ಬೀದರ್| ಜಿ.ಪಂ ಸ್ಥಾನ ಮೀಸಲಾತಿಯಲ್ಲಿ ಅನ್ಯಾಯ: ರಾಜಕುಮಾರ ಸಿಂಧೆ
ಬೀದರ್: ‘ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರವನ್ನೂ ಪರಿಶಿಷ್ಟ ಜಾತಿಗೆ ಮೀಸಲಿಡದೆ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಕ್ಷೇತ್ರದ ಎಸ್ಸಿ ಜಿಲ್ಲಾ ಪಂಚಾಯಿತಿ ಹೋರಾಟ ಸಮಿತಿ ಮುಖಂಡ ರಾಜಕುಮಾರ ಸಿಂಧೆ ಆರೋಪಿಸಿದರು.ಜಿಲ್ಲೆಯಲ್ಲಿ ಒಟ್ಟು 34 ಸ್ಥಾನಗಳಿದ್ದು, ಈ ಹಿಂದೆ 12ರಷ್ಟ

ಬೀದರ್: ‘ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರವನ್ನೂ ಪರಿಶಿಷ್ಟ ಜಾತಿಗೆ ಮೀಸಲಿಡದೆ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಕ್ಷೇತ್ರದ ಎಸ್ಸಿ ಜಿಲ್ಲಾ ಪಂಚಾಯಿತಿ ಹೋರಾಟ ಸಮಿತಿ ಮುಖಂಡ ರಾಜಕುಮಾರ ಸಿಂಧೆ ಆರೋಪಿಸಿದರು.ಜಿಲ್ಲೆಯಲ್ಲಿ ಒಟ್ಟು 34 ಸ್ಥಾನಗಳಿದ್ದು, ಈ ಹಿಂದೆ 12ರಷ್ಟಿದ್ದ ಎಸ್ಸಿ ಮೀಸಲು ಕ್ಷೇತ್ರಗಳನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ 9ಕ್ಕೆ ಇಳಿಸಲಾಗಿದೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ 80 ಸಾವಿರಕ್ಕೂ ಅಧಿಕ ದಲಿತ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಎಸ್ಸಿ ಮತ್ತು ಎಸ್ಟಿ ಜನಸಂಖ್ಯೆ ಶೇ. 42.96ರಷ್ಟಿದೆ. ಹೀಗಿದ್ದರೂ 6 ಸ್ಥಾನಗಳಲ್ಲಿ ಒಂದು ಎಸ್ಸಿಗೆ ಮೀಸಲಿಟ್ಟಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಬೇಮಳಖೇಡ ಹಾಗೂ ಔರಾದ್ (ಎಸ್) ಕ್ಷೇತ್ರಗಳನ್ನು ಈ ಹಿಂದೆಯೂ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿತ್ತು, ಈಗಲೂ ಅದೇ ಮೀಸಲಾತಿ ಮುಂದುವರೆಸಲಾಗಿದೆ. ಬಗದಲ್, ಕಮಠಾಣ, ಮನ್ನಳ್ಳಿ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ. ಹಿಂದುಳಿದ ಪ್ರದೇಶವಾದ ಬೇಮಳಖೇಡ ಹಾಗೂ ಔರಾದ್ (ಎಸ್) ಸೇರಿದಂತೆ ಅನುಪಾತದ ಆಧಾರದ ಮೇಲೆ ಕನಿಷ್ಠ 2 ರಿಂದ 3 ಕ್ಷೇತ್ರಗಳನ್ನು ಎಸ್ಸಿ ಮೀಸಲು ಕ್ಷೇತ್ರವಾಗಿ ಘೋಷಿಸಬೇಕಿತ್ತು ಎಂದರು.ಈ ಅನ್ಯಾಯದ ವಿರುದ್ಧ ಅ.16ರಂದು ಹಮ್ಮಿಕೊಂಡಿರುವ ಹೋರಾಟದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.ಸಮಿತಿಯ ಉಪಾಧ್ಯಕ್ಷ ವೀರಶೆಟ್ಟಿ ಬಂಬುಳಗಿ, ಮುಖಂಡ ಗೌತಮ ಬಗದಲಕರ್, ಭಾರತೀಯ ನ್ಯಾಷನಲ್ ಭೀಮ್ ಆರ್ಮಿ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ದಿಲೀಪಕುಮಾರ್ ವರ್ಮಾ, ರಾಜಕುಮಾರ ಜ್ಯೋತಿ, ಸಮಿತಿಯ ಜಿಲ್ಲಾಧ್ಯಕ್ಷ ರಾಘವೇಂದ್ರ ಕಿರಣ, ಸಮಿತಿಯ ಸಲಹೆಗಾರರಾದ ಪ್ರಕಾಶ್, ಶಿವಕುಮಾರ ಮುತ್ತಂಗಿಕರ್, ಶಿವಕಾಂತ ಹಾರೂರಗೇರಿಕರ್, ವೈಜಿನಾಥ ಕಟ್ಟಿಮನಿ ಉಪಸ್ಥಿತರಿದ್ದರು.261013-33-1588907432