ರಷ್ಯಾ ಜೊತೆ ಡೀಸೆಲ್ ಒಪ್ಪಂದ ನಮಗಾಗಿ ಅಲ್ಲ, ಜಗತ್ತಿಗೆ: ಟ್ರಂಪ್ ಸಮರ್ಥನೆ
ವಾಷಿಂಗ್ಟನ್: ತೈಲ ಬೆಲೆ ಏರಿಕೆಯಿಂದ ಜಾಗತಿಕ ಮಾರುಕಟ್ಟೆ ತೊಂದರೆ ಅನುಭವಿಸುತ್ತಿದೆ, ಹೀಗಾಗಿ ಜಾಗತಿಕ ಮಾರುಕಟ್ಟೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ರಷ್ಯಾದೊಂದಿಗೆ ಮಾಡಿಕೊಂಡ ಡೀಸೆಲ್ ಒಪ್ಪಂದದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅವರು ಸಮಜಾಯುಷಿ
ವಾಷಿಂಗ್ಟನ್: ತೈಲ ಬೆಲೆ ಏರಿಕೆಯಿಂದ ಜಾಗತಿಕ ಮಾರುಕಟ್ಟೆ ತೊಂದರೆ ಅನುಭವಿಸುತ್ತಿದೆ, ಹೀಗಾಗಿ ಜಾಗತಿಕ ಮಾರುಕಟ್ಟೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ರಷ್ಯಾದೊಂದಿಗೆ ಮಾಡಿಕೊಂಡ ಡೀಸೆಲ್ ಒಪ್ಪಂದದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅವರು ಸಮಜಾಯುಷಿ ನೀಡಿದ್ದಾರೆ.ಇರಾನ್ಗೆ ಸಹಾಯ ಮಾಡಿದರೆ ರಷ್ಯಾ, ಚೀನಾ ಹೆಚ್ಚಿನದನ್ನು ಕಳೆದುಕೊಳ್ಳಲಿವೆ –ಟ್ರಂಪ್ರಷ್ಯಾ 3 ಲಕ್ಷ ಟನ್ಗಿಂತಲೂ ಹೆಚ್ಚು ಡೀಸೆಲ್ ಪೂರೈಸಲಿದೆ ಎಂದು ಟ್ರಂಪ್ ಅಕ್ಟೋಬರ್ 9ರಂದು ಘೋಷಿಸಿದ್ದರು. ಇದಾದ ಬಳಿಕ ನವೆಂಬರ್ನಲ್ಲಿ ಹೆಚ್ಚುವರಿಯಾಗಿ 5 ಲಕ್ಷ ಟನ್ ಮತ್ತು ಬಳಿಕ 10 ಲಕ್ಷ ಟನ್ ಡೀಸೆಲ್ ಪೂರೈಕೆಯಾಗಲಿದೆ ಎಂದಿದ್ದರು.ಅಮೆರಿಕದಲ್ಲಿ ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಕಾಂಗ್ರೆಸ್ ಚುನಾವಣೆಗೂ ಮುನ್ನ ಒಪ್ಪಂದ ಮಾಡಿಕೊಳ್ಳಲಾಗಿದೆ.ಕಳೆದ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿ ಅನಿರೀಕ್ಷಿತ ಒಪ್ಪಂದವನ್ನು ಘೋಷಿಸಿದ್ದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಈ ಡೀಸೆಲ್ ಒಪ್ಪಂದ ನಮಗಾಗಿ ಅಲ್ಲ. ಡೀಸೆಲ್ ಅನ್ನು ಜಗತ್ತಿನ ರಾಷ್ಟ್ರಗಳು ಕೊಂಡುಕೊಳ್ಳಬಹುದು’ ಎಂದರು.ಇಂಧನ ಕದನ ವಿರಾಮಕ್ಕೆ ಒಪ್ಪಿದ ರಷ್ಯಾ–ಉಕ್ರೇನ್: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ‘ಬೆಲೆ ಹೆಚ್ಚಳದಿಂದ ಜಾಗತಿಕ ಮಾರುಕಟ್ಟೆ ತೊಂದರೆ ಅನುಭವಿಸಿದೆ. ಡೀಸೆಲ್ ಸಂಸ್ಕರಣಾಗಾರಗಳನ್ನು ಸ್ಥಗಿತಗೊಳಿಸಿದರೆ ಅದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.ರಷ್ಯಾ ವಿರುದ್ಧ ವ್ಯಾಪಕ ನಿರ್ಬಂಧಗಳನ್ನು ವಿಧಿಸಲು ಟ್ರಂಪ್ ಅವರಿಗೆ ಅಮೆರಿಕ ಸಂಸತ್ತು ಅಧಿಕಾರ ನೀಡಿದ ಮೂರು ವಾರಗಳ ಬಳಿಕ ಈ ಒಪ್ಪಂದ ಘೋಷಣೆಯಾಗಿದೆ. ಇದಕ್ಕೆ ಹಲವು ಸೆನೆಟರ್ಗಳು ವಿರೋಧ ವ್ಯಕ್ತಪಡಿಸಿದ್ದು, ‘ನಮ್ಮ ಎದುರಾಳಿಗೆ ನೀಡಿದ ಉಡುಗೊರೆ, ನಮ್ಮ ಮಿತ್ರರಾಷ್ಟ್ರಗಳಿಗೆ ಮಾಡಿದ ದ್ರೋಹ. ನೀವು ಮಾಡಿಕೊಂಡ ಒಪ್ಪಂದವು ನ್ಯಾಯಸಮ್ಮತವಲ್ಲ. ಅಮೆರಿಕನ್ನರಿಗೂ ಇದರಿಂದ ಪ್ರಯೋಜನವಾಗುವುದಿಲ್ಲ’ ಎಂದು ಸೆನೆಟರ್ಗಳು ಪತ್ರದಲ್ಲಿ ತಿಳಿಸಿದ್ದಾರೆ.ಯುರೋಪಿಯನ್ ಸಂಸತ್ತಿನ ಹೊರಗೆ ಟ್ರಂಪ್ ಬೆತ್ತಲೆ ಪ್ರತಿಮೆ ಅನಾವರಣ