ಹಕ್ಕುಪತ್ರ ಇದ್ದರೂ ಬಡ ಕುಟುಂಬಗಳಿಗೆ ನಿವೇಶನ ನೀಡಿಲ್ಲ: ಬಿಎಸ್ಪಿ ಪ್ರತಿಭಟನೆ
ಬಸವಕಲ್ಯಾಣ: ತಾಲ್ಲೂಕಿನ ಕಿಟ್ಟಾ ಗ್ರಾಮದ ಹಕ್ಕು ಪತ್ರ ಪಡೆದಿರುವವ ಬಡ ಕುಟುಂಬದವರಿಗೆ ನಿವೇಶನ ಒದಗಿಸಲು ಆಗ್ರಹಿಸಿ ಬಿ.ಎಸ್.ಪಿ ಪಕ್ಷದಿಂದ ಸೋಮವಾರ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.ಗ್ರಾಮದ 20 ಕುಟುಂಬದವರಿಗೆ ಹಕ್ಕು ಪತ್ರ ವಿತರಿಸಿ ಅನೇಕ ವರ್ಷಗಳಾಯಿತು. ಆದರೂ ಇದುವರೆಗೆ ನಿವೇಶನ ಮಾತ್ರ ನೀಡಿಲ್ಲ. ಹೀಗಾಗಿ ಸ್ವಂತದ ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಕನ

ಬಸವಕಲ್ಯಾಣ: ತಾಲ್ಲೂಕಿನ ಕಿಟ್ಟಾ ಗ್ರಾಮದ ಹಕ್ಕು ಪತ್ರ ಪಡೆದಿರುವವ ಬಡ ಕುಟುಂಬದವರಿಗೆ ನಿವೇಶನ ಒದಗಿಸಲು ಆಗ್ರಹಿಸಿ ಬಿ.ಎಸ್.ಪಿ ಪಕ್ಷದಿಂದ ಸೋಮವಾರ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.ಗ್ರಾಮದ 20 ಕುಟುಂಬದವರಿಗೆ ಹಕ್ಕು ಪತ್ರ ವಿತರಿಸಿ ಅನೇಕ ವರ್ಷಗಳಾಯಿತು. ಆದರೂ ಇದುವರೆಗೆ ನಿವೇಶನ ಮಾತ್ರ ನೀಡಿಲ್ಲ. ಹೀಗಾಗಿ ಸ್ವಂತದ ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಕನಸಾಗಿಯೆ ಉಳಿದಿದೆ. ಪಿಡಿಒ ಹಾಗೂ ತಾಪಂ ಇಒ ಅವರಿಗೆ ಅನೇಕ ಸಲ ಕೇಳಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ. ಇನ್ನು ಮುಂದಾದರೂ ಈ ಬಗ್ಗೆ ವಿಳಂಬ ಮಾಡಬಾರದು ಎಂದಿದ್ದಾರೆ.ಪಕ್ಷದ ತಾಲ್ಲೂಕು ಅಧ್ಯಕ್ಷ ಶಂಕರ ಫುಲೆ, ಸಂಯೋಜಕ ದತ್ತು ಸುಂಠಾಣೆ, ಮಕಬುಲಸಾಬ್, ರಮೇಶ ರಾಠೋಡ, ಸಚಿನ ಕಾಂಬಳೆ, ರವಿ ಉದಾತೆ, ಮಹಾದೇವ ಗಾಯಕವಾಡ, ಮಸ್ತಾನಸಾಬ್, ರಾಹುಲ್ ವಾಘಮಾರೆ, ಪ್ರಶಾಂತ ಗುಡ್ಡೆ, ಮಾರುತಿ ಮೆಕಾಲೆ, ಜಾವೀದ್, ರಮೇಶ ಮಂಠಾಳಕರ ಮತ್ತಿತರರು ಉಪಸ್ಥಿತರಿದ್ದರು.261013-33-1931138084
Read the complete story at Prajavani