ಪ್ರೀತಿಸಿದ ಹುಡುಗನಿಗೋಸ್ಕರ ರಷ್ಯಾ ತೊರೆದು ಕುಟುಂಬದೊಂದಿಗೆ ಭಾರತಕ್ಕೆ ಬಂದ ಜೂಲಿ
ಅಪರೂಪದ ಹಾಗೂ ಅಸಾಧ್ಯವೆನಿಸುವ ಪ್ರೇಮಕಥೆಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿದೆ. ಬಿಹಾರದ ಯುವಕನೊಬ್ಬ ರಷ್ಯಾದಿಂದ ಹುಟ್ಟೂರಿಗೆ ಹಿಂತಿರುಗಿದ 6 ತಿಂಗಳ ನಂತರ, ಅಲ್ಲಿ ಪ್ರೀತಿಸಿದ್ದ ಯುವತಿ ಭಾರತಕ್ಕೆ ಮರಳಿ ಅವನನ್ನೇ ಮದುವೆಯಾಗಲು ಸಜ್ಜಾಗಿದ್ದಾರೆ.ಸದ್ಯ ಈ ಘಟನೆಯು ಪ್ರೀತಿಗೆ ಯಾವುದೇ ಭಾಷೆ, ಧರ್ಮ ಹಾಗೂ ದೇಶಗಳ ಗಡಿಗಳಿಲ್ಲ ಎಂಬುದಕ್ಕೆ ಉತ್ತಮ ನಿದ

ಅಪರೂಪದ ಹಾಗೂ ಅಸಾಧ್ಯವೆನಿಸುವ ಪ್ರೇಮಕಥೆಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿದೆ. ಬಿಹಾರದ ಯುವಕನೊಬ್ಬ ರಷ್ಯಾದಿಂದ ಹುಟ್ಟೂರಿಗೆ ಹಿಂತಿರುಗಿದ 6 ತಿಂಗಳ ನಂತರ, ಅಲ್ಲಿ ಪ್ರೀತಿಸಿದ್ದ ಯುವತಿ ಭಾರತಕ್ಕೆ ಮರಳಿ ಅವನನ್ನೇ ಮದುವೆಯಾಗಲು ಸಜ್ಜಾಗಿದ್ದಾರೆ.ಸದ್ಯ ಈ ಘಟನೆಯು ಪ್ರೀತಿಗೆ ಯಾವುದೇ ಭಾಷೆ, ಧರ್ಮ ಹಾಗೂ ದೇಶಗಳ ಗಡಿಗಳಿಲ್ಲ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಭಾಗಲ್ಪುರದ ರಾಹುಲ್ ಯಾದವ್ ಅವರು ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ರಷ್ಯಾಗೆ ಹೋಗಿದ್ದರು. ಆಗ ಜೂಲಿ ಎಂಬ ಯುವತಿಯ ಪರಿಚಯವಾಗಿತ್ತು. ಅವರ ಪರಿಚಯ ಸ್ನೇಹವಾಗಿ, ಪ್ರೀತಿಯೆಡೆಗೆ ತಿರುಗಿತ್ತು.‘ಸಿಟಿ ಲೈಟ್ಸ್’ನಲ್ಲಿ ಪ್ರೇಮಕಥೆ: ‘ಕಂದಮ್ಮ ಕಂದಮ್ಮ’ ಹಾಡು ಬಿಡುಗಡೆ ಕಾರಣಾಂತರಗಳಿಂದ ರಾಹುಲ್ ಯಾದವ್ ಅವರು ಹಲವು ದಿನಗಳ ಹಿಂದೆ ರಷ್ಯಾ ತೊರೆದು ತಮ್ಮ ಹುಟ್ಟೂರಿಗೆ ಮರಳಿದ್ದರು. ಆದರೂ, ಪ್ರೇಯಸಿ ಜೂಲಿ ಅವರ ಜತೆಗೆ ಸಂಪರ್ಕದಲ್ಲಿದ್ದರು. ಜೂಲಿ ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗಲು ನಿರ್ಧರಿಸಿ, ತನ್ನ ಕುಟುಂಬದೊಂದಿಗೆ ರಾಹುಲ್ ಇದ್ದ ಹಳ್ಳಿಗೆ ಬಂದಿದ್ದಾರೆ.ಕೃತ್ವಿಕ್ ನಿರ್ದೇಶನದ ವಿಭಿನ್ನ ಪ್ರೇಮಕಥೆ: ಲವ್ ಸೀಸನ್ಸ್ನಲ್ಲಿ ಮಳೆಯ ಹಾಡುಕುಟುಂಬದೊಂದಿಗೆ ಊರಿಗೆ ಬಂದ ಪ್ರೇಯಸಿಯನ್ನು ರಾಹುಲ್ ತಮ್ಮ ಪುಟ್ಟ ಗುಡಿಸಲಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಆತನ ಮನೆ ಹಾಗೂ ಕುಟುಂಬದ ಪರಿಸ್ಥಿತಿ ನೋಡಿದ, ಜೂಲಿ ಆತನನ್ನೇ ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ, ಇಬ್ಬರ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿವೆ. ನವೆಂಬರ್ನಲ್ಲಿ ಇವರ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. View this post on Instagram ಸದ್ಯ ಈ ಅಪರೂಪದ ಪ್ರೇಮಕಥೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, ‘ಪ್ರೀತಿಸಿದ ಹುಡುಗನಿಗಾಗಿ ಅಷ್ಟು ದೂರದಿಂದ ಬಂದು, ಅವನ ಸ್ಥಿತಿ ನೋಡಿ ಮದುವೆಯಾಗಲು ಒಪ್ಪಿಕೊಂಡಿರುವುದು ನಿಜಕ್ಕೂ ಮೆಚ್ಚುವಂತಹದ್ದು’ ಎಂದು ಕಮೆಂಟ್ ಮಾಡಿದ್ದಾರೆ.ಮತ್ತೊಬ್ಬ ಬಳಕೆದಾರರು, ‘ನಿಜವಾದ ಪ್ರೀತಿಗೆ ಯಾವುದೇ ಗಡಿಗಳಿಲ್ಲ’ ಎಂದು ಕಮೆಂಟ್ನಲ್ಲಿ ಬರೆದಿದ್ದಾರೆ. ’ಈಕೆ ರಷ್ಯಾದ ಗೂಢಚಾರಿಯಾಗಿರಬಹುದು, ಆಕೆ ಅವನನ್ನು ರಷ್ಯಾ ಮಿಲಿಟರಿಗೆ ಸೇರಿಸಲು ಪ್ರಯತ್ನಿಸುತ್ತಿರಬಹುದು’ ಎಂದು ಇನ್ನೊಬ್ಬರು ವ್ಯಂಗ್ಯ ಮಾಡಿದ್ದಾರೆ.