ಬಾಗಲಕೋಟೆ: 3 ತಿಂಗಳ ಬಾಕಿ ಕೂಲಿ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ
ಬಾಗಲಕೋಟೆ: ವಿಬಿ ಜಿರಾಮ್ಜಿ ಸಮರ್ಪಕ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೋಮವಾರ ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರು.ತೀವ್ರ ಬರಗಾಲವಿದೆ. ಆದರೂ, ವಿಬಿ ರಾಮ್ಜಿ ಅಡಿ ಅವಶ್ಯಕತೆಗೆ ತಕ್ಕಂತೆ ಕೆಲಸ ಸಿಗುತ್ತಿಲ್ಲ. ಇದರಿಂದ ಬೇಸತ್

ಬಾಗಲಕೋಟೆ: ವಿಬಿ ಜಿರಾಮ್ಜಿ ಸಮರ್ಪಕ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೋಮವಾರ ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರು.ತೀವ್ರ ಬರಗಾಲವಿದೆ. ಆದರೂ, ವಿಬಿ ರಾಮ್ಜಿ ಅಡಿ ಅವಶ್ಯಕತೆಗೆ ತಕ್ಕಂತೆ ಕೆಲಸ ಸಿಗುತ್ತಿಲ್ಲ. ಇದರಿಂದ ಬೇಸತ್ತು ಕೂಲಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಕೂಡಲೇ ಅದನ್ನು ತಡೆಯಲು ಕೆಲಸ ನೀಡಬೇಕು ಎಂದು ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.ಕೂಲಿ ಕಾರ್ಮಿಕರು ಕೆಲಸ ಮಾಡಿ ಮೂರು ತಿಂಗಳಾದರೂ ಖಾತೆಗೆ ಕೂಲಿಯ ಹಣ ಜಮಾ ಆಗಿಲ್ಲ. ಬಾಕಿ ಕೂಲಿ ಹಾಗೂ ನಷ್ಟ ಪರಿಹಾರದಜೊತೆಗೆ ನರೇಗಾ ಬಾಕಿ ಕೂಲಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಎನ್ಎಂಎಂಸ್ ಆ್ಯಪ್ನಿಂದ ಕೂಲಿ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆಯಿಂದಾಗಿ ಫೋಟೊ ತೆಗೆಯಲು, ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಸರಿಪಡಿಸಬೇಕು. ಈ ಸಮಸ್ಯೆಗಳನ್ನು ಹಲವಾರು ಬಾರಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಪರಿಹರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘಟನೆ ಜಿಲ್ಲಾ ಸಂಯೋಜಕ ಶಂಕರ್ ಹೂಗಾರ, ಮಹಾಂತೇಶ, ಬಸವರಾಜ, ವಿಜಯಲಕ್ಷ್ಮಿ ಜಾಲಿಹಾಳ, ಸವಿತಾ, ನಾಗರತ್ನ, ಕವಿತಾ, ಆರ್.ಎಸ್. ತುಪ್ಪದ, ಲಕ್ಕಮ್ಮ, ಯಮನವ್ವ ಪೂಜೇರಿ, ಮೀನಾಕ್ಷಿ, ಎಸ್.ಬಿ. ಪರನಗೌಡ್ರ, ರೇಣುಕಾ ಇದ್ದರು.261013-19-989249250