ಹಾಸನ ಡಿಸಿ-ಎಸ್ಪಿ ಜಟಾಪಟಿ ಸುಖಾಂತ್ಯ
ಬೆಂಗಳೂರು: ಹಾಸನ ಡಿಸಿ-ಎಸ್ಪಿ ನಡುವಿನ ಜಟಾಪಟಿ ಸುಖಾಂತ್ಯವಾಗಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಕಾಸಸೌಧಕ್ಕೆ ಇಬ್ಬರೂ ಅಧಿಕಾರಿಗಳನ್ನು ಕರೆಸಿಕೊಂಡು ಸಂಧಾನ ನಡೆಸಿದ್ದಾರೆ. ಹಾಸನದ ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ ಸಂಬಂಧ ಎಸ್ಪಿ ಶುಭನ್ವಿತಾಗೆ (Shubhanwita) ಡಿಸಿ ಲತಾ ಕುಮಾರಿ (K.S.Lathakumari) ನೋಟಿಸ್ ನೀಡಿದ್ದರು. ಈ ಪ್ರಕರಣ ರಾಜಕೀಯ ಸ್

ಬೆಂಗಳೂರು: ಹಾಸನ ಡಿಸಿ-ಎಸ್ಪಿ ನಡುವಿನ ಜಟಾಪಟಿ ಸುಖಾಂತ್ಯವಾಗಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಕಾಸಸೌಧಕ್ಕೆ ಇಬ್ಬರೂ ಅಧಿಕಾರಿಗಳನ್ನು ಕರೆಸಿಕೊಂಡು ಸಂಧಾನ ನಡೆಸಿದ್ದಾರೆ. ಹಾಸನದ ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ ಸಂಬಂಧ ಎಸ್ಪಿ ಶುಭನ್ವಿತಾಗೆ (Shubhanwita) ಡಿಸಿ ಲತಾ ಕುಮಾರಿ (K.S.Lathakumari) ನೋಟಿಸ್ ನೀಡಿದ್ದರು. ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದರು. ಮತ್ತೊಂದು ಕಡೆ ಕೇಂದ್ರ ಸಚಿವ ಕುಮಾರಸ್ವಾಮಿ, ಶಾಸಕ ಸ್ವರೂಪ್ ಪ್ರಕಾಶ್ ಕೂಡ ಡಿಸಿ ನಡೆಯನ್ನು ಖಂಡಿಸಿದ್ದರು. ಇದನ್ನೂ ಓದಿ: ಕಂಟ್ರೋಲ್ ರೂಮ್ಗೆ 50 ಲಕ್ಷ, ಎಐ ವ್ಯವಸ್ಥೆಗೆ 12 ಲಕ್ಷ – ಹಾಸನಾಂಬೆ ಖರ್ಚು ಲೆಕ್ಕ ಕೇಳಿ ತಲೆಚಚ್ಚಿಕೊಂಡ ಸಚಿವ ಶಿವಲಿಂಗೇಗೌಡ ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಕೂರಿಸಿ ಮಾತಾಡಿಸಿರುವ ಸಿಎಸ್, ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದಂತೆ ಆಡಳಿತ ನಡೆಸಿಕೊಂಡು ಹೋಗಲು ಸಲಹೆ-ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವಿವ ಕೋಲ್ಡ್ವಾರ್ಗೆ ಬ್ರೇಕ್ ಹಾಕಿದ ಸಿಎಸ್, ಹಾಸನಾಂಬೆ ಉತ್ಸವದ ಯಶಸ್ವಿಗೆ ಸೂಚನೆ ನೀಡಿದ್ದಾರೆ. ಸಭೆ ಬಳಿಕ ಎಲ್ಲಾ ಸರಿ ಮಾಡಿದ್ದೇವೆ ಅಂತ ಸಿಎಸ್ ಶಾಲಿನಿ ರಜನೀಶ್ ತಿಳಿಸಿದ್ದಾರೆ. ಡಿಸಿ-ಎಸ್ಪಿ ಇಬ್ಬರು ಕೈ ಕುಲುಕಿ ಪರಸ್ಪರ ಅಪ್ಪುಗೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇದನ್ನೂ ಓದಿ: ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