshRanka, @SauravDassss, @AjinkyaCJP along with other team members have been detained. You cannot denotify the resistance, @narendramodi https://t.co/x7B40akCVO — Abhijeet Dipke (@abhijeet_dipke) October 13, 2026 ದೆಹಲಿಯಲ್ಲಿ ಪ್ರತಿಭಟನೆ(Protest) ಹಾಗೂ ಧರಣಿಗಳಿಗೆ ಹೆಸರುವಾಸಿಯಾಗಿದ್ದ ಐತಿಹಾಸಿಕ ಜಂತರ್ ಮಂತರ್(Jantar Mantar) ಸ್ಥಳವನ್ನು ಪ್ರತಿಭಟನಾ ತಾಣಗಳ ಪಟ್ಟಿಯಿಂದ ಅಧಿಕೃತವಾಗಿ ಸೋಮವಾರ ರದ್ದುಗೊಳಿಸಲಾಗಿತ್ತು. We are not going to bow down to your dictatorial orders! Today, Cockroaches waved the Tricolour at Jantar Mantar https://t.co/pS0mlTiRCN — Cockroach Janta Party – CJP (@Cockroachisback) October 13, 2026 ಜಂತರ್ ಮಂತರ್ನಲ್ಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆ ನಡೆಸಲು ಅವಕಾಶವಿರುವುದಿಲ್ಲ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ದೆಹಲಿ ಪೊಲೀಸ್(Delhi Police) ಕಮಿಷನರ್ ಕಚೇರಿಯು ಅಧಿಕೃತ ಆದೇಶ ಹೊರಡಿಸಿತ್ತು.