FB ಲೈವ್ನಲ್ಲೇ ಪಂಜಾಬ್ ಡ್ರಗ್ಸ್ ವಿರೋಧಿ ಹೋರಾಟಗಾರನನ್ನು ಗುಂಡಿಕ್ಕಿ ಹತ್ಯೆಗೈದ ಮೆಡಿಕಲ್ ಮಾಲೀಕ
ಚಂಡೀಗಢ: ಪಂಜಾಬ್ನ(Punjab) ಮಾನ್ಸಾದಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಸಾಮಾಜಿಕ ಹೋರಾಟಗಾರನನ್ನು ಮೆಡಿಕಲ್ ಶಾಪ್ ಮಾಲೀಕನೊಬ್ಬ(Medical Store Owner) ಗುಂಡಿಟ್ಟು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪರ್ವಿಂದರ್ ಸಿಂಗ್ ಝೋಟಾ(Parvinder Singh Jhota) ಹತ್ಯೆಯಾದ ವ್ಯಕ್ತಿ. ಮೆಡಿಕಲ್ ಶಾಪ್ನಲ್ಲಿ ನಶೆಯ

ಚಂಡೀಗಢ: ಪಂಜಾಬ್ನ(Punjab) ಮಾನ್ಸಾದಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಸಾಮಾಜಿಕ ಹೋರಾಟಗಾರನನ್ನು ಮೆಡಿಕಲ್ ಶಾಪ್ ಮಾಲೀಕನೊಬ್ಬ(Medical Store Owner) ಗುಂಡಿಟ್ಟು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪರ್ವಿಂದರ್ ಸಿಂಗ್ ಝೋಟಾ(Parvinder Singh Jhota) ಹತ್ಯೆಯಾದ ವ್ಯಕ್ತಿ. ಮೆಡಿಕಲ್ ಶಾಪ್ನಲ್ಲಿ ನಶೆಯುಂಟು ಮಾಡುವ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಫೇಸ್ಬುಕ್ ಲೈವ್(Facebook Live) ಮಾಡುತ್ತಿದ್ದಾಗಲೇ ಮಾಲೀಕ ಹತ್ಯೆ ಮಾಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಡಿಕಲ್ ಶಾಪ್ಗಳ ಅಕ್ರಮ ಜಾಲವನ್ನು ಬಯಲಿಗೆಳೆಯುತ್ತಿದ್ದ ಪರ್ವಿಂದರ್ ಸಿಂಗ್ ಝೋಟಾ, ಮಂಗಳವಾರ ಮಾನ್ಸಾದ(Mansa) ಮೆಡಿಕಲ್ ಸ್ಟೋರ್ ಒಂದರ ಮುಂದೆ ನಿಂತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೈವ್ ಆರಂಭಿಸಿದ್ದರು. ಐದು ನಿಮಿಷಗಳ ಈ ವಿಡಿಯೋದಲ್ಲಿ, ಝೋಟಾ ಅವರೊಂದಿಗೆ ವೃದ್ಧರೊಬ್ಬರು ನಿಂತಿದ್ದು, ಅವರು ಈ ಅಂಗಡಿಯಿಂದಲೇ ಮಾದಕ ಔಷಧಿಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು. ಈ ವೇಳೆ ಝೋಟಾ ಹಾಗೂ ಅಂಗಡಿ ಮಾಲೀಕನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಅಂಗಡಿಯವನು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಆತನನ್ನು ಪ್ರಶ್ನಿಸಿದ ಝೋಟಾ, “ಕೈಯಲ್ಲಿ ಪಿಸ್ತೂಲ್ ಏಕೆ ಇಟ್ಟುಕೊಂಡಿದ್ದೀಯಾ? ತಾಕತ್ತಿದ್ದರೆ ನನ್ನನ್ನು ಕೊಲ್ಲು” ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿ ತೋರಿಸುವಂತೆ ಆಗ್ರಹಿಸಿ, ಪೊಲೀಸರಿಗೆ ಕರೆ ಮಾಡುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದರು. ಸುಮಾರು ನಾಲ್ಕು ನಿಮಿಷಗಳ ವಾಗ್ವಾದದ ನಂತರ, ಮೆಡಿಕಲ್ ಶಾಪ್ ಮಾಲೀಕ ಏಕಾಏಕಿ ಝೋಟಾ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟು ತಗುಲಿದ ತಕ್ಷಣ ಮೊಬೈಲ್ ಫೋನ್ ಕೆಳಗೆ ಬಿದ್ದಿದ್ದು, ನೇರಪ್ರಸಾರ ಸ್ಥಗಿತಗೊಂಡಿದೆ. ಘಟನೆಯ ಬೆನ್ನಲ್ಲೇ ಆರೋಪಿ ಅಂಗಡಿ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ. ಫೇಸ್ಬುಕ್ನಲ್ಲಿ 24,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಝೋಟಾ, ಕಳೆದ ಹಲವು ವರ್ಷಗಳಿಂದ ಮಾನ್ಸಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಶೆ ಹಾಗೂ ಮಾದಕ ಔಷಧಿಗಳ ಅಕ್ರಮ ಮಾರಾಟದ ವಿರುದ್ಧ ಸಕ್ರಿಯವಾಗಿ ಹೋರಾಡುತ್ತಿದ್ದರು. 2023ರ ಜುಲೈನಲ್ಲಿ ಮೆಡಿಕಲ್ ಸ್ಟೋರ್ ಒಂದರ ವಿವಾದಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಗಲಭೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿ ಬಂಧನವಾಗಿತ್ತು. ಎರಡು ತಿಂಗಳ ಜೈಲುವಾಸದ ನಂತರ ಬಿಡುಗಡೆಯಾಗಿದ್ದ ಅವರು ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಭೀಕರ ಹತ್ಯೆಯು ಪಂಜಾಬ್ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ (AAP) ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯ ಹಾಗೂ ಸರ್ಕಾರದ ಪ್ರಮುಖ ಮಾದಕ ದ್ರವ್ಯ ವಿರೋಧಿ ಅಭಿಯಾನವಾದ ‘ಯುದ್ಧ್ ನಶಿಯಾನ್ ವಿರುದ್’ ಸಂಪೂರ್ಣ ಹಳ್ಳಹಿಡಿದಿದೆ ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ತೀವ್ರವಾಗಿ ವಾಗ್ದಾಳಿ ನಡೆಸಿವೆ. ಈ ಪ್ರಕರಣದ ಕುರಿತು ಆಪ್ ನಾಯಕರಿಂದ ಸದ್ಯಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಪಂಜಾಬ್ನಲ್ಲಿ ಚುನಾವಣಾ ಕಾವು ಏರುತ್ತಿರುವ ಬೆನ್ನಲ್ಲೇ ನಡೆದಿರುವ ಈ ಹತ್ಯೆ, ಮಾದಕ ದ್ರವ್ಯಗಳ ಅಕ್ರಮ ಮಾರಾಟ ಹಾಗೂ ಕಾನೂನು ಸುವ್ಯವಸ್ಥೆ ವಿಚಾರವನ್ನು ಮತ್ತೆ ರಾಜಕೀಯ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಿದೆ.