ಹುಲಸೂರು| ರಸ್ತೆಬದಿಯ ಸಸಿಗಳ ಸಂರಕ್ಷಣೆಗೆ ಹರಸಾಹಸ; ಮಳೆ ಕೊರತೆಯಿಂದ ಒಣಗುವ ಆತಂಕ
ಹುಲಸೂರ: ಮಳೆ ಕೊರತೆ ಹಾಗೂ ಬಿಸಿಲಿನ ತೀವ್ರತೆಯಿಂದ ರಸ್ತೆಬದಿ ನೆಟ್ಟಿರುವ ಸಸಿಗಳು ಒಣಗುವ ಆತಂಕ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಸಸಿಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿಯು ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ.ಪಟ್ಟಣ ಸಮೀಪದ ಸೋಲ ದಾಪಕಾ ಗ್ರಾಮದಿಂದ ಭಾಲ್ಕಿ– ಬಸವಕಲ್ಯಾಣ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿರುವ ಸಸಿಗಳು ಸ

ಹುಲಸೂರ: ಮಳೆ ಕೊರತೆ ಹಾಗೂ ಬಿಸಿಲಿನ ತೀವ್ರತೆಯಿಂದ ರಸ್ತೆಬದಿ ನೆಟ್ಟಿರುವ ಸಸಿಗಳು ಒಣಗುವ ಆತಂಕ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಸಸಿಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿಯು ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ.ಪಟ್ಟಣ ಸಮೀಪದ ಸೋಲ ದಾಪಕಾ ಗ್ರಾಮದಿಂದ ಭಾಲ್ಕಿ– ಬಸವಕಲ್ಯಾಣ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿರುವ ಸಸಿಗಳು ಸೇರಿದಂತೆ ವಿವಿಧ ರಸ್ತೆಗಳಲ್ಲಿ ನೆಟ್ಟಿರುವ ಸಾವಿರಾರು ಗಿಡಗಳಿಗೆ ಅರಣ್ಯ ಇಲಾಖೆ ನೀರುಣಿಸುತ್ತಿದೆ.ದೂರದ ಸ್ಥಳಗಳಿಂದ ಟ್ಯಾಂಕರ್ನಲ್ಲಿ ನೀರು ತಂದು ಸಸಿಗಳಿಗೆ ಪೂರೈಸುವುದು ಶ್ರಮದಾಯಕ ಕೆಲಸ. ಒಂದು ಟ್ಯಾಂಕರ್ನಿಂದ ಕೇವಲ 25 ಸಸಿಗಳಿಗೆ ನೀರುಣಿಸಲು ಸಾಧ್ಯವಾಗುತ್ತದೆ ಎಂಬುದು ಸಿಬ್ಬಂದಿಯ ಕಾರ್ಯದ ಸವಾಲನ್ನು ತೋರಿಸುತ್ತದೆ. ಆದರೂ, ಸಸಿಗಳು ಒಣಗಿ ನಾಶವಾಗಬಾರದು ಎಂಬ ಉದ್ದೇಶದಿಂದ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.ಕೆಲವೆಡೆ, ರಸ್ತೆ ಬದಿ, ಜಮೀನುಗಳ ಬದುಗಳಲ್ಲಿ ನೆಟ್ಟಿರುವ ಸಸಿಗಳಿಗೆ ಕಸಕಡ್ಡಿ ಸುಡುವ ಸಂದರ್ಭದಲ್ಲಿ ಬೆಂಕಿ ತಗುಲುವುದು, ಕೊಂಬೆ ಮುರಿಯುವುದು ಹಾಗೂ ಗಿಡಗಳಿಗೆ ಹಾನಿ ಮಾಡುವ ಘಟನೆಗಳು ನಡೆಯುತ್ತಿರುವ ಬಗ್ಗೆ ಪರಿಸರ ಕಾಳಜಿಯುಳ್ಳವರು ಆತಂಕ ವ್ಯಕ್ತಪಡಿಸಿದ್ದಾರೆ. ಸಸಿ ಬೆಳೆದು ನೆರಳು