11.40 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ನವರಾತ್ರಿ ಗಿಫ್ಟ್ – 78 ದಿನಗಳ ಬೋನಸ್ಗೆ ಕೇಂದ್ರ ಸಂಪುಟ ಒಪ್ಪಿಗೆ!
– ಬೋನಸ್ಗೆ ಯಾರೆಲ್ಲ ಅರ್ಹರು? ನವದೆಹಲಿ: ಭಾರತೀಯ ರೈಲ್ವೆ ಉದ್ಯೋಗಿಗಳಿಗೆ (Railway Employees) ಕೇಂದ್ರ ಸರ್ಕಾರ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ರೈಲ್ವೆ ನೌಕರರಿಗೆ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ (PLB) ನೀಡಲು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೋನಸ್ (Bonus) ಪಾವತಿಗಾಗಿ ಒಟ್ಟು 2,009.61 ಕೋಟಿ ರೂ.

– ಬೋನಸ್ಗೆ ಯಾರೆಲ್ಲ ಅರ್ಹರು? ನವದೆಹಲಿ: ಭಾರತೀಯ ರೈಲ್ವೆ ಉದ್ಯೋಗಿಗಳಿಗೆ (Railway Employees) ಕೇಂದ್ರ ಸರ್ಕಾರ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ರೈಲ್ವೆ ನೌಕರರಿಗೆ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ (PLB) ನೀಡಲು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೋನಸ್ (Bonus) ಪಾವತಿಗಾಗಿ ಒಟ್ಟು 2,009.61 ಕೋಟಿ ರೂ. ವೆಚ್ಚವಾಗಲಿದೆ. ದೇಶಾದ್ಯಂತ ಸುಮಾರು 11.40 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಈ ಸೌಲಭ್ಯ ಸಿಗಲಿದೆ. ರೈಲ್ವೆ ಸಿಬ್ಬಂದಿಯ ಉತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ ಪ್ರತಿವರ್ಷ ಈ ಬೋನಸ್ ನೀಡಲಾಗುತ್ತದೆ. ಅರ್ಹ ಉದ್ಯೋಗಿಗಳಿಗೆ ಗರಿಷ್ಠ 17,951 ರೂ. ಬೋನಸ್ ಅರ್ಹ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ರೂಪದಲ್ಲಿ ಗರಿಷ್ಠ 17,951 ರೂ. ಪಾವತಿಸಲಾಗುತ್ತದೆ. ಸಾಮಾನ್ಯವಾಗಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪಾವತಿಸಲಾಗುತ್ತದೆ. ಈ ವರ್ಷವೂ ಸುಮಾರು 11.40 ಲಕ್ಷ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳಿಗೆ ಬೋನಸ್ ಪಾವತಿಸಲಾಗುತ್ತದೆ. ಯಾರಿಗೆಲ್ಲ ಸಿಗಲಿದೆ ಬೋನಸ್? ಟ್ರ್ಯಾಕ್ ನಿರ್ವಹಣಾ ಸಿಬ್ಬಂದಿ, ಲೋಕೋ ಪೈಲಟ್ಗಳು, ರೈಲು ವ್ಯವಸ್ಥಾಪಕರು (ಗಾರ್ಡ್ಗಳು), ಸ್ಟೇಷನ್ ಮಾಸ್ಟರ್ಗಳು, ಮೇಲ್ವಿಚಾರಕರು, ತಂತ್ರಜ್ಞರು ಮತ್ತು ತಂತ್ರಜ್ಞರ ಸಹಾಯಕರು, ಪಾಯಿಂಟ್ಸ್ಮನ್ಗಳು, ಸಚಿವಾಲಯದ ಸಿಬ್ಬಂದಿ, ಇತರ ಗ್ರೂಪ್ ‘ಸಿ’ ನೌಕರರು ಈ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ.