ನೀರಿನ ಟ್ಯಾಂಕ್ನಲ್ಲಿರುವ ಪಾಚಿ ತೊಲಗಿಸಲು ಇಲ್ಲಿವೆ ಸರಳ ಸಲಹೆಗಳು
ನೀರಿನ ಟ್ಯಾಂಕ್ನಲ್ಲಿರುವ ಪಾಚಿ ತೊಲಗಿಸಲು ಇಲ್ಲಿವೆ ಸರಳ ಸಲಹೆಗಳುನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಪ್ಲಾಸ್ಟಿಕ್ ಟ್ಯಾಂಕ್ ಅಥವಾ ಸಂಪ್ಗಳು ಎಲ್ಲರ ಮನೆಯಲ್ಲಿಯೂ ಇರುತ್ತವೆ. ಇವು ಹೊಸದರಲ್ಲಿ ಸ್ವಚ್ಛವಾಗಿದ್ದರೂ, ಕೆಲ ತಿಂಗಳುಗಳ ಬಳಿಕ ಅವುಗಳ ಒಳಭಾಗದಲ್ಲಿ ಪಾಚಿ, ಮಣ್ಣು ಸೇರಿಕೊಳ್ಳುತ್ತವೆ. ನಿತ್ಯದ ಬಳಕೆಗೆ ಈ ನೀರನ್ನು ಬಳಸುವುದರಿಂದ, ಸಮಯಕ್ಕೆ ಸರಿಯಾಗಿ ಸ್ವಚ್ಛಗ

ನೀರಿನ ಟ್ಯಾಂಕ್ನಲ್ಲಿರುವ ಪಾಚಿ ತೊಲಗಿಸಲು ಇಲ್ಲಿವೆ ಸರಳ ಸಲಹೆಗಳುನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಪ್ಲಾಸ್ಟಿಕ್ ಟ್ಯಾಂಕ್ ಅಥವಾ ಸಂಪ್ಗಳು ಎಲ್ಲರ ಮನೆಯಲ್ಲಿಯೂ ಇರುತ್ತವೆ. ಇವು ಹೊಸದರಲ್ಲಿ ಸ್ವಚ್ಛವಾಗಿದ್ದರೂ, ಕೆಲ ತಿಂಗಳುಗಳ ಬಳಿಕ ಅವುಗಳ ಒಳಭಾಗದಲ್ಲಿ ಪಾಚಿ, ಮಣ್ಣು ಸೇರಿಕೊಳ್ಳುತ್ತವೆ. ನಿತ್ಯದ ಬಳಕೆಗೆ ಈ ನೀರನ್ನು ಬಳಸುವುದರಿಂದ, ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ. ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಕೆಲವು ಸಲಹೆಗಳು ಇಲ್ಲಿವೆ.ಟಿವಿ ಸ್ಕ್ರೀನ್ ಮೇಲೆ ಧೂಳು, ಜಿಡ್ಡು ಇದೆಯಾ? ಈ ರೀತಿ ಸ್ವಚ್ಛಗೊಳಿಸಿ...ನೀರನ್ನು ಖಾಲಿ ಮಾಡಿಟ್ಯಾಂಕ್ ತೊಳೆಯುವ ಮುನ್ನ ಅದರಲ್ಲಿರುವ ಸಂಪೂರ್ಣ ನೀರನ್ನು ಖಾಲಿ ಮಾಡಿ. ಬಳಿಕ, ಟ್ಯಾಂಕ್ನ ತಳಭಾಗದಲ್ಲಿ ಸಂಗ್ರಹವಾಗಿರುವ ಪಾಚಿ ಮತ್ತು ಮಣ್ಣಿನ ಕಣಗಳನ್ನು ಹೊರಗೆ ಹಾಕಿ. ಗಟ್ಟಿಯಾದ ಸ್ಕ್ರಬ್ಬರ್ ಅಥವಾ ಬ್ರಷ್ ತೆಗೆದುಕೊಂಡು ಒಳಭಾಗವನ್ನು ಒಂದು ಬಾರಿ ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿ.