ಗದಗ | ಚಿಕಿತ್ಸೆ ಫಲಿಸದೆ ಗಾಯಗೊಂಡ ಚಿರತೆ ಸಾವು; ಅರಣ್ಯ ಇಲಾಖೆ ಅಧಿಕಾರಿಗಳಿಂದ ಅಂತ್ಯಕ್ರಿಯೆ
ಗದಗ: ಕೃಷಿ ಹೊಂಡದ ಪೈಪ್ನಲ್ಲಿ ಅವಿತು ಕುಳಿತಿದ್ದ ಗಾಯಗೊಂಡ ಗಂಡು ಚಿರತೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹನುಮಂತ ಪವಾರ್ ಎಂಬುವವರ ಜಮೀನಿನ ಪೈಪ್ನಲ್ಲಿ ಸುಮಾರು 8ರಿಂದ 9 ವರ್ಷ ವಯಸ್ಸಿನ ಗಂಡು ಚಿರತೆ ಕುಳಿತಿರುವುದು ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ. ಚಿರತೆಯನ್ನು ಕ

ಗದಗ: ಕೃಷಿ ಹೊಂಡದ ಪೈಪ್ನಲ್ಲಿ ಅವಿತು ಕುಳಿತಿದ್ದ ಗಾಯಗೊಂಡ ಗಂಡು ಚಿರತೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹನುಮಂತ ಪವಾರ್ ಎಂಬುವವರ ಜಮೀನಿನ ಪೈಪ್ನಲ್ಲಿ ಸುಮಾರು 8ರಿಂದ 9 ವರ್ಷ ವಯಸ್ಸಿನ ಗಂಡು ಚಿರತೆ ಕುಳಿತಿರುವುದು ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ. ಚಿರತೆಯನ್ನು ಕಂಡು ಭಯಭೀತರಾದ ಕುರಿಗಾಹಿಗಳು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಿತ್ರಾಣಗೊಂಡಿದ್ದ ಚಿರತೆಯನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಚಿರತೆ ನೀರು ಮತ್ತು ಆಹಾರವಿಲ್ಲದೆ ನಿತ್ರಾಣಗೊಂಡಿತ್ತು. ಸ್ಥಳಕ್ಕೆ ಡಿಎಫ್ಒ ಸಂತೋಷಕುಮಾರ್ ಕೆಂಚೆಪ್ಪನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಚಿರತೆಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಗಂಡು ಚಿರತೆ ಮೃತಪಟ್ಟಿದೆ.ಇದನ್ನೂ ಓದಿ: ಕರ್ಲಾನ್ ಹಾಸಿಗೆ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ; ಮುಗಿಲೆತ್ತರಕ್ಕೆ ದಟ್ಟ ಹೊಗೆ
Read the complete story at Public TV Kannada