'ಬ್ಲೂ ಡ್ರಮ್ ಮರ್ಡರ್': ಪತಿ ಕೊಲೆಗೈದ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಮರಣದಂಡನೆ
ಮೀರತ್ (ಉತ್ತರ ಪ್ರದೇಶ): ದೇಶದಾದ್ಯಂತ ಭಾರಿ ಸುದ್ದಿ ಮಾಡಿದ್ದ 'ನೀಲಿ ಡ್ರಮ್ ಕೊಲೆ' ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮೀರತ್ ಜಿಲ್ಲಾ ನ್ಯಾಯಾಲಯವು ಬುಧವಾರ ಮಹತ್ವದ ತೀರ್ಪು ನೀಡಿದೆ. ಅಪರಾಧಿಗಳಾದ ಮುಸ್ಕಾನ್ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಪತಿ ಸೌರಭ್ ರಾ

ಮೀರತ್ (ಉತ್ತರ ಪ್ರದೇಶ): ದೇಶದಾದ್ಯಂತ ಭಾರಿ ಸುದ್ದಿ ಮಾಡಿದ್ದ 'ನೀಲಿ ಡ್ರಮ್ ಕೊಲೆ' ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮೀರತ್ ಜಿಲ್ಲಾ ನ್ಯಾಯಾಲಯವು ಬುಧವಾರ ಮಹತ್ವದ ತೀರ್ಪು ನೀಡಿದೆ. ಅಪರಾಧಿಗಳಾದ ಮುಸ್ಕಾನ್ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಪತಿ ಸೌರಭ್ ರಾಜಪೂತನನ್ನು ಕೊಲೆ ಮಾಡಿ, ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಸಿಮೆಂಟ್ ತುಂಬಿದ ನೀಲಿ ಡ್ರಮ್ನಲ್ಲಿ ಬಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿತ್ತು. 2025ರ ಮಾರ್ಚ್ನಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದಲ್ಲಿ ಇಬ್ಬರೂ ಆರೋಪಿಗಳು ತಪ್ಪಿತಸ್ಥರೆಂದು ನಾಯ್ಯಾಲಯ ತೀರ್ಪು ನೀಡಿದೆ.ಈ ಪ್ರಕರಣವು 'ಬ್ಲೂ ಡ್ರಮ್ ಮರ್ಡರ್' ಎಂದೇ ಕುಖ್ಯಾತಿ ಪಡೆದಿತ್ತು. ಘಟನೆ ಬಳಿಕ ಮುಸ್ಕಾನ್ ಅವರ ಕುಟುಂಬಸ್ಥರು ಆಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದರು. ಜೈಲಿನಲ್ಲಿದ್ದ ಆಕೆಯನ್ನು ನೋಡಲು ಒಮ್ಮೆಯೂ ಭೇಟಿ ನೀಡಿರಲಿಲ್ಲ.Blue Drum Murder Case: ಊರು ಬಿಡಲು ನಿರ್ಧರಿಸಿದ ಆರೋಪಿ ಮುಸ್ಕಾನ್ ಕುಟುಂಬ
Read the complete story at Prajavani