Video | ಬೆಂಗಳೂರು–ಮಂಗಳೂರು ವಂದೇ ಭಾರತ್: ಕರಾವಳಿಗರಿಗೆ ಏನು ಲಾಭ?
ಮಂಗಳೂರು ಸೆಂಟ್ರಲ್ ಮತ್ತು ಗೋವಾ ರಾಜ್ಯದ ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ರಾಜ್ಯದ ರಾಜಧಾನಿ ಬೆಂಗಳೂರಿಗೆ ವಿಸ್ತರಿಸಿ ಕೇಂದ್ರ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಬೆಂಗಳೂರು– ಮಂಗಳೂರು ನಡುವೆ ವಂದೇ ಭಾರತ್ ರೈಲು ಬೇಕು ಎಂಬುದು ಕರಾವಳಿಗರ ಬೇಡಿಕೆಯಾಗಿತ್ತು. ಹಾಲಿ ಇರುವ ರೈಲನ್ನೇ ವಿಸ್ತರಣೆ ಮಾಡಿರುವುದರಿಂದ ವಾಣಿಜ್ಯ ನಗರಿ

ಮಂಗಳೂರು ಸೆಂಟ್ರಲ್ ಮತ್ತು ಗೋವಾ ರಾಜ್ಯದ ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ರಾಜ್ಯದ ರಾಜಧಾನಿ ಬೆಂಗಳೂರಿಗೆ ವಿಸ್ತರಿಸಿ ಕೇಂದ್ರ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಬೆಂಗಳೂರು– ಮಂಗಳೂರು ನಡುವೆ ವಂದೇ ಭಾರತ್ ರೈಲು ಬೇಕು ಎಂಬುದು ಕರಾವಳಿಗರ ಬೇಡಿಕೆಯಾಗಿತ್ತು. ಹಾಲಿ ಇರುವ ರೈಲನ್ನೇ ವಿಸ್ತರಣೆ ಮಾಡಿರುವುದರಿಂದ ವಾಣಿಜ್ಯ ನಗರಿ ಮಂಗಳೂರಿನ ಪ್ರಯಾಣಿಕರಿಗೆ ಏನೆಲ್ಲ ಪ್ರಯೋಜನಗಳಾಗಲಿವೆ? ಪ್ರಾಯೋಗಿಕ ಸಂಚಾರದ ವೇಳೆ ವಂದೇ ಭಾರತ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಕೈಬಿಡಲಾಗಿತ್ತು. ಹಾಲಿ ಇರುವ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುತ್ತಿದ್ದು, ವಿಸ್ತರಿತ ರೈಲು ಕೂಡ ಸೆಂಟ್ರಲ್ ಮೂಲಕ ಸಂಚರಿಸಬೇಕು ಎಂಬುದು ಮಂಗಳೂರಿನ ರೈಲ್ವೆ ಪ್ರಯಾಣಿಕರ ಒತ್ತಾಸೆಯಾಗಿದೆ. ಈ ಕುರಿತು ‘ಪ್ರಜಾವಾಣಿ’ ನಡೆಸಿದ ಚರ್ಚೆಯಿದು.
Read the complete story at Prajavani