ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ ದುರಾದೃಷ್ಟಕರ: ಕೋಟಾ ಶ್ರೀನಿವಾಸ ಪೂಜಾರಿ
ಬೆಂಗಳೂರು: ಜನತಂತ್ರ ವ್ಯವಸ್ಥೆಯ ರಾಜಕೀಯ ಹುಟ್ಟು ದುರಾದೃಷ್ಟಕರ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣದ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅವರು, ಇಂದು ಬರದ ಬಗ್ಗೆ ಚರ್ಚೆ ಮಾಡಬೇಕಿತ್ತು. ಕುಡಿಯುವ ನೀರು, ಜನ ಜಾನುವಾರು, ಗುಳೆ ಹೋಗೋರ

ಬೆಂಗಳೂರು: ಜನತಂತ್ರ ವ್ಯವಸ್ಥೆಯ ರಾಜಕೀಯ ಹುಟ್ಟು ದುರಾದೃಷ್ಟಕರ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣದ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅವರು, ಇಂದು ಬರದ ಬಗ್ಗೆ ಚರ್ಚೆ ಮಾಡಬೇಕಿತ್ತು. ಕುಡಿಯುವ ನೀರು, ಜನ ಜಾನುವಾರು, ಗುಳೆ ಹೋಗೋರ ಬಗ್ಗೆ ಅಧ್ಯಯನ ಮಾಡಬೇಕಿತ್ತು. 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಿ ಕೇಂದ್ರಕ್ಕೆ ಮನವಿ ಮಾಡಬೇಕಿತ್ತು. ಆದರೆ ಕರ್ನಾಟಕ ಸರ್ಕಾರ ಸ್ಟಿಂಗ್ ಆಪರೇಷನ್ಗೆ ಇಳಿದಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಿನ ಟೆಕ್ಕಿ ಹೈದರಾಬಾದ್ನಲ್ಲಿ ಸೂಸೈಡ್ – ಅಪಾರ್ಟ್ಮೆಂಟ್ನ 30ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಇಂತಹ ಗೊಂದಲಕ್ಕೆ ಎಡೆ ಮಾಡಿಕೊಡದೆ ಜನರ ನೆರವಿಗೆ ಸರ್ಕಾರ ಬರಬೇಕು. ರಾಜಕಾರಣಿಗಳ ಮೇಲೆ ಕೆಟ್ಟ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಆಗಬಾರದು. ಮಾಜಿ ಸಿಎಂ ಒಬ್ಬರು ಸ್ಟೇ ಹಂತಕ್ಕೆ ಹೋಗಿದೆ. ಇಂತಹ ರಾಜಕೀಯ ಆಗಬಾರದು ಅಂತ ಆಗ್ರಹಿಸುತ್ತೇನೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಿವೃತ್ತಿಗೆ 6 ತಿಂಗಳು ಬಾಕಿ ಇರುವಾಗಲೇ ಹಿರಿಯ ಐಪಿಎಸ್ ಅಧಿಕಾರಿ ಎಸ್. ರವಿ ದಿಢೀರ್ ಸ್ವಯಂ ನಿವೃತ್ತಿ