ಸ್ಟಿಂಗ್, ಸಿಡಿ ಸಂಸ್ಕೃತಿ ಹುಟ್ಟುಹಾಕಿದ್ದೇ ಡಿಕೆಶಿ; ಸಚಿವರ ಮೇಲೆಯೇ ಸಿಎಂ ಗೂಢಚಾರಿಕೆ: ಹೆಚ್ಡಿಕೆ ಬಾಂಬ್
– ಸದಾಶಿವನಗರದಲ್ಲಿ ಸ್ಪೈ ನೆಟ್ವರ್ಕ್ – ಸ್ಟಿಂಗ್ ಗಿಡ ಬೆಳೆಸಿದ್ದೇ ಡಿಕೆಶಿ – ಸಿದ್ದರಾಮಯ್ಯನವರ ಗಟ್ಟಿ ಧ್ವನಿ ಹೊರಬರಬೇಕು ಬೆಂಗಳೂರು: ರಾಜ್ಯದಲ್ಲಿ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಕಷ್ಟಗಳು ಮುನ್ನೆಲೆಯಲ್ಲಿರಬೇಕಾದ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ಸಂಸ್ಕೃತಿ ವಿಚಾರಗಳು ಮುನ್ನೆಲೆಗೆ ಬಂದಿರುವುದು ಅತ್ಯಂತ ಕೆಟ್ಟ ಬೆಳವಣಿಗ

– ಸದಾಶಿವನಗರದಲ್ಲಿ ಸ್ಪೈ ನೆಟ್ವರ್ಕ್ – ಸ್ಟಿಂಗ್ ಗಿಡ ಬೆಳೆಸಿದ್ದೇ ಡಿಕೆಶಿ – ಸಿದ್ದರಾಮಯ್ಯನವರ ಗಟ್ಟಿ ಧ್ವನಿ ಹೊರಬರಬೇಕು ಬೆಂಗಳೂರು: ರಾಜ್ಯದಲ್ಲಿ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಕಷ್ಟಗಳು ಮುನ್ನೆಲೆಯಲ್ಲಿರಬೇಕಾದ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ಸಂಸ್ಕೃತಿ ವಿಚಾರಗಳು ಮುನ್ನೆಲೆಗೆ ಬಂದಿರುವುದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆ.ಪಿ. ಭವನದಲ್ಲಿ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಹಲವು ಗಂಭೀರ ಹಾಗೂ ಸ್ಫೋಟಕ ಆರೋಪಗಳನ್ನು ಮಾಡಿದರು. ಡಿಕೆ ಶಿವಕುಮಾರ್(DK Shivakumar) ವಿರುದ್ಧವೇ ಗೂಢಚಾರಿಕೆಯ ಗಂಭೀರ ಆರೋಪ ಮಾಡಿದ ಎಚ್ಡಿಕೆ, “ನನಗೆ ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ, ಸಿಎಂ ಆದ ನಂತರ ಸದಾಶಿವನಗರದ ಮನೆಯೊಂದರಲ್ಲಿ 4 ಮಂದಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅತ್ಯಾಧುನಿಕ ಎಕ್ವಿಪ್ಮೆಂಟ್ ತರಿಸಿ ಸ್ವಂತ ಸಂಪುಟದ ಸಚಿವರ ಮೇಲೆಯೇ ಮಾಹಿತಿ ಸಂಗ್ರಹ ಹಾಗೂ ಫೋನ್ ಟ್ಯಾಪಿಂಗ್ ನಡೆಸಲಾಗುತ್ತಿದೆ. ಸಚಿವರು, ವಿರೋಧ ಪಕ್ಷದವರು ಅಷ್ಟೇ ಅಲ್ಲದೆ ನನ್ನ ಸಿಬ್ಬಂದಿಯ ಫೋನ್ಗಳೂ ಟ್ಯಾಪ್ ಆಗುತ್ತಿವೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿದರೆ ಯಾರ್ ಯಾರ ಮೇಲೆ ನಿಗಾ ಇಡಲಾಗಿತ್ತು ಎಂಬುದು ತಿಳಿಯುತ್ತದೆ. ಇಂತಹ ಟ್ರ್ಯಾಪ್ ಮಾಡಲು ಪ್ರತ್ಯೇಕ ತಂಡವೇ ಕೆಲಸ ಮಾಡುತ್ತಿದೆ” ಎಂದು ಬಾಂಬ್ ಸಿಡಿಸಿದರು. ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್(Sting Operation) ಎಂಬ ವಿಷವೃಕ್ಷಕ್ಕೆ ನೀರೆರೆದು ಬೆಳೆಸಿದ್ದೇ ಡಿಕೆ ಶಿವಕುಮಾರ್. ಅವರು ಬೆಳೆಸಿದ ಸಸಿಗಳು ಈಗ ಹೆಮ್ಮರವಾಗಿವೆ, ಅದರ ಫಲವನ್ನು ಈಗ ಅವರೇ ಉಣ್ಣಬೇಕಾಗಿದೆ. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಏನು ಮಾಡಿದ್ರಿ? ಕೆ.ಎನ್. ರಾಜಣ್ಣ ಬಾಯಿ ಮುಚ್ಚಿಸಿದ್ರಿ. ಈಗ 8 ವರ್ಷ ಮುಖ್ಯಮಂತ್ರಿಯಾದ ಅಹಿಂದ ನಾಯಕ ಸಿದ್ದರಾಮಯ್ಯ ಕೂಡ ಕೋರ್ಟ್ನಿಂದ ಸ್ಟೇ ತರುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದೀರಿ. ಇದು ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದರು. ಹಾಸನ ಹಾಗೂ ಮಂಡ್ಯ ಲೋಕಸಭೆ ಚುನಾವಣೆ ವೇಳೆ ನಡೆದ ಪೆನ್ಡ್ರೈವ್(Pen Drive) ಹಂಚಿಕೆ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಚುನಾವಣೆಗೆ ಎರಡು ದಿನ ಮುಂಚಿತವಾಗಿ ಈಗಿನ ಹಾಸನ ಎಂಪಿಯ ಸದಾಶಿವನಗರದ ಮನೆಯಲ್ಲಿ ಪೆನ್ಡ್ರೈವ್ ರೆಡಿ ಮಾಡಿಸಿ ಹಂಚಲಾಗಿತ್ತು. ದೇವರಾಜೇಗೌಡ ಹಾಗೂ ಶಿವರಾಮೇಗೌಡ ಅವರ ಸಂಭಾಷಣೆಯಲ್ಲಿ ದೇವೇಗೌಡರ ಕುಟುಂಬ ಮುಗಿಸುವುದೇ ನಮ್ಮ ಕೆಲಸ ಎಂದಿದ್ದರು. ಡಿಕೆಶಿ ದೂರವಾಣಿಯಲ್ಲಿ ಮಾತನಾಡಿದ ಆಡಿಯೋ ಇದೆ. ನಮ್ಮ ಕುಟುಂಬದ ತಾಯಿಯನ್ನೂ ಬಿಡದೆ ಸೀರೀಸ್ ಸ್ಟೋರಿ ಮಾಡಿಸಿದ್ರು. ಅಂದು ರಾಹುಲ್ ಗಾಂಧಿ 400 ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಂದಿದ್ದರು, ಎಷ್ಟು ಜನ ದೂರು ನೀಡಿದ್ದಾರೆ? ಆದರೂ ನಾವು ಯಾವುದಕ್ಕೂ ಸ್ಟೇ ತರಲಿಲ್ಲ, ನ್ಯಾಯಾಲಯದ ಮೇಲೆ ಗೌರವವಿಟ್ಟು ಎದುರಿಸಿದೆವು ಎಂದರು.ಇದನ್ನೂ ಓದಿ: ಜಾರಕಿಹೊಳಿಗೆ ಸ್ಟಿಂಗ್ ಮಾಡಿದವರೇ ಸಿದ್ದರಾಮಯ್ಯ ಮೇಲೆ ಮಾಡಿದ್ದಾರೆ: ಕೆ.ಎನ್. ರಾಜಣ್ಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರಿಗೆ ಧೈರ್ಯ ತುಂಬುವಂತೆ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರೇ, ನಿಮ್ಮ ನೋವು ಏನೆಂದು ನನಗೆ ಅರ್ಥವಾಗುತ್ತದೆ. ನಿಮ್ಮನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ನೋಡಿ. ಆದರೆ ನೀವು ಹೆದರಿ ಸ್ಟೇ ತರಬಾರದು. ಸ್ಟೇ ತರುವುದು ರಕ್ಷಣೆಯಲ್ಲ. ನಿಮ್ಮ ಹಳೆಯ ಗಟ್ಟಿ ಧ್ವನಿ ಹೊರಬರಬೇಕು, ಹೋರಾಟ ಮಾಡಿ. 136 ಶಾಸಕರಿದ್ದಾರೆ, ಸರ್ಕಾರ ಹೇಗೆ ಬೀಳುತ್ತದೆ? ನೀವು ಟ್ರ್ಯಾಪ್ ಆಗಬೇಡಿ. ಈ ಸ್ಟಿಂಗ್ ಆಪರೇಷನ್ ದಂಧೆಗೆ ಸಂಪೂರ್ಣ ಇತಿಶ್ರೀ ಹಾಡಿ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಮಾನ-ಮರ್ಯಾದೆ ಹರಾಜಾಗುತ್ತಿರುವ ಈ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತ್ಯ ಹಾಡಲು ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಎಚ್ಡಿಕೆ ಪಟ್ಟು ಹಿಡಿದರು. ಇದರ ಹಿಂದೆ ಯಾರಿದ್ದಾರೆ ಎಂಬುದು ಹೊರಬರಬೇಕು. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮಯ ಕೋರಿದ್ದು, ಖುದ್ದಾಗಿ ಭೇಟಿಯಾಗಿ ಸ್ಟಿಂಗ್ ಆಪರೇಷನ್ ಜಾಲದ ಕುರಿತು ಸಿಬಿಐ ತನಿಖೆ ನಡೆಸುವಂತೆ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.