`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್ಜೆ ಮಿಟ್ಟೆ ನಿಧನ
ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ (Breaking Bad) ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಆರ್ಜೆ ಮಿಟ್ಟೆ (RJ Mitte) ತಮ್ಮ 34ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಮೆರಿಕದ ಟೆಕ್ಸಾಸ್ನ ಬ್ರೌನ್ಸ್ವಿಲ್ಲೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ನಟನ ನಿಧನದ ಸುದ್ದಿಯನ್ನು ಅವರ ಪ್ರತಿನಿಧಿ ಖಚಿತಪಡಿಸಿದ್ದಾರೆ. ಆ

ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ (Breaking Bad) ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಆರ್ಜೆ ಮಿಟ್ಟೆ (RJ Mitte) ತಮ್ಮ 34ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಮೆರಿಕದ ಟೆಕ್ಸಾಸ್ನ ಬ್ರೌನ್ಸ್ವಿಲ್ಲೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ನಟನ ನಿಧನದ ಸುದ್ದಿಯನ್ನು ಅವರ ಪ್ರತಿನಿಧಿ ಖಚಿತಪಡಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನಟ, ಸಮಾಜಸೇವಕ ಹಾಗೂ ಅಂಗವಿಕಲರ ಹಕ್ಕುಗಳ ಪರವಾಗಿ ಧ್ವನಿ ಎತ್ತುತ್ತಿದ್ದ ಆರ್ಜೆ ಮಿಟ್ಟೆ ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ನಿಧನದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಪ್ರತಿನಿಧಿ ಸೀನ್ ರೀಲಿ, ಮಿಟ್ಟೆ ಅವರು ತಮ್ಮ ಅಭಿನಯದ ಜೊತೆಗೆ ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನಗಳೇ ಟಾರ್ಗೆಟ್ – ವಿಗ್ರಹ ಕದಿಯುತ್ತಿದ್ದ ಖದೀಮರು ಅರೆಸ್ಟ್ `ಬ್ರೇಕಿಂಗ್ ಬ್ಯಾಡ್’ ಮೂಲಕ ಖ್ಯಾತಿ: 2008ರಿಂದ 2013ರವರೆಗೆ ಅಮೆರಿಕದ ಎಎಂಸಿ ವಾಹಿನಿಯಲ್ಲಿ ಪ್ರಸಾರವಾದ `ಬ್ರೇಕಿಂಗ್ ಬ್ಯಾಡ್’ ಸರಣಿಯಲ್ಲಿ ಆರ್ಜೆ ಮಿಟ್ಟೆ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸರಣಿಯಲ್ಲಿ ಬ್ರಯಾನ್ ಕ್ರಾನ್ಸ್ಟನ್ ಮತ್ತು ಆರನ್ ಪಾಲ್ ಅವರಂತಹ ಕಲಾವಿದರೊಂದಿಗೆ ಅಭಿನಯಿಸಿದ್ದರು. ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಅವರು, ತಮ್ಮ ಸಹಜ ಅಭಿನಯದಿಂದ ಜನಪ್ರಿಯತೆ ಗಳಿಸಿದ್ದರು. ಈ ಸರಣಿಯಲ್ಲಿ ವಾಲ್ಟರ್ ವೈಟ್ ಎಂಬ ರಸಾಯನಶಾಸ್ತ್ರ ಶಿಕ್ಷಕ ಕ್ಯಾನ್ಸರ್ ಪತ್ತೆಯಾದ ಬಳಿಕ ಕುಟುಂಬದ ಭವಿಷ್ಯಕ್ಕಾಗಿ ಅಪರಾಧ ಜಗತ್ತಿನತ್ತ ಹೆಜ್ಜೆ ಹಾಕುವ ಕಥೆ ಚಿತ್ರಿಸಲಾಗಿದೆ. ಈ ಕಥೆಯಲ್ಲಿ ವಾಲ್ಟರ್ ವೈಟ್ನ ಮಗನ ಪಾತ್ರದಲ್ಲಿ ಮಿಟ್ಟೆ ಕಾಣಿಸಿಕೊಂಡಿದ್ದರು. ತಂದೆಯ ಬದಲಾದ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಮಗನ ಪಾತ್ರವನ್ನು ಅವರು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಸೆರೆಬ್ರಲ್ ಪಾಲ್ಸಿ ಸಮಸ್ಯೆಯ ನಡುವೆಯೂ ಸಾಧನೆ: ಆರ್ಜೆ ಮಿಟ್ಟೆ ಅವರು ಸೆರೆಬ್ರಲ್ ಪಾಲ್ಸಿ ಎಂಬ ನರಮಂಡಲಕ್ಕೆ ಸಂಬAಧಿಸಿದ ಸ್ಥಿತಿಯೊಂದಿಗೆ ಬದುಕುತ್ತಿದ್ದರು. ತಮ್ಮ ನೈಜ ಜೀವನದ ಅನುಭವಗಳನ್ನು ಅಭಿನಯದಲ್ಲಿಯೂ ಬಳಸಿಕೊಂಡಿದ್ದ ಅವರು, ಅಂಗವಿಕಲರ ಕುರಿತಾದ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. `ಬ್ರೇಕಿಂಗ್ ಬ್ಯಾಡ್’ ಸರಣಿಯಲ್ಲಿನ ಅಭಿನಯಕ್ಕಾಗಿ 2014ರಲ್ಲಿ ಅವರು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಯನ್ನೂ ಪಡೆದಿದ್ದರು. ಅವರ ಅಭಿನಯವು ಅಂಗವಿಕಲರ ಪ್ರಾತಿನಿಧ್ಯ ಮತ್ತು ಸಮಾನ ಅವಕಾಶಗಳ ಕುರಿತು ಚರ್ಚೆ ಹೆಚ್ಚಿಸಲು ನೆರವಾಯಿತು ಎಂದು ಅವರ ಪ್ರತಿನಿಧಿ ತಿಳಿಸಿದ್ದಾರೆ. ಸಮಾಜಸೇವೆಯಲ್ಲೂ ಸಕ್ರಿಯರಾಗಿದ್ದ ನಟ: ಆರ್ಜೆ ಮಿಟ್ಟೆ ಅವರು ಯುನೈಟೆಡ್ ಸೆರೆಬ್ರಲ್ ಪಾಲ್ಸಿ ಮತ್ತು ಶ್ರೈನರ್ಸ್ ಚಿಲ್ಡ್ರನ್ಸ್ ಸಂಸ್ಥೆಗಳ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಂಗವಿಕಲರ ಹಕ್ಕುಗಳು, ಜಾಗೃತಿ ಮತ್ತು ಸಮಾಜದಲ್ಲಿ ಅವರ ಪ್ರಾತಿನಿಧ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಇದಲ್ಲದೆ, ಸಮಾಜಸೇವೆ ಹಾಗೂ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡಲು `ದಿ ಮಿಟ್ಟೆ ಫೌಂಡೇಶನ್’ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಅಂಗವಿಕಲರ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯುವಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಪ್ರತಿನಿಧಿ ಸೀನ್ ರೀಲಿ ತಿಳಿಸಿದ್ದಾರೆ. ಅಭಿನಯದ ಮೂಲಕ ಜನಪ್ರಿಯತೆ ಗಳಿಸುವುದರ ಜೊತೆಗೆ ಅಂಗವಿಕಲರ ಹಕ್ಕುಗಳು ಮತ್ತು ಸಮಾನತೆಯ ಕುರಿತು ಜಾಗೃತಿ ಮೂಡಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಆರ್ಜೆ ಮಿಟ್ಟೆ ಅವರ ನಿಧನ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ. ಇದನ್ನೂ ಓದಿ: ಡಿಯರ್ ಸೂರ್ಯಕಾಂತ್ ರಾಜೀನಾಮೆ ನೀಡಿ, ಮತ್ತೊಬ್ಬರನ್ನು ನಾವು ಹುಡುಕಿಕೊಳ್ಳುತ್ತೇವೆ: ಕೇರಳ ಕಾಗ್ರೆಸ್ ವಿವಾದ