ನ.5ರಂದು ರಾಷ್ಟ್ರಪತಿ ಭವನದಲ್ಲಿ ರಾಮಾಯಣ ಸಿನಿಮಾ ಪ್ರದರ್ಶನ
-ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಅಭಿನಯದ ಚಿತ್ರ ನವದೆಹಲಿ: ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರ ಬಹುನಿರೀಕ್ಷಿತ `ರಾಮಾಯಣ: ಭಾಗ 1′ (Ramayana Part 1) ಚಿತ್ರವು ಜಗತ್ತಿನಾದ್ಯಂತ ನ.5ರಂದು ರಿಲೀಸ್ ಆಗಲಿದೆ. ಅದೇ ದಿನದಂದು ರಾಷ್ಟ್ರಪತಿ ಭವನದಲ್ಲಿ (Rashtrapathi Bhawan) ವಿಶೇಷ ಪ್ರದರ್ಶನವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ ಸಾಮಾ

-ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಅಭಿನಯದ ಚಿತ್ರ ನವದೆಹಲಿ: ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರ ಬಹುನಿರೀಕ್ಷಿತ `ರಾಮಾಯಣ: ಭಾಗ 1′ (Ramayana Part 1) ಚಿತ್ರವು ಜಗತ್ತಿನಾದ್ಯಂತ ನ.5ರಂದು ರಿಲೀಸ್ ಆಗಲಿದೆ. ಅದೇ ದಿನದಂದು ರಾಷ್ಟ್ರಪತಿ ಭವನದಲ್ಲಿ (Rashtrapathi Bhawan) ವಿಶೇಷ ಪ್ರದರ್ಶನವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ ಸಾಮಾನ್ಯವಾಗಿ ಈ ರೀತಿ ಚಿತ್ರಪ್ರದರ್ಶನವನ್ನು ರಾಜಕೀಯ ಗಣ್ಯರಿಗಾಗಿ ಆಯೋಜಿಸಲಾಗುತ್ತದೆ. ಅದೇ ರೀತಿ ಸದ್ಯ ರಾಮಾಯಣ ಚಿತ್ರವನ್ನು ಪ್ರದರ್ಶಿಸಲು ಅನುಮತಿಗಳನ್ನು ಕೋರಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ, ಈ ವಿಶೇಷ ಪ್ರದರ್ಶನದ ವೇಳೆ ನಟರಾದ ರಣಬೀರ್ ಕಪೂರ್, ಯಶ್ ಹಾಗೂ ನಟಿ ಸಾಯಿ ಪಲ್ಲವಿ ಮತ್ತು ನಿರ್ದೇಶಕ ನಿತೇಶ್ ತಿವಾರಿ ಭಾಗವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ನ.5 ರಂದೇ ವಿಶ್ವದಾದ್ಯಂತ ಏಕಕಾಲಕ್ಕೆ ‘ರಾಮಾಯಣ ಪಾರ್ಟ್ 1’ ರಿಲೀಸ್! ಜಟಾಯು ಪೋಸ್ಟರ್ ಬಿಡುಗಡೆ: ಪೌರಾಣಿಕ ಕಥೆಯ ಪೂಜ್ಯ ಪಕ್ಷಿಯಾದ `ಜಟಾಯು’ವಿನ ಪೋಸ್ಟರ್ ಅನ್ನೂ ಬಿಡುಗಡೆ ಮಾಡಲಾಗಿದ್ದು, ಈ ಪಾತ್ರಕ್ಕೆ ನಟ ಅನುಪಮ್ ಖೇರ್ ಧ್ವನಿ ನೀಡಿದ್ದಾರೆ. ರಾವಣನು ಸೀತೆಯನ್ನು ಅಪಹರಿಸಿದಾಗ ಜಟಾಯು ಆಕೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಅಪಾಯವಿದೆ ಎಂದು ತಿಳಿದಿದ್ದರೂ ರಾವಣನನ್ನು ಎದುರಿಸಿ ಪ್ರಾಣಾರ್ಪಣೆ ಮಾಡುವ ಜಟಾಯುವಿನ ತ್ಯಾಗವು ಈ ಮಹಾಕಾವ್ಯದ ಪ್ರಮುಖ ಕ್ಷಣವಾಗಿದೆ.ಇದನ್ನೂ ಓದಿ: ರಾಮಾಯಣದ ‘ಜೈ ಜೈ ರಾಮ್’ ಹಾಡು ರಿಲೀಸ್; ರಣಬೀರ್-ಸಾಯಿ ಪಲ್ಲವಿ ರಾಮ-ಸೀತೆಯಾಗಿ ಮೋಡಿ ಪೌರಾಣಿಕ ಮಹಾಕಾವ್ಯ ಆಧಾರಿತ ಈ ಸಿನಿಮಾದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಇವರೊಂದಿಗೆ ರಕುಲ್ ಪ್ರೀತ್ ಸಿಂಗ್, ಲಾರಾ ದತ್ತಾ, ವಿವೇಕ್ ಒಬೆರಾಯ್, ಶೀಬಾ ಚಡ್ಡಾ, ಅರುಣ್ ಗೋವಿಲ್ ಮತ್ತು ಇಂದಿರಾ ಕೃಷ್ಣನ್ ಮುಂತಾದ ಪ್ರಮುಖ ತಾರಾಗಣವಿದೆ. ಎರಡು ಭಾಗಗಳಲ್ಲಿ ಚಿತ್ರದ ಬಿಡುಗಡೆ: ಈ ಚಿತ್ರವನ್ನು ಎರಡು ಭಾಗಗಳ ಸಿನಿಮಾ ಸರಣಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. `ರಾಮಾಯಣ: ಭಾಗ 1′ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಯ ಸಂದರ್ಭದಲ್ಲಿ ತೆರೆಕಾಣಲಿದೆ. ಈ ಚಿತ್ರವು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಇದನ್ನೂ ಓದಿ:ದಾಖಲೆ ಬರೆದ ʻರಾಮಾಯಣʼ ಟ್ರೈಲರ್ – ರಾಕಿಂಗ್ ಸ್ಟಾರ್ ಹವಾ ಜೋರು