ಹದಗೆಟ್ಟ ಗುಳೇದಗುಡ್ಡ–ಪಟ್ಟದಕಲ್ ರಸ್ತೆ: ದುರಸ್ತಿಗೆ ಆಗ್ರಹ
ಗುಳೇದಗುಡ್ಡ : ಶಿರೂರು ಕ್ರಾಸ್ನಿಂದ ಬುದಿನಗಡ, ಗುಳೇದಗುಡ್ಡ, ಆಸಂಗಿ ಲಾಯದಗುಂದಿ, ನಾಗರಾಳ ಹಾಗೂ ಪಟ್ಟದಕಲ್ ಮೂಲಕ ಬಾನಾಪುರ ತಲುಪುವ 367 ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಗುರುತಿಸಿ ಐದಾರು ವರ್ಷಗಳೇ ಕಳೆದಿವೆ. ಆದರೆ ಇದುವರೆಗೆ ಪೂರ್ಣ ಪ್ರಮಾಣದ ಸರ್ವೆ ಕಾರ್ಯ ಆರಂಭವಾಗಿಲ್ಲ. ಹೆದ್ದಾರಿ ಕಾಮಗಾರಿಯು ಆರಂಭವಾಗದಿರುವುದು ಸಮಸ್ಯೆಗೆ ಮೂಲವಾಗಿದೆ.ಹೆದ್ದಾರಿ ಕಾಮಗಾರಿ

ಗುಳೇದಗುಡ್ಡ : ಶಿರೂರು ಕ್ರಾಸ್ನಿಂದ ಬುದಿನಗಡ, ಗುಳೇದಗುಡ್ಡ, ಆಸಂಗಿ ಲಾಯದಗುಂದಿ, ನಾಗರಾಳ ಹಾಗೂ ಪಟ್ಟದಕಲ್ ಮೂಲಕ ಬಾನಾಪುರ ತಲುಪುವ 367 ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಗುರುತಿಸಿ ಐದಾರು ವರ್ಷಗಳೇ ಕಳೆದಿವೆ. ಆದರೆ ಇದುವರೆಗೆ ಪೂರ್ಣ ಪ್ರಮಾಣದ ಸರ್ವೆ ಕಾರ್ಯ ಆರಂಭವಾಗಿಲ್ಲ. ಹೆದ್ದಾರಿ ಕಾಮಗಾರಿಯು ಆರಂಭವಾಗದಿರುವುದು ಸಮಸ್ಯೆಗೆ ಮೂಲವಾಗಿದೆ.ಹೆದ್ದಾರಿ ಕಾಮಗಾರಿ ಮಾಡುತ್ತಾರೆಂದು ಗುಳೇದಗುಡ್ಡ ಪಟ್ಟದಕಲ್ ರಸ್ತೆಯನ್ನು ದುರಸ್ತಿ ಮಾಡಿಲ್ಲ ರಸ್ತೆ ಹದಗೆಟ್ಟಿದೆ. ರಸ್ತೆ ತುಂಬಾ ಗುಂಡಿಗಳು ಬಿದ್ದಿವೆ, ಕೆಲವೆಡೆ ಡಾಂಬರ್ ಕಿತ್ತು ಹೋಗಿದೆ, ನಾಗರಾಳ ಎಸ್.ಪಿ.ಗ್ರಾಮದಿಂದ ಪಟ್ಟದಕಲ್ ವರೆಗೆ ಬಸ್ ಸಂಚಾರ ಇತರೆ ವಾಹನ ಸಂಚಾರ ಮಾಡದಷ್ಟು ಹದಗೆಟ್ಟಿದೆ. ವಾಹನ ಸವಾರರು ಪಟ್ಟದಕಲ್ ದಿಂದ ಗುಳೇದಗುಡ್ಡಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ.ರಸ್ತೆ ಪಕ್ಕ ಗದ್ದನಕೇರಿ ಬಾಣಾಪೂರ ಹೆದ್ದಾರಿ 367 ಎಂದು ಬೋರ್ಡ್ ಹಾಕಿದ್ದು ಬಿಟ್ಟರೆ ಬೇರೆ ಯಾವ ಕೆಲಸಗಳು ಆಗಿಲ್ಲ. ರಸ್ತೆ ದುರಸ್ತಿ ಮಾಡಬೇಕೆಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸುತ್ತಾರೆ.‘ಗುಳೇದಗುಡ್ಡ -ಪಟ್ಟದಕಲ್ ರಸ್ತೆ ಗುಂಡಿಗಳಿಂದ ತುಂಬಿದೆ. ಕೂಡಲೇ ಸರ್ಕಾರ ಹೆದ್ದಾರಿ ನಿರ್ಮಾಣ ಮಾಡದಿದ್ದರೂ, ಉತ್ತಮ ರಸ್ತೆ ನಿರ್ಮಾಣ ಮಾಡಬೇಕು. ಕೊನೆ ಪಕ್ಷ ರಸ್ತೆ ದುರಸ್ತಿಯನ್ನಾದರೂ ಮಾಡಬೇಕು’ ಎಂದು ನಾಗರಾಳ ಎಸ್.ಪಿ ಗ್ರಾಮದ ಹಿರಿಯರಾದ ಲೆಂಕೆಪ್ಪ ಹಿರೇಕುರುಬರ, ಗೋಪಾಲ ಜಕ್ಕಪ್ಪನವರ, ಮಲ್ಲಪ್ಪ ಹಿರೇದ್ಯಾವಪ್ಪನವರ ಹೇಳುತ್ತಾರೆ.ಅಪಘಾತ ವಲಯ: ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿಧಾನವಾಗಿ ಸಾಗಬೇಕು. ಸ್ವಲ್ಪು ವೇಗವಾಗಿ ಹೋದರೆ ಸಾಕು ಅಪಘಾತವಾಗುತ್ತದೆ. ಬಹಳಷ್ಟು ವಾಹನ, ಬೈಕ್ ಸವಾರರು ಬಿದ್ದ ಉದಾಹರಣೆಗಳು ಸಾಕಷ್ಟಿವೆ.ರಸ್ತೆ ಹಸ್ತಾಂತರ: ಲೋಕೋಪಯೋಗಿ ಇಲಾಖೆಯಿಂದ ಹತ್ತು ವರ್ಷಗಳ ಹಿಂದೆಯೇ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ಹಸ್ತಾಂತರಿಸಲಾಗಿದ್ದು, ಹೆದ್ದಾರಿ ನಿರ್ಮಾಣವಾಗುವವರೆಗೂ ರಸ್ತೆ ಸರಿಯಾಗಿ ಇಡಬೇಕಾಗಿದ್ದ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಆದಷ್ಟು ಬೇಗ ಸರ್ಕಾರ ಮತ್ತು ಜನಪ್ರತಿನಿಧಿಗಳು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು’ ಎಂದು ಯುವ ಮುಖಂಡರು ಮಂಜುನಾಥ ವಾಲೀಕಾರ ಆಗ್ರಹಿಸಿದ್ದಾರೆ.‘ರಸ್ತೆ ದುರಸ್ತಿ ಮಾಡಿ ಡಾಂಬರ್ ರಸ್ತೆ ಉತ್ತಮಗೊಳಿಸುವ ಕಾರ್ಯ ಎರಡು ತಿಂಗಳೊಳಗೆ ಆರಂಭಿಸಲಾಗುವುದು. ನಂತರ ಸರ್ವೆ ಮಾಡಿದ ಹಾಗೆ ಭೂಮಿ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಭೂಮಿಯನ್ನು ಪಡೆದ ನಂತರ ಹೆದ್ದಾರಿ ಕಾರ್ಯ ಆರಂಭವಾಗಲಿದೆ’ ಎಂದು ಹುನಗುಂದ ವಿಭಾಗದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಗೋಪಾಲ ಗೆಣ್ಣೂರ ತಿಳಿಸಿದರು.ಭೀಮಸೇನ ಚಿಮ್ಮನಕಟ್ಟಿ, ಶಾಸಕಈಗಾಗಲೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸ್ವತಃ ನಾನೇ ಗಮನಿಸಿದ್ದೇನೆ. ಈ ಭಾಗದ ಜನತೆ ತೊಂದರೆ ಅನುಭವಿಸಿದ್ದನ್ನು ಗಮನಿಸಿ ರಸ್ತೆ ದುರಸ್ತಿಗೆ ಯೋಜನೆ ರೂಪಿಸಲಾಗಿದೆ261013-19-504418470