ಯುವ ಜನತೆಗೆ ಸಂಸ್ಕೃತಿ ಮಹತ್ವ ತಿಳಿಸಿ: ಶ್ರೀಪಾದ ಜೋಶಿ
ರಾಣೆಬೆನ್ನೂರು: ‘ಯುವಜನತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಮಹತ್ವವನ್ನು ತಿಳಿಸಿಕೊಡುವುದು ಇಂದಿನ ಅಗತ್ಯವಾಗಿದೆ’ ಎಂದು ಪತ್ರಕರ್ತ ಶ್ರೀಪಾದ ಜೋಶಿ ಹೇಳಿದರು.ಅವರು ನಗರದ ಸ್ಟೇಷನ್ ರಸ್ತೆಯಲ್ಲಿನ ಕರ್ನಾಟಕ ಸಂಘದ ಆಲೂರು ವೆಂಕಟರಾಯರ ರಂಗಮಂದಿರದಲ್ಲಿ ಸೋಮವಾರ ರಾತ್ರಿ ನಡೆದ 90ನೇ ವರ್ಷದ ನಾಡಹಬ್ಬ ಕಾರ್ಯಕ್ರಮದ ಎರಡನೆಯ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸಂಸ್ಕೃ

ರಾಣೆಬೆನ್ನೂರು: ‘ಯುವಜನತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಮಹತ್ವವನ್ನು ತಿಳಿಸಿಕೊಡುವುದು ಇಂದಿನ ಅಗತ್ಯವಾಗಿದೆ’ ಎಂದು ಪತ್ರಕರ್ತ ಶ್ರೀಪಾದ ಜೋಶಿ ಹೇಳಿದರು.ಅವರು ನಗರದ ಸ್ಟೇಷನ್ ರಸ್ತೆಯಲ್ಲಿನ ಕರ್ನಾಟಕ ಸಂಘದ ಆಲೂರು ವೆಂಕಟರಾಯರ ರಂಗಮಂದಿರದಲ್ಲಿ ಸೋಮವಾರ ರಾತ್ರಿ ನಡೆದ 90ನೇ ವರ್ಷದ ನಾಡಹಬ್ಬ ಕಾರ್ಯಕ್ರಮದ ಎರಡನೆಯ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸಂಸ್ಕೃತಿ ಮತ್ತು ಸಂಸ್ಕಾರಗಳು ಕೇವಲ ಆಚರಣೆಗಳಲ್ಲ, ಅವು ನಮ್ಮ ಜೀವನವನ್ನು ಸುಂದರವಾಗಿಸುವ ಮತ್ತು ಸಮಾಜದಲ್ಲಿ ನಮಗೆ ಗೌರವ ತಂದುಕೊಡುವ ದಾರಿದೀಪಗಳಾಗಿವೆ’ ಎಂದರು.‘ಕರ್ನಾಟಕ ಸಂಘವು ಉದಯೋನ್ಮುಖ ಕಲಾವಿದರು, ಗಾಯಕರು, ಮತ್ತು ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ’ ಎಂದು ತಿಳಿಸಿದರು.ನಿವೃತ್ತ ಶಿಕ್ಷಕಿ ಫಾತಿಮಾ ಬೆಳಕೇರಿ ಮಾತನಾಡಿ, ‘ಮೊಬೈಲ್ನಲ್ಲಿ ಕಳೆದು ಹೋಗಿರುವ ಯುವಕರನ್ನು ಈ ವ್ಯಸನದಿಂದ ಹೊರತಬೇಕಾದ ಹೊಣೆಗಾರಿಕೆ ಪಾಲಕರದ್ದಾಗಿದೆ. ನವರಾತ್ರಿಯ 9 ಅವತಾರಗಳು, ವಿಜಯದಶಮಿಯ ಮಹತ್ವ ತಿಳಿಸಿ, ಪ್ರತಿ ದಿನವೂ ಒಂದಲ್ಲ ಒಂದು ಹಬ್ಬವನ್ನು ಆಚರಿಸುವ ಭಾರತೀಯ ಹಬ್ಬಗಳು ಎಲ್ಲರನ್ನು ಜೊತೆಗೂಡಿಸತ್ತಿವೆ’ ಎಂದರು.ಹೀರೋಯಿಸಂ ಚಲನಚಿತ್ರದ ನಾಯಕ ನಟ ಪ್ರಜ್ವಲ್ ಪಿ.ಬಿ. ಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಮಾತನಾಡಿದರು. ಹುಬ್ಬಳ್ಳಿಯ ಯುವ ಕಲಾವಿದ ಸುಜಯೇಂದ್ರ ಕುಲಕರ್ಣಿ ಮತ್ತು ಅವರ ತಂಡ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಅಭಿನಂದನ ಜೋಶಿ, ಶ್ರೀನಿಧಿ ಶಿರಹಟ್ಟಿ, ವಿನಯಾ ಜೋಶಿ , ನಾಗರಾಜ ಜೋಶಿ, ಡಾ. ಸಂಜಯ ನಾಯ್ಕ, ವಿನಾಯಕ ಜೋಶಿ, ಸತ್ಯನಾರಾಯಣ ವಿಶ್ವರೂಪ, ಶ್ರೀಪಾದ ಕುಲಕರ್ಣಿ, ಚಿದಂಬರ ಜೋಶಿ, ಮಂಜುಳಾ ಇದ್ದರು.261014-22-713589745