ಪಂಜಾಬ್: ಡ್ರಗ್ಸ್ ಮಾರಾಟ ಪ್ರಶ್ನಿಸಿ ಲೈವ್ ಬಂದಿದ್ದ ಹೋರಾಟಗಾರನ ಗುಂಡಿಕ್ಕಿ ಹತ್ಯೆ
ಚಂಢೀಗಡ: ಡ್ರಗ್ಸ್ ಮಾರಾಟ ಪ್ರಶ್ನಿಸಿ ಫೇಸ್ಬುಕ್ನಲ್ಲಿ ಲೈವ್ ಮಾಡುತ್ತಿದ್ದ ಮಾದಕ ದ್ರವ್ಯ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಅವರನ್ನು ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ಪರ್ವಿಂದರ್ ಸಿಂಗ್ ಅವರು ಮೆಡಿಕಲ್ ಶಾಪ್ಗಳಲ್ಲಿ ಅಕ್ರಮವಾಗಿ ಮಾರಾಟವಾಗುವ ಮಾದಕ ವಸ್ತುಗಳ ವಿರುದ್ಧ ನಿರ

ಚಂಢೀಗಡ: ಡ್ರಗ್ಸ್ ಮಾರಾಟ ಪ್ರಶ್ನಿಸಿ ಫೇಸ್ಬುಕ್ನಲ್ಲಿ ಲೈವ್ ಮಾಡುತ್ತಿದ್ದ ಮಾದಕ ದ್ರವ್ಯ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಅವರನ್ನು ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ಪರ್ವಿಂದರ್ ಸಿಂಗ್ ಅವರು ಮೆಡಿಕಲ್ ಶಾಪ್ಗಳಲ್ಲಿ ಅಕ್ರಮವಾಗಿ ಮಾರಾಟವಾಗುವ ಮಾದಕ ವಸ್ತುಗಳ ವಿರುದ್ಧ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರು. ಮಂಗಳವಾರ, ಮೆಡಿಕಲ್ ಸ್ಟೋರ್ಯೊಂದರಲ್ಲಿ ಮಾದಕ ದ್ರವ್ಯ ಮಾರಾಟವಾಗುತ್ತಿದೆ ಎಂದು ಆರೋಪಿಸಿ, ವೃದ್ಧರೊಬ್ಬರೊಂದಿಗೆ ಸಿಂಗ್ ಅವರು ಅಂಗಡಿ ಮುಂಭಾಗದಲ್ಲೇ ಫೇಸ್ಬುಕ್ ಲೈವ್ನಲ್ಲಿ ಮಾಲೀಕನನ್ನು ಪ್ರಶ್ನಿಸುತ್ತಿದ್ದರು.ಸಚಿವರ, ಶಾಸಕರ ಫೋನ್ ಕದ್ದಾಲಿಕೆ: ಡಿಕೆಶಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಆರೋಪಪ್ರೇಮದ ಊರಲಿ ಸಿನಿಮಾದಲ್ಲಿ ಗಮನ ಸೆಳೆದ ಈ ಸುಂದರ ಗುಡ್ಡಕ್ಕೆ ನೀವೂ ಭೇಟಿ ನೀಡಿಕೆಲವು ನಿಮಿಷಗಳ ಕಾಲ ಸಿಂಗ್ ಮತ್ತು ಅಂಗಡಿ ಮಾಲೀಕನ ನಡುವೆ ಮಾತಿನ ಚಕಮಕಿ ನಡೆದಿದೆ. ಬಂದೂಕು ಹಿಡಿದಿದ್ದ ಅಂಗಡಿ ಮಾಲೀಕನಿಗೆ 'ನನ್ನನ್ನು ಕೊಲ್ಲು' ಎಂದು ಸಿಂಗ್ ಸವಾಲು ಹಾಕಿದ್ದಾರೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಅಂಗಡಿ ಮಾಲೀಕ ದಿಢೀರ್ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಪರ್ವಿಂದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.IIT-B suicide: ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದ ಸಾಹಿಲ್ಕೆಪಿಎಸ್ಸಿ ಹಗರಣ: ಎಸ್ಐಟಿ ತಂಡದಿಂದ ಅಲೋಕ್ ಕುಮಾರ್ ಸೇರಿ ಇಬ್ಬರು ಹೊರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ವಾಗ್ದಾಳಿಬಿಜೆಪಿ ರಾಜ್ಯಾಧ್ಯಕ್ಷ ಸುನಿಲ್ ಜಖರ್ ಮತ್ತು ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು, ಆಪ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರು, ‘ಮೆಡಿಕಲ್ ಶಾಪ್ಗಳಲ್ಲಿ ಅಕ್ರಮ ಔಷಧ ಮಾರಾಟ ತಡೆಯುವುದು ಡ್ರಗ್ ಇನ್ಸ್ಪೆಕ್ಟರ್ಗಳ ಜವಾಬ್ದಾರಿಯಲ್ಲವೇ?‘ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.