ಬ್ಲೀಚಿಂಗ್ ಪೌಡರ್ ಬಳಕೆನೀರಿನ ಟ್ಯಾಂಕ್ಗೆ ಅಳತೆಗೆ ತಕ್ಕಂತೆ ಸುಮಾರು 100 ಗ್ರಾಂ ನಷ್ಟು ಬ್ಲೀಚಿಂಗ್ ಪೌಡರ್ ಹಾಕಿ ಅರ್ಧ ಗಂಟೆ ಹಾಗೆಯೇ ಬಿಡಿ.ಬಳಿಕ ಸ್ಕ್ರಬ್ಬರ್ ಸಹಾಯದಿಂದ ಉಜ್ಜುತ್ತ ಸ್ವಚ್ಛಗೊಳಿಸಿ. ಬ್ಲೀಚಿಂಗ್ ಪೌಡರ್ನಲ್ಲಿರುವ ಕ್ಲೋರಿನ್ ಅಂಶವು ಪಾಚಿಯನ್ನು ಸಂಪೂರ್ಣವಾಗಿ ನಾಶಪಡಿಸಲು ಸಹಾಯ ಮಾಡುತ್ತದೆ.ಟೈಲ್ಸ್ ನಡುವೆ ಉಳಿದುಕೊಂಡಿರುವ ಕೊಳಕನ್ನು ಸುಲಭವಾಗಿ ಹೀಗೆ ಸ್ವಚ್ಛಗೊಳಿಸಿಅಡುಗೆ ಸೋಡಾಅಡುಗೆ ಸೋಡಾವು ಜಿಡ್ಡು ಮತ್ತು ಪಾಚಿಯನ್ನು ತೆಗೆದುಹಾಕಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದು ಬಕೆಟ್ ನೀರಿಗೆ 100 ಗ್ರಾಂ ನಷ್ಟು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಆ ನೀರನ್ನು ಸ್ಕ್ರಬ್ಬರ್ನಲ್ಲಿ ಅದ್ದಿಕೊಂಡು ಟ್ಯಾಂಕ್ ಒಳಗೆ ಸ್ವಚ್ಛಗೊಳಿಸಬಹುದು.2 ರಿಂದ 3 ಬಾರಿ ಶುದ್ಧ ನೀರಿನಿಂದ ತೊಳೆಯಿರಿಟ್ಯಾಂಕ್ ಸ್ವಚ್ಛಗೊಳಿಸಿದ ನಂತರ, ಯಾವುದೇ ರಾಸಾಯನಿಕ ಅಥವಾ ಸೋಪಿನ ಅಂಶ ಉಳಿಯದಂತೆ ಎರಡರಿಂದ ಮೂರು ಬಾರಿ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ತೊಳೆದ ಬಳಿಕ ಕನಿಷ್ಠ 2 ಗಂಟೆ ಟ್ಯಾಂಕ್ನಲ್ಲಿ ಹೊಸ ನೀರನ್ನು ತುಂಬಿಸಬೇಡಿ. ಹಾಗೆಯೇ ಸಂಪ್ ಅಥವಾ ನೀರಿನ ಟ್ಯಾಂಕ್ನ ಮುಚ್ಚಳವನ್ನು ಮರೆಯದೇ ಸ್ವಚ್ಛಗೊಳಿಸಿ.ಬಾತ್ರೂಮ್ ಟೈಲ್ಸ್, ಟಬ್, ಕನ್ನಡಿ ಸ್ವಚ್ಛಗೊಳಿಸುವ ಸುಲಭ ವಿಧಾನ ಇಲ್ಲಿದೆಸೂರ್ಯನ ಬೆಳಕನ್ನು ತಡೆಯಿರಿಸಾಮಾನ್ಯವಾಗಿ ನೀರಿನ ಟ್ಯಾಂಕ್ಗಳಲ್ಲಿ ಪಾಚಿ ಬೆಳೆಯಲು ಸೂರ್ಯನ ಬೆಳಕು ಒಳಗೆ ಇಣುಕುವುದು ಒಂದು ಕಾರಣವಾಗಿರುತ್ತದೆ. ಆದ್ದರಿಂದ ಟ್ಯಾಂಕ್ ಮುಚ್ಚಳವನ್ನು ಸದಾ ಸರಿಯಾಗಿ ಮುಚ್ಚಿಡಿ. ಕನಿಷ್ಠ 6 ತಿಂಗಳಿಗೊಮ್ಮೆ ಟ್ಯಾಂಕ್ ಅನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸುವುದು ಉತ್ತಮ.