ಕೃಷಿ ಜಾಗೃತದಳ ದಾಳಿ, ₹68.58 ಲಕ್ಷ ಮೌಲ್ಯದ ಉತ್ಪನ್ನಗಳ ವಶ
ಬೆಂಗಳೂರು: ಪರವಾನಿಗೆ ಇಲ್ಲದೇ ಕೃಷಿ ಉತ್ಪನ್ನ ಹಾಗೂ ಸಾವಯವ ಗೊಬ್ಬರ ಮಾರಾಟ, ಉತ್ಪಾದನೆ ಮಾಡುತ್ತಿದ್ದ ಘಟಕಗಳ ಮೇಲೆ ಕೃಷಿ ಇಲಾಖೆಯ ಜಾಗೃತ ದಳದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲಾಗಿದೆ.ಬಳ್ಳಾರಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ದಾಳಿಗಳು ನಡೆದಿದ್ದು ಸುಮಾರು ₹68.58 ಲಕ್ಷ ಮೌಲ್ಯದ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೃಷಿ ಇಲಾಖೆ ಆಯುಕ್ತ ಡಾ.ಬಿ.
ಬೆಂಗಳೂರು: ಪರವಾನಿಗೆ ಇಲ್ಲದೇ ಕೃಷಿ ಉತ್ಪನ್ನ ಹಾಗೂ ಸಾವಯವ ಗೊಬ್ಬರ ಮಾರಾಟ, ಉತ್ಪಾದನೆ ಮಾಡುತ್ತಿದ್ದ ಘಟಕಗಳ ಮೇಲೆ ಕೃಷಿ ಇಲಾಖೆಯ ಜಾಗೃತ ದಳದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲಾಗಿದೆ.ಬಳ್ಳಾರಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ದಾಳಿಗಳು ನಡೆದಿದ್ದು ಸುಮಾರು ₹68.58 ಲಕ್ಷ ಮೌಲ್ಯದ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೃಷಿ ಇಲಾಖೆ ಆಯುಕ್ತ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.ಬಳ್ಳಾರಿ ನಗರದ 'ಮಂಜುಶ್ರೀ ಮಾರ್ಕೆಟಿಂಗ್' ಮಳಿಗೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು (ಜಾಗೃತ ದಳ), ಬಳ್ಳಾರಿಯ ಸಹಾಯಕ ಕೃಷಿ ನಿರ್ದೇಶಕರ ಮತ್ತು ಅವರ ಸಿಬ್ಬಂದಿಯೊಂದಿಗೆ ಜಂಟಿ ಪರಿಶೀಲನೆಯನ್ನು ನಡೆಸಲಾಯಿತು.ಪರಿಶೀಲನೆಯ ಸಮಯದಲ್ಲಿ, ರಸಗೊಬ್ಬರ ಪರವಾನಗಿ ಇಲ್ಲದೆ ಸಾವಯವ ಗೊಬ್ಬರ ಮತ್ತು ಜೈವಿಕ ಉತ್ತೇಜಕಗಳನ್ನುಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲಿ ಸಂಗ್ರಹಿಸಿಡಲಾಗಿದ್ದ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ದಾಸ್ತಾನಿನ ಒಟ್ಟು ಅಂದಾಜು ಮೌಲ್ಯ ₹61.20 ಲಕ್ಷ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಬೆಂಗಳೂರು ಜಿಲ್ಲೆ ವ್ಯಾಪ್ತಿಯ ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಳ್ಳಿಯಲ್ಲಿ ಕೃಷಿ ಜಾಗೃತದಳದ ಇನ್ಸ್ಪೆಕ್ಟರ್ ಟಿ.ಎನ್.ಅಶೋಕ ಅವರ ನೇತೃತ್ವದಲ್ಲಿ ಶ್ರೀರಾಮಚಂದ್ರ ಪುಲ್ ವೈಜರ್ ಮತ್ತು ಕೈಗಾರಿಕೆ ಮೇಳೆ ದಾಳಿ ನಡೆಸಲಾಯಿತು. ಉತ್ಪಾದನೆ ಘಟಕಕ್ಕೆ ಅನುಮತಿಯನ್ನೇ ಪಡೆಯದಿರುವುದು, ಗುರುತು ಪಟ್ಟಿ ನಿಯಮ ಉಲ್ಲಂಘನೆ ಆಧರಿಸಿ ಪ್ರಕರಣ ದಾಖಲಿಸಿ 3.12 ಲಕ್ಷ ಮೌಲ್ಯದ ರಾಸಾಯನಿಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.ಮೈಸೂರಿನ ಬಂಡಿಪಾಳ್ಯದಲ್ಲಿರುವ ಶ್ರೀ ವೈಷ್ಣವಿ ಎಂಟರ್ ಪ್ರೈಸಸ್ ಔಟ್ಲೆಟ್ ಘಟಕದ ಮೇಲೂ ಇನ್ಸ್ಪೆಕ್ಟರ್ ಎಲ್.ತೇಜಸ್ವಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅಧಿಸೂಚಿತವಲ್ಲದ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದುದು ಪತ್ತೆಯಾಗಿದ್ದು, ₹ 4.26 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.