ಲಡಾಖ್ ಭಾರತದ ಅವಿಭಾಜ್ಯ ಅಂಗ: ಚೀನಾಕ್ಕೆ ಭಾರತ ತಿರುಗೇಟು
ನವದೆಹಲಿ: ಲಡಾಖ್ನಲ್ಲಿರುವ 28 ವ್ಯೂಹಾತ್ಮಕ ಸ್ಥಳಗಳು ಹಾಗೂ ಭೌಗೋಳಿಕ ವೈಶಿಷ್ಟತೆಗಳಿಗೆ ಪ್ರಮಾಣೀಕೃತ ಹೆಸರುಗಳನ್ನಿಟ್ಟ ಭಾರತದ ಗೃಹ ಸಚಿವಾಲಯದ ನಿರ್ಧಾರಕ್ಕೆ ಚೀನಾವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಭಾರತವು ತಿರುಗೇಟು ನೀಡಿದೆ.ಚೀನಾ ವಿರೋಧ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರ ಸಚಿವಾಲಯವು (ಎಂಇಎ), ‘ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಭಾರತದ

ನವದೆಹಲಿ: ಲಡಾಖ್ನಲ್ಲಿರುವ 28 ವ್ಯೂಹಾತ್ಮಕ ಸ್ಥಳಗಳು ಹಾಗೂ ಭೌಗೋಳಿಕ ವೈಶಿಷ್ಟತೆಗಳಿಗೆ ಪ್ರಮಾಣೀಕೃತ ಹೆಸರುಗಳನ್ನಿಟ್ಟ ಭಾರತದ ಗೃಹ ಸಚಿವಾಲಯದ ನಿರ್ಧಾರಕ್ಕೆ ಚೀನಾವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಭಾರತವು ತಿರುಗೇಟು ನೀಡಿದೆ.ಚೀನಾ ವಿರೋಧ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರ ಸಚಿವಾಲಯವು (ಎಂಇಎ), ‘ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದೆ. ಇದನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಚೀನಾ ಎಷ್ಟೇ ನಿರಾಕರಿಸಿದರೂ ಈ ಸತ್ಯವನ್ನು ಬದಲಾಯಿಸಲು ಆಗುವುದಿಲ್ಲ’ ಎಂದು ಹೇಳಿದೆ.Our response to media queries regarding comments made by the Chinese side on Ladakh. https://t.co/guiOKfNImD pic.twitter.com/V1tk6dkIKH— Randhir Jaiswal (@MEAIndia) October 13, 2026 ‘ಭಾರತವು ಏಕಪಕ್ಷೀಯವಾಗಿ ಗುರುತಿಸಿರುವ, ಕಾನೂನುಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿರುವ ಲಡಾಖ್ ಅನ್ನು ಚೀನಾವು ಎಂದಿಗೂ ಮಾನ್ಯ ಮಾಡಿಲ್ಲ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ತಿಳಿಸಿದ್ದರು.‘28 ವ್ಯೂಹಾತ್ಮಕ ಸ್ಥಳಗಳಿಗೆ ಭೌಗೋಳಿಕ ವೈಶಿಷ್ಟ್ಯತೆಯ ಹೆಸರುಗಳನ್ನು ಇಡುವ ಭಾರತದ ನಿರ್ಧಾರವನ್ನು ಬೀಜಿಂಗ್ ಬಲವಾಗಿ ವಿರೋಧಿಸುತ್ತದೆ’ ಎಂದು ಹೇಳಿದ್ದರು.‘ಸರ್ಕಾರದ ನಡೆಯು ಅಕ್ರಮ ಹಾಗೂ ಅಮಾನ್ಯವಾಗಿದೆ. ಭಾರತ ಹಾಗೂ ಚೀನಾದ ಗಡಿಭಾಗದಲ್ಲಿರುವ ಪಶ್ಚಿಮ ವಲಯದಲ್ಲಿರುವ ಈ ಪ್ರದೇಶಗಳು ಯಾವಾಗಲೂ ಕೂಡ ಚೀನಾಕ್ಕೆ ಸೇರಿವೆ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದರು.ವ್ಯೂಹಾತ್ಮಕ ಕೇಂದ್ರಗಳ ಪಟ್ಟಿಗೆ ಲಡಾಖ್ನ 28 ಸ್ಥಳಗಳ ಸೇರ್ಪಡೆ...ಭಾರತದ ಅಧಿಕೃತ ಭೂಪಟದಲ್ಲಿ ಲಡಾಖ್ನ ಗಡಿ ಘರ್ಷಣೆಯ ಬಿಂದು ಸೇರಿದಂತೆ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಇರುವ ‘ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್’ ಸೇರಿದಂತೆ 28 ಸ್ಥಳಗಳನ್ನು ವ್ಯೂಹಾತ್ಮಕ ಪ್ರಮುಖ ಸ್ಥಳಗಳು ಹಾಗೂ ಭೌಗೋಳಿಕ ವೈಶಿಷ್ಟ್ಯತೆಯ ಹೆಸರುಗಳನ್ನು ಅಧಿಕೃತವಾಗಿ ಅಕ್ಟೋಬರ್ 2ರಂದು ಮಾನ್ಯ ಮಾಡಿತ್ತು. ಅಧಿಕೃತ ನಕ್ಷೆ ವ್ಯವಸ್ಥೆಯನ್ನು ಸುವ್ಯವಸ್ಥೆಗೊಳಿಸುವುದು, ನಿಖರವಾದ ಗುರುತಿಸುವಿಕೆ ಹಾಗೂ ಸೂಕ್ಷ್ಮ ಗಡಿ ಪ್ರದೇಶದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಡಾಖ್ನ ಆಡಳಿತದೊಂದಿಗೆ ಚರ್ಚೆ ನಡೆಸಿ, ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿತ್ತು. ಇದರಿಂದ ಭಾರತೀಯ ಸೇನೆಯ ಗಸ್ತು ತಿರುಗುವಿಕೆ ಹಾಗೂ ಭದ್ರತಾ ದೃಷ್ಟಿಯಿಂದ ಈ ಸ್ಥಳಗಳಿಗೆ ಅಧಿಕೃತ ಕಾನೂನುಬದ್ಧ ಮಾನ್ಯತೆ ಸಿಕ್ಕಂತಾಗುತ್ತದೆ.ಲಡಾಖ್ನ ‘ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್’ ಪ್ರದೇಶಗಳು ಪ್ರಮುಖ ಕಾರ್ಯತಂತ್ರದ ಸ್ಥಳಗಳಾಗಿವೆ. 2020ರಲ್ಲಿ ಇದೇ ಸ್ಥಳದಲ್ಲಿ ಚೀನಾ ಹಾಗೂ ಭಾರತದ ಪಡೆಗಳು ಮುಖಾಮುಖಿಯಾಗಿದ್ದವು. ಗಡಿ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗಲು ಎರಡು ಸೇನೆಗಳಿಗೂ ಪ್ರಮುಖ ಆಯಕಟ್ಟಿನ ಸ್ಥಳಗಳಾಗಿವೆ.ಪ್ಯಾಂಗಾಂಗ್ ಸರೋವರದ ಪ್ರದೇಶಗಳಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ, 2020ರ ಮೇ 5ರಂದು ಭಾರತ ಮತ್ತು ಚೀನಾ ಸೇನೆಗಳ ನಡುವೆ ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಭುಗಿಲೆದ್ದಿತ್ತು. 2022ರಲ್ಲಿ ಉಭಯ ದೇಶಗಳು ತಮ್ಮ ಸೇನೆಯನ್ನು ಹಿಂತೆಗೆದುಕೊಂಡಿದ್ದವು.ಈ ಪಟ್ಟಿಯಲ್ಲಿ ಅಲಿಶಾ ಗಿರಿ, ಬ್ರಾಂಗ್ಸಾ, ಚಾಪ್ಚಿಂಗಲ್ ಪಾಸ್, ಕನಿಷ್ಕ ಶಿಖರ, ಕರುಣ್ ಪೀರ್ ಪರ್ವತ, ಕುಕ್ಸೆಲ್, ಮಾರ್ತಾಂಡ್ ಗಿರಿ, ಪಾರ್ಪಿಕ್ ಹಿಮನದಿ, ಸ್ಕಾಮ್ರಿ ಹಿಮನದಿ, ಶಾಚ್ಮಿರಿಕ್ ಪಾಸ್, ಶ್ಕೋರ್ಗಾ ಕಣಿವೆ, ಜೊರಾವರ್ ಶಿಖರ, ದೆಹ್ರಾ ಕಂಪಾಸ್ ಮತ್ತು ದ್ರಾಕ್ ಕರ್ಪೋ ಸೇರಿವೆ.ಜೋಲ್ಮೋರಿ, ಕುಮಾರಾಯಣ ಪಾಯಿಂಟ್, ಪಾಂಗ್ಲಂಗ್, ರಿಂಚೆನ್ ಜಾಂಗ್ಪೋ, ಶಾಕ್ಯಶ್ರೀ ಗಿರಿ, ಗುರು ರಿಂಪೋಚೆ, ಶಾಮಲ್ ಲುಂಗ್ಪಾ (1950ರ ದಶಕದಲ್ಲಿ ಗಸ್ತು ಮತ್ತು ಸಿದ್ಧತಾ ಮಾರ್ಗ), ಯಾಂಗ್ಪಾ ನದಿ, ಮಾರ್ಪಾ ಲೋತ್ಸಾವಾ ರಿ, ಮಿಲಾರೇಪಾ ಕಾಂಗ್ರಿ, ಶಿವ ರಿ ಮತ್ತು ಮಹೇಶ್ವರ ರಿ ಇವುಗಳನ್ನು ಸಹ ಅಧಿಕೃತ ನಕ್ಷೆಯಲ್ಲಿ ಗುರುತಿಸಲಾಗಿದೆ.