Video | ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್: ಕರ್ನಾಟಕ ರಾಜಕಾರಣದ ಒಳಸುಳಿ
ಮಾರುವೇಷದ ಕಾರ್ಯಾಚರಣೆಯ (ಸ್ಟಿಂಗ್ ಆಪರೇಷನ್) ವಿಷಯ ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದೆ. ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸಲು ಈ ರೀತಿಯ ಸ್ಟಿಂಗ್ ಆಪರೇಷನ್ ಮಾಡಲಾಗಿದ್ದು, ಇದರ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸುತ್ತಲೇ ಇದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತದೆ ಎಂದು ಶ

ಮಾರುವೇಷದ ಕಾರ್ಯಾಚರಣೆಯ (ಸ್ಟಿಂಗ್ ಆಪರೇಷನ್) ವಿಷಯ ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದೆ. ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸಲು ಈ ರೀತಿಯ ಸ್ಟಿಂಗ್ ಆಪರೇಷನ್ ಮಾಡಲಾಗಿದ್ದು, ಇದರ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸುತ್ತಲೇ ಇದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತದೆ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅಧಿಕಾರ ಕಿತ್ತುಕೊಳ್ಳಲು, ಇದ್ದ ಅಧಿಕಾರ ಉಳಿಸಿಕೊಳ್ಳಲು ಹಾಗೂ ಎದುರಾಳಿಯನ್ನು ಮಣಿಸಲು ಇಂತಹ ರಾಜಕೀಯ ಪಟ್ಟುಗಳನ್ನು ಹಾಕುತ್ತಲೇ ಬರಲಾಗುತ್ತದೆ. ರಮೇಶ ಜಾರಕಿಹೊಳಿ, ಕೆ.ಎನ್. ರಾಜಣ್ಣ ವಿರುದ್ಧವೂ ಸ್ಟಿಂಗ್ ಆಪರೇಷನ್ ಮಾಡಲಾಗಿತ್ತು ಎಂಬ ಟೀಕೆಗಳಿದ್ದವು. ಕುಮಾರಸ್ವಾಮಿ ಸರ್ಕಾರ ಬೀಳಿಸಲು ಮುಂಬೈಗೆ ಹೋಗಿದ್ದವರ ವಿರುದ್ಧವೂ ವಿಡಿಯೊಗಳ ಸದ್ದು ಕೇಳಿತ್ತು. ಟೆಲಿಫೋನ್ ಟ್ಯಾಪಿಂಗ್ ರಾಜ್ಯದಲ್ಲಿ ಹಲವು ಬಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ರಾಜಕಾರಣದ ಇಂತಹ ಅನೈತಿಕ ಚಟುವಟಿಕೆ ಏಕೆ ನಡೆಯುತ್ತದೆ? ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಕರ್ನಾಟಕದ ಮಾನ ಹರಾಜು ಹಾಕುವ ಇಂತಹ ಕೃತ್ಯಗಳಿಗೆ ಏಕಾಗಿ ರಾಜಕಾರಣಿಗಳು, ಮಧ್ಯವರ್ತಿಗಳು, ಪತ್ರಕರ್ತರ ಮುಸುಕಿನ ಕೆಲವರು ಏಕೆ ಕೈ ಹಾಕುತ್ತಾರೆ ಎಂಬ ವಿಶ್ಲೇಷಣೆ ಇಲ್ಲಿದೆ.