ನೇಹಾ ಬೋರಾ ಹೋರಾಟದ ಹಾದಿ.. ಸಾಮಾಜಿಕ ಜಾಲತಾಣದಲ್ಲಿ ಹೆಣ್ಣುಹುಲಿ ಎಂದ ನೆಟ್ಟಿಗರು..
ಚುನಾವಣಾ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಜಂತರ್ ಮಂತರ್ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡುತ್ತಾ, ಬ್ಯಾರಿಕೇಡ್ಗಳನ್ನು ಹತ್ತಿ ಇಡೀ ದೇಶದ ಗಮನ ಸೆಳೆದ 29 ವರ್ಷದ ಯುವತಿ ನೇಹಾ ಬೋರಾ ಈಗ ಸಾಮಾಜಿಕ ಜಾಲ

ಚುನಾವಣಾ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಜಂತರ್ ಮಂತರ್ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡುತ್ತಾ, ಬ್ಯಾರಿಕೇಡ್ಗಳನ್ನು ಹತ್ತಿ ಇಡೀ ದೇಶದ ಗಮನ ಸೆಳೆದ 29 ವರ್ಷದ ಯುವತಿ ನೇಹಾ ಬೋರಾ ಈಗ ಸಾಮಾಜಿಕ ಜಾಲತಾಣಗಳಲ್ಲಿ 'ಶೇರ್ನಿ' (ಹೆಣ್ಣುಹುಲಿ) ಎಂದೇ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ.ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ನ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ನೇಹಾ ಬೋರಾ ಅವರ ಹೋರಾಟದ ಹಾದಿ ನೋಡುವುದಾದರೆ; ಮುಖ್ಯಮಂತ್ರಿ ಡಿಕೆಶಿ ಹಿಡಿದೆಳೆದ ರಾಹುಲ್: ನಿಜಕ್ಕೂ ನಡೆದಿದ್ದೇನು?AI, ಪರಮಾಣು ಯುದ್ಧ.. ಮಾನವಕುಲದ ವಿನಾಶಕ್ಕೆ ಕಾರಣವಾಗಬಲ್ಲವು ಈ 17 ಕಂಟಕಗಳುಬೆಳೆದು ಬಂದ ಹಾದಿ..ನೇಹಾ ಬೋರಾ ಉತ್ತರಾಖಂಡದ ಖಾತಿಮಾದಲ್ಲಿ ಜನಿಸಿದರು. ಅವರ ತಂದೆ ಭಾರತೀಯ ಸೇನೆಯಲ್ಲಿದ್ದ ಕಾರಣ, ಅವರು ಬಾಲ್ಯದ ದಿನಗಳನ್ನು ಅನೇಕ ನಗರಗಳಲ್ಲಿ ಕಳೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 10, 11 ಮತ್ತು 12 ನೇ ತರಗತಿ ಶಿಕ್ಷಣ ಮುಗಿಸಿದ ನೇಹಾ, 'ಚಾರು ಮಜುಂದಾರ್', 'ಪಬ್ಲೋ ನೆರುಡಾ' ಮತ್ತು 'ಅರುಂಧತಿ ರಾಯ್' ಅವರ ಬರಹಗಳಿಂದ ಪ್ರಭಾವಿತರಾದರು.ಜಂತರ್ ಮಂತರ್ ಪ್ರತಿಭಟನೆಯಲ್ಲಿ ನೇಹಾ ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ, ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ 'ಪರ್ಫಾರ್ಮೆನ್ಸ್ ಸ್ಟಡೀಸ್'ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನೇಹಾ ಸದ್ಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ 'ಥಿಯೇಟರ್ ಅಂಡ್ ಪರ್ಫಾರ್ಮೆನ್ಸ್ ಸ್ಟಡೀಸ್' ವಿಷಯದಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದಾರೆ.