ಮುಂಡಗೋಡ: ಕಾನನದ ಮಡಿಲಲ್ಲಿ ದನಗರ ಗೌಳಿಗರ ವಿಶಿಷ್ಟ ದಸರಾ ಆಚರಣೆ
ಮುಂಡಗೋಡ: ಕಾನನದ ಮಧ್ಯೆ ಬದುಕು ಕಟ್ಟಿಕೊಂಡಿರುವ, ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ದನಗರ ಗೌಳಿ ಸಮುದಾಯದ ದಸರಾ ಆಚರಣೆ ವಿಶೇಷವಾಗಿರುತ್ತದೆ. ಘಟಸ್ಥಾಪನೆ, ಜಾಗರಣೆ, ಗಜಕುಣಿತ, ಸೀಮೋಲ್ಲಂಘನ ಹಾಗೂ ಶಿಲ್ಲೆಂಗಾನ್ ಇವು ಗೌಳಿಗರ ದಸರೆಯಲ್ಲಿ ಕಂಡುಬರುವ ಪ್ರಮುಖ ಆಚರಣೆಗಳಾಗಿವೆ.ತಾಲ್ಲೂಕಿನ ಬಡ್ಡಿಗೇರಿ, ಕಳಕಿಕಾರೆ, ಗೋದ್ನಾಳ, ಉಗ್ಗಿನಕೇರಿ, ಮೈನಳ್ಳಿ,

ಮುಂಡಗೋಡ: ಕಾನನದ ಮಧ್ಯೆ ಬದುಕು ಕಟ್ಟಿಕೊಂಡಿರುವ, ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ದನಗರ ಗೌಳಿ ಸಮುದಾಯದ ದಸರಾ ಆಚರಣೆ ವಿಶೇಷವಾಗಿರುತ್ತದೆ. ಘಟಸ್ಥಾಪನೆ, ಜಾಗರಣೆ, ಗಜಕುಣಿತ, ಸೀಮೋಲ್ಲಂಘನ ಹಾಗೂ ಶಿಲ್ಲೆಂಗಾನ್ ಇವು ಗೌಳಿಗರ ದಸರೆಯಲ್ಲಿ ಕಂಡುಬರುವ ಪ್ರಮುಖ ಆಚರಣೆಗಳಾಗಿವೆ.ತಾಲ್ಲೂಕಿನ ಬಡ್ಡಿಗೇರಿ, ಕಳಕಿಕಾರೆ, ಗೋದ್ನಾಳ, ಉಗ್ಗಿನಕೇರಿ, ಮೈನಳ್ಳಿ, ಬ್ಯಾನಳ್ಳಿ, ಸಿರಿಗೇರಿ, ಜೇನಮುರಿ, ನ್ಯಾಸರ್ಗಿ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳು ಮತ್ತು ಗೌಳಿವಾಡಾಗಳಲ್ಲಿ ನೆಲೆಸಿರುವ ದನಗರ ಗೌಳಿ ಸಮುದಾಯದವರು ಇಂದಿಗೂ ತಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ನಗರಗಳ ಆಕರ್ಷಣೆ ಯುವಜನರನ್ನು ಸೆಳೆದರೂ, ಹಬ್ಬದ ಸಂದರ್ಭದಲ್ಲಿ ಕಾನನದ ಮಡಿಲಲ್ಲಿರುವ ತಮ್ಮ ಮೂಲ ನೆಲೆಗಳತ್ತ ಮುಖ ಮಾಡುವುದನ್ನು ಮರೆಯುವುದಿಲ್ಲ. ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಪಾಲಿಸಿಕೊಂಡು, ವಿಭಿನ್ನ ಸಂಸ್ಕೃತಿ ಮತ್ತು ಆಚರಣೆಗಳನ್ನು ನಿಸರ್ಗದ ಮಡಿಲಲ್ಲಿ ಅನಾವರಣಗೊಳಿಸುತ್ತಾರೆ.ಏಕಾದಶಿಯಂದು ತಮ್ಮೂರು ಅಥವಾ ಗೌಳಿವಾಡಾದಲ್ಲಿ ನಡೆಯುವ ದಸರಾ ಹಬ್ಬಕ್ಕೆ (ಶಿಲ್ಲೆಂಗಾನ್) ಬರುವಂತೆ ಸಮುದಾಯದ ಹಿರಿಯರು ಆಮಂತ್ರಣ ನೀಡುತ್ತಾರೆ. ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ವೀಳ್ಯದೆಲೆ (ಈಡಾ) ನೀಡಿ ಹಬ್ಬಕ್ಕೆ ಆಹ್ವಾನಿಸುವುದು ಆಚರಣೆಯ ಮೊದಲ ಹಂತವಾಗಿದೆ. ನಿರ್ದಿಷ್ಟ ಗೌಳಿವಾಡಾದಲ್ಲಿ ಶಿಲ್ಲೆಂಗಾನ್ ಆಚರಣೆಯ ದಿನವನ್ನು ನಿಗದಿಪಡಿಸಲಾಗಿರುತ್ತದೆ. ಆಮಂತ್ರಣ ಪಡೆದವರು ತಮ್ಮ ಊರಿನ ಇತರರಿಗೂ ವಿಷಯ ತಿಳಿಸಿ, ತಂಡೋಪತಂಡವಾಗಿ ಗೌಳಿವಾಡಾಕ್ಕೆ ತೆರಳಿ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹಿರಿಯ ಮುಖಂಡ ಭಾಗು ಕೊಕರೆ ತಿಳಿಸಿದರು.ವಾರದ ಸಂತೆಯಲ್ಲಿ ಎಲ್ಲ ಗೌಳಿವಾಡಾಗಳ ಜನರು ಸೇರುವುದರಿಂದ ಅಲ್ಲಿಯೇ ಆಮಂತ್ರಣ ನೀಡುವ ಪದ್ಧತಿಯನ್ನು ಹಿಂದಿನಿಂದಲೂ ರೂಢಿಸಿಕೊಂಡು ಬರಲಾಗಿದೆ. ವೀಳ್ಯದೆಲೆ ಆಮಂತ್ರಣ ಪಡೆದ ಬಳಿಕ ಪೂಜೆಗೆ ಅಗತ್ಯವಾದ ಸಾಮಗ್ರಿಗಳು, ಧವಸಧಾನ್ಯ ಸೇರಿದಂತೆ ಹಬ್ಬದ ಖರೀದಿ ಭರದಿಂದ ನಡೆಯುತ್ತದೆ ಎಂದು ಅವರು ಹೇಳಿದರು.ಘರಾತಲಾ, ಬಾಹಿರಲಾ ದಸರಾ: ಘಟಸ್ಥಾಪನೆಯ ಎರಡನೇ ದಿನ ಜಾಗರಣೆಗೆ ಚಾಲನೆ ನೀಡಲಾಗುತ್ತದೆ. ಪ್ರತಿ ಗೌಳಿವಾಡಾದ ಯುವಕರು ಹಾಗೂ ಹಿರಿಯರು ಮನೆಮನೆಗೆ ತೆರಳಿ ಗಜಕುಣಿತ ಪ್ರದರ್ಶಿಸುತ್ತಾರೆ. ಅನ್ನ, ಹಾಲು, ತುಪ್ಪ ಹಾಗೂ ಬೆಲ್ಲದಿಂದ ತಯಾರಿಸಿದ ಖಾದ್ಯವನ್ನು ಸಹಪಂಕ್ತಿ ಭೋಜನದ ಮೂಲಕ ಹಂಚಿಕೊಂಡು ಘರಾತಲಾ ದಸರಾವನ್ನು ವಿಧ್ಯುಕ್ತವಾಗಿ ಆರಂಭಿಸುತ್ತಾರೆ.ಮಹಿಳೆಯರು ಪ್ರತಿ ಮನೆಯಿಂದ ಮಜ್ಜಿಗೆ ತುಂಬಿದ ಮಡಿಕೆಯನ್ನು ನಿಗದಿತ ಸ್ಥಳಕ್ಕೆ ತಂದು ಇಡುತ್ತಾರೆ. ಅಲ್ಲಿಯೂ ಗಂಟೆಗಟ್ಟಲೆ ಗಜಕುಣಿತ ನಡೆಯುತ್ತದೆ. ವಿಶೇಷ ಪೂಜೆಯ ಬಳಿಕ ತಂದ ಮಜ್ಜಿಗೆಯನ್ನು ಬೆಸಬೆಡಗು ಪಂಗಡದವರು ಸಾಂಕೇತಿಕವಾಗಿ ಮೈಗೆ ಹಚ್ಚಿಕೊಂಡು ಸಂಭ್ರಮದಿಂದ ದಸರಾ ಆಚರಿಸುತ್ತಾರೆ ಎಂದು ಯುವ ಮುಖಂಡ ಸಿದ್ದು ತೊರವತ್ ಹೇಳಿದರು.261013-20-183959454