ಎಸ್ಐಆರ್ ಕರಡಿನಲ್ಲಿ ಹೆಸರಿಲ್ಲದ ಮಾತ್ರಕ್ಕೆ ಅಳಿಸಿದಂತಲ್ಲ: ಚುನಾವಣಾ ಆಯೋಗ
ಪಣಜಿ: ‘ಎಸ್ಐಆರ್ ಕರಡು ಪಟ್ಟಿಯಲ್ಲಿ ಹೆಸರು ಇಲ್ಲ ಎಂದಾಕ್ಷಣ, ಮತದಾರರ ಹೆಸರನ್ನು ಅಳಿಸಲಾಗಿದೆ ಎಂದರ್ಥವಲ್ಲ’ ಎಂದು ಚುನಾವಣಾ ಆಯೋಗವು ಮಂಗಳವಾರ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.ಗೋವಾದ ಸೇಂಟ್ ಕ್ರೂಸ್ ವಿಧಾನಸಭಾ ಕ್ಷೇತ್ರದ ನಿವಾಸಿ ಪರೇಶ್ ಸಾಲ್ಗೋಂಕರ್ ಕುಟುಂಬದ 6 ಸದಸ್ಯರ ಹೆಸರು ಕರಡು ಪಟ್ಟಿಯಲ್ಲಿ ಇರಲಿಲ್ಲ. ಈ ಬಗ್ಗೆ ಪರೇಶ್ ಅವರು ಬಾಂಬೆ ಹೈಕೋರ್ಟ್ ಮೆಟ

ಪಣಜಿ: ‘ಎಸ್ಐಆರ್ ಕರಡು ಪಟ್ಟಿಯಲ್ಲಿ ಹೆಸರು ಇಲ್ಲ ಎಂದಾಕ್ಷಣ, ಮತದಾರರ ಹೆಸರನ್ನು ಅಳಿಸಲಾಗಿದೆ ಎಂದರ್ಥವಲ್ಲ’ ಎಂದು ಚುನಾವಣಾ ಆಯೋಗವು ಮಂಗಳವಾರ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.ಗೋವಾದ ಸೇಂಟ್ ಕ್ರೂಸ್ ವಿಧಾನಸಭಾ ಕ್ಷೇತ್ರದ ನಿವಾಸಿ ಪರೇಶ್ ಸಾಲ್ಗೋಂಕರ್ ಕುಟುಂಬದ 6 ಸದಸ್ಯರ ಹೆಸರು ಕರಡು ಪಟ್ಟಿಯಲ್ಲಿ ಇರಲಿಲ್ಲ. ಈ ಬಗ್ಗೆ ಪರೇಶ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ವಾಲ್ಮೀಕಿ ಮೆನೇಜ್ ಮತ್ತು ಅಮಿತ್ ಜಾಮ್ಸಾಂದೇಕರ್ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತು.ಎಸ್ಐಆರ್, ಆಯೋಗವು ಪ್ರತಿ ಬಾರಿ ನಡೆಸುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅಲ್ಲ. ಎಸ್ಐಆರ್, ಪಟ್ಟಿಯನ್ನು ಸಿದ್ಧಪಡಿಸುವ ಹೊಸ ಆರಂಭದಂತೆ. 2002ರ ವೇಳೆ ಅರ್ಜಿದಾರರು ವಾಸವಿದ್ದ ಸ್ಥಳದಲ್ಲಿ ಪ್ರಸ್ತುತ ಕಳೆದ 8–10 ವರ್ಷಗಳಿಂದ ವಾಸವಿಲ್ಲ. ಜೊತೆಗೆ, ಅವರು ವಿಳಾಸ ಬದಲಾವಣೆಗೆ ಅರ್ಜಿಯನ್ನೂ ಸಲ್ಲಿಸಿಲ್ಲ’ ಎಂದು ಆಯೋಗದ ಪರ ವಕೀಲ ಕುಂಭಕೋಣಿ ವಾದಿಸಿದರು.261014-51-600106055
Read the complete story at Prajavani