ದೇವಸ್ಥಾನಗಳೇ ಟಾರ್ಗೆಟ್ – ವಿಗ್ರಹ ಕದಿಯುತ್ತಿದ್ದ ಖದೀಮರು ಅರೆಸ್ಟ್
ಬೆಂಗಳೂರು: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ದೇವರ ವಿಗ್ರಹಗಳನ್ನು ಕಳ್ಳತನ(Temple Idols) ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ತಲಘಟ್ಟಪುರ ಠಾಣಾ ಪೊಲೀಸರು(Talaghattapura Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಬನ್ನೇರುಘಟ್ಟ ಹಾಗೂ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸಿದ್ದರು

ಬೆಂಗಳೂರು: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ದೇವರ ವಿಗ್ರಹಗಳನ್ನು ಕಳ್ಳತನ(Temple Idols) ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ತಲಘಟ್ಟಪುರ ಠಾಣಾ ಪೊಲೀಸರು(Talaghattapura Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಬನ್ನೇರುಘಟ್ಟ ಹಾಗೂ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸಿದ್ದರು. ಇತ್ತೀಚೆಗೆ ದೇವಸ್ಥಾನಗಳಿಂದ ಒಟ್ಟು ನಾಲ್ಕು ಬೆಲೆಬಾಳುವ ವಿಗ್ರಹಗಳನ್ನು ಕದ್ದು ಎಸ್ಕೇಪ್ ಆಗಿದ್ದರು. ಆರೋಪಿಗಳು ಗಣೇಶ, ಆಂಜನೇಯ ಹಾಗೂ ಲಕ್ಷ್ಮೀ ನಾಗರ ವಿಗ್ರಹಗಳನ್ನು ಕಳ್ಳತನ ಮಾಡಿದ್ದರು ಎಂದು ತಿಳಿದುಬಂದಿದೆ. ಕೇವಲ ದೇವಸ್ಥಾನಗಳಲ್ಲಷ್ಟೇ ಅಲ್ಲದೆ, ನಿರ್ಮಾಣ ಹಂತದಲ್ಲಿದ್ದ ಕಟ್ಟಡಗಳಿಗೂ ನುಗ್ಗಿ ದುಬಾರಿ ಯಂತ್ರೋಪಕರಣಗಳನ್ನು ಕಳವು ಮಾಡುತ್ತಿದ್ದರು. ಈ ಸಂಬಂಧ ತಲಘಟ್ಟಪುರ ಮತ್ತು ಬನ್ನೇರುಘಟ್ಟ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ- ಪ್ರಿಯತಮೆಗೆ ಕೈಕೊಟ್ಟು ಪ್ರಿಯಕರ ಎಸ್ಕೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ ತಲಘಟ್ಟಪುರ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ನಾಲ್ಕೂ ದೇವರ ವಿಗ್ರಹಗಳು ಹಾಗೂ ನಿರ್ಮಾಣ ಹಂತದ ಕಟ್ಟಡಗಳಿಂದ ಕದ್ದಿದ್ದ ಇತರ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.