ದೆಹಲಿ ಮೂಲದ 'ಸಂಗ್ವಾರಿ' ಎಂಬ ಬೀದಿ ನಾಟಕ ತಂಡದ ಸಕ್ರಿಯ ಸದಸ್ಯೆಯಾಗಿರುವ ನೇಹಾ, ರಂಗಭೂಮಿಯು ತಮಗೆ ವಿಭಿನ್ನ ಮನಸ್ಥಿತಿಯ ಜನರನ್ನು ಅರ್ಥಮಾಡಿಕೊಳ್ಳಲು ಕಲಿಸಿಕೊಟ್ಟಿದೆ ಎಂದು ಹೇಳುತ್ತಾರೆ. ಜೆಎನ್ಯುನಲ್ಲಿದ್ದಾಗ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಲಿಬರೇಶನ್ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿದ್ಯಾರ್ಥಿ ಸಂಘಟನೆಯನ್ನು (ಎಐಎಸ್ಎ) ಸೇರಿ ಪ್ರಸ್ತುತ ಅದರ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದಾರೆ. ದೇಶಮಟ್ಟದಲ್ಲಿ ಗಮನ ಸೆಳೆದ ಉಪವಾಸ ಸತ್ಯಾಗ್ರಹ ವಿದ್ಯಾರ್ಥಿ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ನೇಹಾ, ಜುಲೈ ತಿಂಗಳಿನಲ್ಲಿ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಜಂತರ್ ಮಂತರ್ನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹದ ಮೂಲಕ ರಾಷ್ಟ್ರಮಟ್ಟದಲ್ಲಿ ಜನಪ್ರಿಯರಾದರು. ಪರಿಸರ ಹೋರಾಟಗಾರ ಸೋನಮ್ ವಾಂಗ್ಚೂಕ್ ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.ಪ್ರತಿಭಟನೆಯನ್ನು ಶಿವನ ತಾಂಡವಕ್ಕೆ ಹೋಲಿಸಿದ ರಾಹುಲ್: ಕ್ಷಮೆಯಾಚನೆಗೆ VHP ಆಗ್ರಹಜಂತರ್ ಮಂತರ್: ಇತಿಹಾಸ, ವಿಜ್ಞಾನ ಮತ್ತು ಹೋರಾಟಗಳ ಸಂಗಮ ಸತತ 23 ದಿನಗಳ ಕಾಲ ಸುದೀರ್ಘ ಉಪವಾಸ ನಡೆಸಿದ್ದ ನೇಹಾ ಸುಮಾರು 8 ಕೆ.ಜಿ ತೂಕ ಕಳೆದುಕೊಂಡಿದ್ದರು. ಸಂಸದರು ಮತ್ತು ಹಿರಿಯ ನಾಯಕರ ಮನವಿಯ ಮೇರೆಗೆ ಉಪವಾಸ ಅಂತ್ಯಗೊಳಿಸಿದ ಅವರು, ಬಳಿಕ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ರಾಹುಲ್ ಗಾಂಧಿ ಅವರಂತಹ ಪ್ರಮುಖ ರಾಜಕೀಯ ನಾಯಕರೊಂದಿಗೂ ವೇದಿಕೆ ಹಂಚಿಕೊಂಡರು. ಹೋರಾಟದ ಸವಾಲುಗಳು..ನೇಹಾ ಬೋರಾ ಅವರ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ.ಮಸಿ ಬಳಿಯುವ ಯತ್ನ: ಜಾರ್ಖಂಡ್ ಅಸೆಂಬ್ಲಿ ಎದುರು ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಅವರ ಮೇಲೆ ಮಸಿ ಚೆಲ್ಲಲಾಗಿತ್ತು. ‘ನಮ್ಮ ಕೋಪವನ್ನು ಮಸಿಯಿಂದ ತಡೆಯಲು ಸಾಧ್ಯವಿಲ್ಲ‘ ಎಂದು ನೇಹಾ ತಿರುಗೇಟು ನೀಡಿದ್ದರು. View this post on Instagram ಕಾನೂನು ಸಂಕಟ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ನೀಡಿದ ತೀವ್ರ ಹೇಳಿಕೆಗಳಿಗಾಗಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು.ಕುಟುಂಬದಲ್ಲೇ ವಿರೋಧ: ಇಡೀ ಕುಟುಂಬಕ್ಕಿಂತ ಭಿನ್ನ ಸಿದ್ಧಾಂತ ಹೊಂದಿರುವ ನೇಹಾ, ‘ನಾನು ಎಡಪಂಥೀಯ ರಾಜಕೀಯದಲ್ಲಿದ್ದ ಕಾರಣ ನನ್ನ ತಂದೆ ವರ್ಷಗಳಿಂದ ನನ್ನೊಂದಿಗೆ ಮಾತನಾಡುತ್ತಿಲ್ಲ. ಆದರೆ ನನ್ನ ತಾಯಿ ನಿಧಾನವಾಗಿ ಸರ್ಕಾರದ ಲೋಪಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ‘ ಎಂದು ತಮ್ಮ ವೈಯಕ್ತಿಕ ನೋವನ್ನು ಹಂಚಿಕೊಂಡಿದ್ದಾರೆ. ಜ್ಞಾನೇಶ್ ರಾಜೀನಾಮೆಗೆ ಆಗ್ರಹಿಸಿ 2.0 ಪ್ರತಿಭಟನೆಚುನಾವಣಾ ಪ್ರಕ್ರಿಯೆಯ ಅಕ್ರಮಗಳನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ನೇಹಾ ಮುಂಚೂಣಿಯಲ್ಲಿದ್ದರು. ದೆಹಲಿಯ ಪ್ರೆಸ್ ಕ್ಲಬ್ನಲ್ಲಿ ಮಾತನಾಡುತ್ತಾ, 'ಪ್ರಜಾಪ್ರಭುತ್ವವನ್ನು ಉಳಿಸಲು ವಿಪಕ್ಷಗಳು ಮತ್ತು ಸಾಮಾನ್ಯ ಜನರು ಒಂದೆಡೆ ನಿಂತಿದ್ದಾರೆ. ಇನ್ನೊಂದೆಡೆ ಚುನಾವಣಾ ಆಯೋಗ ಮತ್ತು ಬಿಜೆಪಿ ಮಾತ್ರ ಇವೆ' ಎಂದು ವಾಗ್ದಾಳಿ ನಡೆಸಿದ್ದರು. View this post on Instagram ಪ್ರತಿಭಟನೆಯ ವೇಳೆ ದೆಹಲಿಯ ಕೆನಾಟ್ ಪ್ಲೇಸ್ನಲ್ಲಿ ಪೊಲೀಸರು ಇವರನ್ನು ಬಂಧಿಸಲು ಬಂದಾಗ, ನೇಹಾ ಮತ್ತು ಅವರ ಸಹೋದ್ಯೋಗಿಗಳು ಪೊಲೀಸರ ಕಣ್ಣು ತಪ್ಪಿಸಿ ಓಡಿದ್ದರು. ಅಂತಿಮವಾಗಿ ವಿಜಯ್ ಚೌಕ್ನಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು. ಈ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದ ನೇಹಾ, ‘ನಾನೇನು ಓಟಗಾರ್ತಿಯಲ್ಲ, ಆದರೆ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಾ ಈಗ ಓಟಗಾರ್ತಿಯಾಗಿದ್ದೇನೆ‘ ಎಂದಿದ್ದರು.ಬಂಧನದ ಬಳಿಕ ಪೊಲೀಸ್ ವಾಹನದಿಂದ ವಿಡಿಯೊ ಹಂಚಿಕೊಂಡ ನೇಹಾ, 'ಈ ಬಸ್ನಲ್ಲಿ ಉಸಿರಾಡಲು ಜಾಗವಿಲ್ಲ. ಪ್ರತಿಭಟನಾ ವಾಹನಗಳನ್ನು ಜೈಲುಗಳನ್ನಾಗಿ ಮಾಡುತ್ತಿದ್ದೀರಾ?, ಸಾಮಾನ್ಯ ಜನರ ವಿರುದ್ಧ ಸರ್ಕಾರ ಯುದ್ಧ ಸಾರಿದೆ' ಎಂದು ಆಕ್ರೋಶ ಹೊರಹಾಕಿದ್ದರು.ಇದೇ ವೇಳೆ ಮತ್ತೊಂದು ವಿಡಿಯೊದಲ್ಲಿ 'ನನ್ನನ್ನು ಬಂಧಿಸಿ ವಶದಲ್ಲಿ ಇಡಲಾಗಿದೆ. ಆದರೆ, ಈ ಹೋರಾಟ ಅಥವಾ ಚಳವಳಿಯನ್ನಲ್ಲ. ಪೊಲೀಸರು ನಿಮ್ಮನ್ನು ಎಲ್ಲಿ ತಡೆಯುತ್ತಾರೋ, ಅದೇ ಸ್ಥಳದಲ್ಲಿ ಕುಳಿತು ಹೋರಾಟ ಮುಂದುವರಿಸಿ' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊ ಸಂದೇಶ ನೆಟ್ಟಿಗರ ಮನಗೆದ್ದಿತ್ತು.