ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಹೆಚ್ಡಿಕೆಗೆ ಪ್ರಿಯಾಂಕ್ ಎಚ್ಚರಿಕೆ
– ಸ್ಟಿಂಗ್ ಆಪರೇಷನ್ ಎಸ್ಐಟಿ ತನಿಖೆ ಇಲ್ಲ ಬೆಂಗಳೂರು: ಸಿದ್ದರಾಮಯ್ಯ(Siddaramaiah) ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ಸಿಗರೇ ಹೊರಟಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy)ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡುವುದ

– ಸ್ಟಿಂಗ್ ಆಪರೇಷನ್ ಎಸ್ಐಟಿ ತನಿಖೆ ಇಲ್ಲ ಬೆಂಗಳೂರು: ಸಿದ್ದರಾಮಯ್ಯ(Siddaramaiah) ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ಸಿಗರೇ ಹೊರಟಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy)ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಿರಿ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್(Sting Operation) ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಿಬಿಐ ತನಿಖೆ ಅಥವಾ ವಿಶೇಷ ತನಿಖಾ ತಂಡ(SIT) ರಚನೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮಾಜಿ ಸಿಎಂ ಹಾಗೂ ಪ್ರಸ್ತುತ ಕೇಂದ್ರ ಸಚಿವರಾಗಿದ್ದಾರೆ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಕ್ಷುಲ್ಲಕವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು. ರೇವಣ್ಣ ಕುಟುಂಬದ ಪ್ರಕರಣಗಳನ್ನು ಕಾಂಗ್ರೆಸ್ ಮಾಡಿದ್ದಾ ಅಥವಾ ಅವರೇ ಮಾಡಿಕೊಂಡಿದ್ದಾ ಹೇಳಿ? ಸುಮ್ಮನೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಆ ವಿಡಿಯೋಗಳನ್ನು ಕಾಂಗ್ರೆಸ್ ತಯಾರಿಸಿದೆಯಾ? ಪ್ರಜ್ವಲ್ ರೇವಣ್ಣ ಜೈಲಿನಲ್ಲಿರುವುದಕ್ಕೆ ಕಾಂಗ್ರೆಸ್ ಕಾರಣವೇ? ಅವರ ವಿಕೃತ ಮನಸ್ಥಿತಿಗೆ ಕಾಂಗ್ರೆಸ್ ಹೊಣೆಯೇ? ನಿಮ್ಮ ಮನೆಯ ಮಕ್ಕಳನ್ನು ನೀವು ಸರಿಯಾಗಿ ಬೆಳೆಸಿಲ್ಲ ಎಂದಾದರೆ ಅದಕ್ಕೆ ಕಾಂಗ್ರೆಸ್ಗೆ ಏನು ಸಂಬಂಧ? ಇಂತಹ ಮಾತುಗಳನ್ನು ಆಡಲು ನಾಚಿಕೆಯಾಗುವುದಿಲ್ಲವೇ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡರು. ಆ ಸ್ಟಿಂಗ್ ಕಾರ್ಯಾಚರಣೆಯನ್ನು ಸಿದ್ದರಾಮಯ್ಯನವರಾಗಲಿ ಅಥವಾ ಡಿ.ಕೆ. ಶಿವಕುಮಾರ್ ಅವರಾಗಲಿ ಮಾಡಿಸಿದ್ದಾರೆಯೇ? ಎಲ್ಲವನ್ನೂ ನಿಮ್ಮ ಮನೆ ಮಕ್ಕಳೇ ಮಾಡಿಕೊಂಡಿರುವುದು. ಕಾಂಗ್ರೆಸ್ ಎಂದಿಗೂ ಕುಟುಂಬಗಳ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿಲ್ಲ. ನಮ್ಮದು ಅಂತಹ ರಾಜಕೀಯ ಸಂಸ್ಕೃತಿಯಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: 100 ಅಡಿಗೆ ಕುಸಿದ ಕೆಆರ್ಎಸ್ ನೀರಿನ ಮಟ್ಟ ದೂರಿನನ್ವಯ ಕಾನೂನು ಕ್ರಮ ವಿವಾದಿತ ಸ್ಟಿಂಗ್ ಆಪರೇಷನ್ ತನಿಖೆ ಕುರಿತು ಸ್ಪಷ್ಟನೆ ನೀಡಿದ ಸಚಿವರು, ಈ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಲಿ ಅಥವಾ ಪ್ರತ್ಯೇಕ ಎಸ್ಐಟಿ ರಚನೆಯಾಗಲಿ ಇರುವುದಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಅಧಿಕೃತ ದೂರು ನೀಡಿದ್ದು, ಅದರನ್ವಯವೇ ಕಾನೂನು ತನಿಖೆ ನಡೆಯಲಿದೆ ಎಂದರು. ತನಿಖೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಕುಳಿತು ನಡೆಸಲು ಸಾಧ್ಯವಿಲ್ಲ. ಇದು ಸಿದ್ದರಾಮಯ್ಯ ಅವರ ಚಾರಿತ್ರ್ಯವಧೆ ಮಾಡಲು ನಡೆಸಿರುವ ವ್ಯವಸ್ಥಿತ ಪಿತೂರಿ. ಈ ಬಗ್ಗೆ ಖುದ್ದು ಸಿದ್ದರಾಮಯ್ಯನವರೇ ಸ್ಪಷ್ಟವಾಗಿ ಮಾತನಾಡಿದ್ದಾರೆ, ಬೇರೆಯವರು ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಹೇಳಿದರು. ಯಾರು ದಿನಬೆಳಗಾದರೆ ‘ಸ್ಟಿಂಗ್ ಸ್ಟಿಂಗ್’ ಎಂದು ಬೊಬ್ಬೆ ಹೊಡೆಯುತ್ತಿದ್ದಾರೋ, ಮೇಲ್ನೋಟಕ್ಕೆ ಅವರಿಗೆ ಈ ಬಗ್ಗೆ ಹೆಚ್ಚಿನ ಒಳಸುಳಿವು ಇದ್ದ ಹಾಗಿದೆ. ಸೂಕ್ತ ಸಮಯ ಮತ್ತು ಸಂದರ್ಭ ಬಂದಾಗ ಎಲ್ಲ ಸತ್ಯಾಂಶಗಳನ್ನು ಬಹಿರಂಗಪಡಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.