ದಸರಾ ಮಹೋತ್ಸವ: ಮೈಸೂರಿನಿಂದ ಕೊಪ್ಪಳಕ್ಕೆ ತೆರಳಿದ ಗವಿಸಿದ್ಧೇಶ್ವರ ಶ್ರೀ
ಮೈಸೂರು: ದಸರಾ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ನಗರದ ಲಿಂಗಾಂಬುಧಿ ಸಸ್ಯತೋಟದಲ್ಲಿ ಆಯೋಜಿಸಿರುವ ಪುಷ್ಪಮೇಳವನ್ನು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಬುಧವಾರ ವೀಕ್ಷಿಸಿದರು.ಹೂವುಗಳಿಂದ ಅಲಂಕರಿಸಿದ ಬೃಹತ್ ಆನೆಗಳ ಪ್ರತಿಕೃತಿ, ಬಾಲಿ ಶೈಲಿಯ ಜಾನೂರ್ ಕಲಾಕೃತಿಯ ಸ್ವಾಗತಕಮಾನು, ಬಿದಿರಿನ ಗ್ಯಾಲರಿ, ಆರ್ಕಿಡ್ ಹೂವಿನ ಅಲಂಕಾರ, ಚಾವುಂಡರಾಯ ಬಸದಿ ಪ್ರತಿಕೃತಿ ಹ

ಮೈಸೂರು: ದಸರಾ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ನಗರದ ಲಿಂಗಾಂಬುಧಿ ಸಸ್ಯತೋಟದಲ್ಲಿ ಆಯೋಜಿಸಿರುವ ಪುಷ್ಪಮೇಳವನ್ನು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಬುಧವಾರ ವೀಕ್ಷಿಸಿದರು.ಹೂವುಗಳಿಂದ ಅಲಂಕರಿಸಿದ ಬೃಹತ್ ಆನೆಗಳ ಪ್ರತಿಕೃತಿ, ಬಾಲಿ ಶೈಲಿಯ ಜಾನೂರ್ ಕಲಾಕೃತಿಯ ಸ್ವಾಗತಕಮಾನು, ಬಿದಿರಿನ ಗ್ಯಾಲರಿ, ಆರ್ಕಿಡ್ ಹೂವಿನ ಅಲಂಕಾರ, ಚಾವುಂಡರಾಯ ಬಸದಿ ಪ್ರತಿಕೃತಿ ಹಾಗೂ ಭಗವಾನ್ ಬಾಹುಬಲಿಯ ಪ್ರತಿಮೆಯನ್ನು ವೀಕ್ಷಿಸಿದರು.ಸಸ್ಯತೋಟದಲ್ಲಿನ ಪುಷ್ಪ ಹಾಸಿಗೆಗಳು, ಬೋನ್ಸಾಯ್ ಉದ್ಯಾನ, ಕಮಲದ ಕೊಳ, ಬಿದಿರು ವನ, ಸಂಗೀತ ಕಾರಂಜಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.‘ಇಲ್ಲಿ ಹೂಗಳಷ್ಟೇ ಅಲ್ಲ, ಮನಸುಗಳೇ ಅರಳುತ್ತವೆ’ ಎಂದು ಶ್ಲಾಘಿಸಿದರು.ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶ್ರೀಗಳಿಗೆ ಮಾಹಿತಿ ನೀಡಿದರು. ಕೊಪ್ಪಳಕ್ಕೆ ಬೀಳ್ಕೊಡುಗೆ: ಅ.11ರಂದು ಇಲ್ಲಿ ಮೈಸೂರು ದಸರಾ ಉದ್ಘಾಟಿಸಿದ್ದ ಸ್ವಾಮೀಜಿ ನಗರದ ಸುತ್ತೂರು ಮಠದಲ್ಲೇ ತಂಗಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. 4ನೇ ದಿನವಾದ ಬುಧವಾರ ಬೆಳಿಗ್ಗೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಮಕ್ಕಳ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಜೆಎಸ್ಎಸ್ ಮಹಾವಿದ್ಯಾಪೀಠದ ಕಚೇರಿ, ಜೆ.ಕೆ. ಮೈದಾನದಲ್ಲಿ ಯೋಗ ದಸರಾ, ಮಹಿಳಾ ದಸರಾ ಮಳಿಗೆಗೆ ಭೇಟಿ ನೀಡಿ ವೀಕ್ಷಿಸಿದರು. ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ನಡೆದ ಯುವ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಅವರಿಗೆ ಜಿಲ್ಲಾಡಳಿತದಿಂದ ‘ಪಯಣ’ ಮ್ಯೂಸಿಯಂ ಸಮೀಪದ ಜಿಲ್ಲೆಯ ಗಡಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು. ಶಿಷ್ಟಾಚಾರ ಅಧಿಕಾರಿ ಮಂಜುನಾಥ್ ಬೀಳ್ಕೊಟ್ಟರು.