ನೀಡಿದರೆ, ಬೆಳೆಗಳಿಗೆ ತೊಂದರೆಯಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದಲೂ ಕೆಲವು ರೈತರು ಅವುಗಳಿಗೆ ಹಾನಿ ಮಾಡುತ್ತಾರೆ ಎಂಬ ಆರೋಪಗಳಿವೆ. ಆದರೆ, ಇಂತಹ ಆರೋಪಗಳ ಕುರಿತು ಸಂಬಂಧಪಟ್ಟ ಇಲಾಖೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.ಬೇವು, ಆಲ, ಅರಳಿ, ಹೊಂಗೆ ಸೇರಿದಂತೆ ವಿವಿಧ ಜಾತಿಯ ಸಸಿಗಳು ಬೆಳೆದು ಮರಗಳಾದರೆ ಪರಿಸರದ ಸಮತೋಲನ, ಮಣ್ಣಿನ ಸಂರಕ್ಷಣೆ ಹಾಗೂ ಜೀವವೈವಿಧ್ಯ ಉಳಿಸಲು ಸಹಕಾರಿಯಾಗುತ್ತದೆ. ಹೀಗಾಗಿ, ಸಸಿಗಳಿಗೆ ಬೆಂಕಿ ಹಚ್ಚುವುದು ಅಥವಾ ಅವುಗಳನ್ನು ಕಡಿಯುವುದು ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ. ಇಂತಹ ಕೃತ್ಯಗಳನ್ನು ತಡೆಯಲು ಅರಣ್ಯ ಇಲಾಖೆ ನಿಗಾ ವಹಿಸುವುದರ ಜತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.ನೀರುಣಿಸುವುದರ ಜತೆಗೆ ರಕ್ಷಣೆಯೂ ಅಗತ್ಯ: ಸಸಿಗಳಿಗೆ ನೀರುಣಿಸುವ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮ ಸಾರ್ಥಕವಾಗಬೇಕಾದರೆ ಸಾರ್ವಜನಿಕರ ಸಹಕಾರವೂ ಅಗತ್ಯ. ಗ್ರಾಮ ಪಂಚಾಯಿತಿಗಳು, ರೈತರು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಸಸಿಗಳ ರಕ್ಷಣೆಗೆ ಕೈಜೋಡಿಸಬೇಕು. ಸಸಿಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದರ ಜತೆಗೆ, ಅವುಗಳಿಗೆ ಅಗತ್ಯವಿರುವ ಕಡೆಗಳಲ್ಲಿ ರಕ್ಷಣಾ ಬೇಲಿ ಹಾಕಬೇಕು.ಸರ್ಕಾರವೂ ಸಸಿಗಳ ನಿರ್ವಹಣೆಗೆ ಅಗತ್ಯ ಅನುದಾನ ಒದಗಿಸಿ, ನೀರಿನ ವ್ಯವಸ್ಥೆ ಹಾಗೂ ಸಂರಕ್ಷಣಾ ಕ್ರಮಗಳಿಗೆ ಆದ್ಯತೆ ನೀಡಬೇಕು. ನೆಟ್ಟ ಸಸಿಗಳ ಸ್ಥಿತಿಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಅವು ಮರಗಳಾಗಿ ಬೆಳೆಯುವವರೆಗೆ ಸಂರಕ್ಷಿಸುವ ಹೊಣೆಗಾರಿಕೆಯನ್ನು ಖಚಿತಪಡಿಸಬೇಕು. ಪ್ರೇಮಶೇಖರ, ವಲಯ ಅರಣ್ಯಾಧಿಕಾರಿ ಹುಲಸೂರಮಳೆ ಕೊರತೆ ಹಾಗೂ ಬಿಸಿಲಿನ ತೀವ್ರತೆಯಿಂದ ಸಸಿಗಳು ಒಣಗುವ ಆತಂಕ ಎದುರಾಗಿದೆ. ಅವುಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರುಣಿಸಲಾಗುತ್ತಿದೆ261014-33-1032256409